Advertisement
ಟೋಣಪಿನಾಥ ಸಮಾಜದ ಹಿರಿಯರಾದ ಚಂದ್ರು ಗೊಂದಿ, ಪುರಸಭೆ ಮಾಜಿ ಅಧ್ಯಕ್ಷ ಬಸವರಾಜ ರಾಯರ ಮಾತನಾಡಿ ಬಣಜಿಗ ಸಮಾಜದ ಸ್ವಾಭಿಮಾನಕ್ಕೆ ಧಕ್ಕೆ ತಂದಿರುವ ಇಬ್ಬರ ವಿರುದ್ಧ ಹುನಗುಂದ ಮತ್ತು ವಿಜಯಪುರ ಜಿಲ್ಲೆಯ ವಿಧಾನಸಭಾ ಕ್ಷೇತ್ರದ ಮತದಾರರು ಮುಂಬರುವ ಚುನಾವಣೆಯಲ್ಲಿ ಅವರ ವಿರುದ್ಧ ಮತಚಲಾಯಿಸುವ ಮೂಲಕ ಅವರಿಗೆ ತಕ್ಕ ಪಾಠ ಕಲಿಸಬೇಕೆಂದು ಒತ್ತಾಯಿಸಿದರು.
ಮಹಾದೇವಿ ಹುಕ್ಕೇರಿ, ಕಲ್ಪನಾ ಬರಗಿ ಮಾತನಾಡಿದರು. ಬುಧವಾರ ಪಟ್ಟಣದಲ್ಲಿ ಬಸವ ವೃತ್ತದಿಂದ ಪ್ರಾರಂಭವಾದ ಬೃಹತ್ ಪ್ರತಿಭಟನಾ ಮೆರವಣಿಗೆಯು ಡಬಲ್ ರಸ್ತೆ, ವಿವೇಕ ವೃತ್ತ, ನಡಚೌಕಿ, ಜವಳಿ ಬಜಾರ, ಗಾಂಧಿವೃತ್ತ, ಚನ್ನಮ್ಮ ವೃತ್ತ ಮಾರ್ಗವಾಗಿ ಪುರಸಭೆವರೆಗೆ ಬೃಹತ್ ಮೆರವಣಿಗೆ ನಡೆಸಿ, ಪುರಸಭೆ ಮುಖ್ಯಾಧಿಕಾರಿ ಜೆ.ಎಸ್.ಈಟಿ ಅವರ ಮೂಲಕ ಸರ್ಕಾರಕ್ಕೆ ಮನವಿ ಸಲ್ಲಿಸಿ, ಇಬ್ಬರ ವಿರುದ್ಧ ಕಾನೂನು ಕ್ರಮಕ್ಕೆ ಒತ್ತಾಯಿಸಿದರು. ಮಾನವ ಸರಪಳಿ ಮೂಲಕ ಪ್ರತಿಭಟನೆ
Related Articles
Advertisement
ಮಹಾಲಿಂಗಪ್ಪ ಅವರಾದಿ, ಬಸವರಾಜ ಘಟ್ನಟ್ಟಿ, ಮಹಾಂತೇಶ ಪಟ್ಟಣಶೆಟ್ಟಿ, ಅಶೋಕ ಅಂಗಡಿ, ಬಸವರಾಜ ಪಶ್ಚಾಪೂರ, ಮಹಾದೇವಪ್ಪ ಬಂಡಿ, ಮಲ್ಲು ಕುಳ್ಳೋಳ್ಳಿ, ಚನ್ನಪ್ಪ ಡಿ.ಪಟ್ಟಣಶೆಟ್ಟಿ, ಕೇದಾರಿ ಹುರಕಡ್ಲಿ, ರಾಜು ಬರಗಿ, ಶಿವಾನಂದ ಪರಪ್ಪನವರ, ಚಂದಾ ಅಷ್ಟಗಿ, ಶಶಿಧರ ನಕಾತಿ, ಮಹಾಂತೇಶ ಘಟ್ನಟ್ಟಿ, ಸಿದ್ದು ಬೆನ್ನೂರ, ಪ್ರವೀಣ ಕುಳ್ಳೊಳ್ಳಿ, ಮಹಾಲಿಂಗಪ್ಪ ಹೊಸೂರ, ಮಹಾಲಿಂಗಪ್ಪ ಹಾವೇರಿ, ಸಂಜು ಅಂಗಡಿ, ರಮೇಶ ಹರಕಂಗಿ, ಸುರೇಶ ಬಂಡಿ, ಪ್ರಕಾಶ ಕೋರಿಶೆಟ್ಟಿ, ರವಿ ಬಂಡಿ, ಸಂಗಪ್ಪ ಲಿಗಾಡಿ, ಬಸವರಾಜ ಕಬ್ಬೂರ, ಬಸವರಾಜ ಕರೆಹೊನ್ನ, ಸಿದ್ದು ನಕಾತಿ, ನಳಿನಿ ಹಂಚಿನಾಳ, ವಿಜಯಲಕ್ಷ್ಮೀ ಕುಳ್ಳೋಳ್ಳಿ, ಸ್ನೇಹಲ್ ಅಂಗಡಿ, ಚಿನ್ನಮ್ಮ ಕುಳ್ಳೋಳ್ಳಿ, ರಂಜನಾ ವಜ್ಜರಮಟ್ಟಿ, ಲಕ್ಷ್ಮೀ ಅಂಗಡಿ ಸೇರಿದಂತೆ ರಬಕವಿ, ಬನಹಟ್ಟಿ, ತೇರದಾಳ, ಕುಳ್ಳೊಳ್ಳಿ ಸೇರಿದಂತೆ ಸುತ್ತಮುತ್ತಲಿನ ಗ್ರಾಮಗಳ ಸಮಾಜದ ಹಿರಿಯರು, ಯುವಕರು, ಮಹಿಳೆಯರು ಸೇರಿದಂತೆ ಸಾವಿರಾರು ಜನರು ಪ್ರತಿಭಟನೆಯಲ್ಲಿ ಭಾಗವಹಿಸಿದ್ದರು.