Advertisement
ತಾಲೂಕು ಆರೋಗ್ಯಾಧಿಕಾರಿ ಡಾ| ಮಹ್ಮದ್ ಗಫಾರ್ ಪ್ರತಿಭಟನೆ ಉದ್ದೇಶಿಸಿ ಮಾತನಾಡಿ, ಪಟ್ಟಣದ ಸರಕಾರಿ ಸಾರ್ವಜನಿಕ ಆಸ್ಪತ್ರೆಯಲ್ಲಿ ಕರ್ತವ್ಯ ನಿರತ ವೈದ್ಯರ ಮೇಲೆ ಕುಡಿದ ಅಮಲಿನಲ್ಲಿ ಬಂದ ಗಾಯಾಳುವಿನ ಸಂಬಂಧಿಕರು ಮತ್ತು ಪೊಲೀಸ್ ಪೇದೆಯೊಬ್ಬರು ಹಲ್ಲೆ ನಡೆಸಿದ್ದಾರೆ ಎಂದು ಆಕ್ರೋಶ ವ್ಯಕ್ತಪಡಿಸಿದರು.
Related Articles
Advertisement
ಈ ಕುರಿತು ಪೊಲೀಸರಿಗೆ ಅನೇಕ ಸಲ ದೂರು ನೀಡಿದರೂ ಆರೋಪಿಗಳ ವಿರುದ್ಧ ಯಾವುದೇ ಕ್ರಮ ಕೈಗೊಂಡಿಲ್ಲ ಎಂದು ಆಕ್ರೋಶವ್ಯಕ್ರಪಡಿಸಿದರು. ಮಕ್ಕಳ ರಜ್ಞ ಡಾ| ಸಂತೋಷ ಪಾಟೀಲ ಮಾತನಾಡಿ, ಆಸ್ಪತ್ರೆ ಆವರಣದಲ್ಲಿ ಬೆಳೆದ ಗಾರ್ಡನ್ ದಲ್ಲಿ ಕೆಲವರು ಮದ್ಯಪಾನ ಮಾಡುತ್ತಿದ್ದರು. ಇದನ್ನು ತಡೆಯಲು ಹೋದ ಆಸ್ಪತ್ರೆ ಸಿಬ್ಬಂದಿ ಮೇಲೆ ಹಾಗೂ ನನ್ನ ಮೇಲೆ ಹಲ್ಲೆ ನಡೆಸಿದ್ದಾರೆ. ರಾತ್ರಿ ವೇಳೆ ಕುಡಿದ ಅಮಲಿನಲ್ಲಿರುವ ರೋಗಿಗಳೇ ಹೆಚ್ಚಾಗಿ ಬರುತ್ತಾರೆ. ಹಿಂದೆ ಬಂದವರು ವೈದ್ಯಕೀಯ ಪರೀಕ್ಷೆ ನಡೆಸಲು ಬಿಡುವುದಿಲ್ಲ. ನಮಗೆ ಪೊಲೀಸ್ ರಕ್ಷಣೆ ಅಗತ್ಯವಾಗಿದೆ ಎಂದು ಹೇಳಿದರು.
ಆಸ್ಪತ್ರೆ ಮುಖ್ಯ ಆಡಳಿತಾಧಿಕಾರಿ ಡಾ| ಸಂಜಯ ಗೋಳೆ ಮಾತನಾಡಿ, ಡಾ| ಚಂದ್ರು ಮತ್ತು ಶುಶ್ರೂಕಿಯರಾದ ಸತ್ಯಮ್ಮ, ನಾಗರತ್ನಮ ಎನ್ನುವರ ಮೇಲೆ ಹಲ್ಲೆ ಮಾಡಿರುವ ಆರೋಪಿಗಳ ವಿರುದ್ಧ ಕಾನೂನು ಕ್ರಮ ಕೈಗೊಳ್ಳಬೇಕು ಎಂದು ಆಗ್ರಹಿಸಿ ಜಿಲ್ಲಾ ಆರೋಗ್ಯಾಧಿಕಾರಿ ಡಾ| ಮಾಧವರಾವ್ ಪಾಟೀಲ, ತಹಶೀಲ್ದಾರ್ ಪಂಡಿತ ಬಿರಾದಾರ ಅವರಿಗೆ ಮನವಿ ಸಲ್ಲಿಸಿದರು.
ಡಾ| ಜಗದೀಶ್ಚಂದ್ರ ಬುಳ್ಳ, ಡಾ| ಬೀರಪ್ಪ ಪೂಜಾರಿ, ಡಾ| ಲಕ್ಮಣ ಜಾಧವ್,ಡಾ| ದೀಪಾ ಪವಾರ, ಡಾ| ಪಲ್ಲವಿ, ಸರಕಾರಿ ನೌಕರ ಸಂಘದ ಅಧ್ಯಕ್ಷ ಶ್ರೀನಿವಾಸ ಪಾಟೀಲ, ಶಿವಕುಮಾರ ಕೊಳ್ಳೂರ, ಕೆ.ಎಂ, ಬಾರಿ, ಶೇಖ ಭಕ್ತಿಯಾರ , ಸಂತೋಷ ಗುತ್ತೇದಾರ, ಸಂಜೀವ ಪಾಟೀಲ ಸೇರಿದಂತೆ ಒಟ್ಟು 41 ಸಿಬ್ಬಂದಿ ಪ್ರತಿಭಟನೆಯಲ್ಲಿ ಭಾಗವಹಿಸಿದ್ದರು. ವೈದ್ಯರು ನೀಡಿದ ದೂರಿನ ಮೇರೆಗೆ ಚಿಂಚೋಳಿ ಠಾಣೆ ಪಿಎಸ್‌ಐ ಮೌನೇಶ ದೊಡ್ಡಮನಿ ಪ್ರಕರಣ ದಾಖಲಿಸಿಕೊಂಡಿದ್ದಾರೆ.
ಪ್ರಕರಣ ದಾಖಲುವೈದ್ಯರ ಮೇಲೆ ಹಲ್ಲೆ ನಡೆಸಿದ ಮೀಸಲು ಪೊಲೀಸ್ ಪೇದೆ ಆನಂದ ನಾಗಪ್ಪ ನಿಮಾಹೊಸಳ್ಳಿ, ರೇವಣಸಿದ್ದಪ್ಪ
ರಾಮಣ್ಣ ಆನಂದಿ, ಚಾಂದಪಾಶಾ ಖಾಜಾಸಾಬ ಕರ್ಚಖೇಡ, ಸಾಬಣ್ಣ ಸುಬ್ಬಣ್ಣ ಎನ್ನುವರನ್ನು ಬಂಧಿಸಿ ನ್ಯಾಯಾಂಗ ವಶಕ್ಕೆ ಒಪ್ಪಿಸಲಾಗಿದೆ. ಮೀಸಲು ಪೊಲೀಸ್ ಪೇದೆ ಆನಂದ ನಾಗಪ್ಪ ಎನ್ನುವರನ್ನು ಸೇವೆಯಿಂದ ಅಮಾನತು ಮಾಡುವಂತೆ ಜಿಲ್ಲಾ ಪೊಲೀಸ್ ವರಿಷ್ಠಾಧಿ ಕಾರಿಗೆ ವರದಿ ಸಲ್ಲಿಸಲಾಗುವುದು. ಎಲ್ಲರ ವಿರುದ್ಧ ರೌಡಿಶೀಟ್ ಪ್ರಕರಣ ದಾಖಲಿಸಲಾಗುವುದು.
ಎಚ್.ಎಂ. ಇಂಗಳೇಶ್ವರ, ಸಿಪಿಐ