ಬೆಳಗಾವಿ: ಗೋವಾ ರಾಜ್ಯದ ನೀರಾವರಿ ಸಚಿವ ವಿನೋದ ಪಾಲೇಕರ್ ಅಕ್ರಮವಾಗಿ ಕರ್ನಾಟಕಕ್ಕೆ ಬಂದು ಕಳಸಾ ನಾಲಾ ಪ್ರದೇಶದಲ್ಲಿ ಕಾಮಗಾರಿ ಪರಿಶೀಲನೆ ಮಾಡಿರುವುದಲ್ಲದೇ ರಾಜ್ಯದ ವಿರುದಟಛಿ ಅವಹೇಳನಕಾರಿ ಪದ ಬಳಕೆ ಮಾಡಿ ಕನ್ನಡಿಗರಿಗೆ ಅವಮಾನ ಮಾಡಿದ್ದಾರೆ. ಕೂಡಲೇ ಗೋವಾ ಮುಖ್ಯಮಂತ್ರಿ ಮನೋಹರ ಪರ್ರಿಕರ್ ಕರ್ನಾಟಕದ ಜನರ ಕ್ಷಮೆ ಕೇಳಬೇಕು ಎಂದು ಜಲಸಂಪನ್ಮೂಲ ಸಚಿವ ಡಾ.ಎಂ.ಬಿ.ಪಾಟೀಲ ಆಗ್ರಹಿಸಿದರು.
ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಗೋವಾ ಸಚಿವರಿಗೆ ತಮ್ಮ ಜವಾಬ್ದಾರಿಯ ಅರಿವಿಲ್ಲ. ಕರ್ನಾಟಕದ ಜನ ಭಾವನೆ, ಸ್ವಾಭಿಮಾನಕ್ಕೆ ಧಕ್ಕೆ ತಂದಿದ್ದಾರೆ. ಮಹದಾಯಿ ನದಿ ಪಾತ್ರದಲ್ಲಿ ಕಳಸಾ-ಬಂಡೂರಿ ಯೋಜನೆಗೆ ಸಂಬಂಧಿಸಿದಂತೆ ಕರ್ನಾಟಕ ಸರ್ಕಾರವು ಅಕ್ರಮವಾಗಿ ಕಾಮಗಾರಿ ನಡೆಸುತ್ತಿದೆ ಎಂದು ಸಚಿವ ಪಾಲೇಕರ್ ಅವರ ಆರೋಪದಲ್ಲಿ ಯಾವುದೇ ಹುರುಳಿಲ್ಲ. ಜನರ ದಿಕ್ಕು ತಪ್ಪಿಸಲು ಕರ್ನಾಟಕದ ಮೇಲೆ ಸುಳ್ಳು ಆರೋಪ ಮಾಡುತ್ತಿದ್ದಾರೆ ಎಂದರು.
ಕಾಮಗಾರಿ ಪರಿಶೀಲನೆ ಮಾಡುವುದಿದ್ದರೆ ಗೋವಾ ಸರ್ಕಾರವು ಕರ್ನಾಟಕ ಸರ್ಕಾರದ ಜತೆ ಮಾತುಕತೆ ನಡೆಸಿ ಶಿಷ್ಟಾಚಾರದ ಪ್ರಕಾರ ಪರಿಶೀಲನೆ ನಡೆಸಬಹುದಿತ್ತು. ಈ ರೀತಿ ನೇರವಾಗಿ ಬಂದು ಪರಿಶೀಲಿಸಿರುವುದು ಮತ್ತು ಕರ್ನಾಟಕದ ಜನರ ವಿರುದ್ಧ ಅವಹೇಳನಕಾರಿ ರೀತಿಯಲ್ಲಿ ಮಾತನಾಡುವುದು ಸಮಂಜಸವಲ್ಲ.
ಕರ್ನಾಟಕ ಸರ್ಕಾರದ ಗಮನಕ್ಕೆ ತರದೇ ಮಹದಾಯಿ ನದಿ ಪಾತ್ರಕ್ಕೆ ಭೇಟಿ ನೀಡಿದ್ದ ಗೋವಾ ಜಲಸಂಪನ್ಮೂಲ ಸಚಿವರು, ಕಳಸಾ- ಬಂಡೂರಿ ನಾಲಾಗೆ ಸಂಬಂಧಿಸಿದಂತೆ ಹಳೆಯ ಕಾಮಗಾರಿ ಪರಿಶೀಲಿಸಿ ಕರ್ನಾಟಕದ ವಿರುದಟಛಿ ಸುಳ್ಳು ಆರೋಪ ಮಾಡಿದ್ದಾರೆ. ಕಳಸಾ ನಾಲಾ ಪ್ರದೇಶದಲ್ಲಿ ಆಗಸ್ಟ್ ನಂತರದಲ್ಲಿ ಯಾವುದೇ ಕಾಮಗಾರಿ ಕೈಗೊಂಡಿಲ್ಲ. ಈ ಬಗ್ಗೆ ಮೂರನೇ ತಂಡ ಕಳುಹಿಸಿ ಪರಿಶೀಲನೆ ನಡೆಸಬಹುದು ಎಂದಿದ್ದಾರೆ.
ಕರ್ನಾಟಕದ ಬಗ್ಗೆ ಅವಹೇಳನಕಾರಿಯಾಗಿ ಮಾತನಾಡಿರುವ ಗೋವಾ ರಾಜ್ಯದ ನೀರಾವರಿ ಸಚಿವ ವಿನೋದ ಪಾಲೇಕರ್‌ಗೆ ಜವಾಬ್ದಾರಿಯ ಅರಿವಿಲ್ಲ. ರಾಜ್ಯದ ಜನರ ಸ್ವಾಭಿಮಾನಕ್ಕೆ ಧಕ್ಕೆಯಾಗಿದೆ. ಕೂಡಲೇ ಕರ್ನಾಟಕದ ಜನತೆಯ ಕ್ಷಮೆ ಕೇಳಬೇಕು.
– ರಮೇಶ ಜಾರಕಿಹೊಳಿ
ಸಹಕಾರ ಸಚಿವ