ತುರುವೇಕೆರೆ: ಗಣಿಗಾರಿಕೆಯನ್ನು ನಿಲ್ಲಿಸುವಂತೆ ಕಳೆದ 21ದಿನಗಳಿಂದ ಹೋರಾಟ ಕೈಗೊಂಡು,ಕೋಳಘಟ್ಟದಿಂದ ತಾಲೂಕು ಕಚೇರಿಯವರೆಗೂಪಾದಯಾತ್ರೆ ನಡೆಸಿ, ಕಳೆದ ನಾಲ್ಕು ದಿನಗಳಿಂದ ಅಹೋರಾತ್ರಿ ಧರಣಿ ನಡೆಸಿದ ರೈತರು, ಗುರುವಾರ ತಾಲೂಕು ಕಚೇರಿ ಆವರಣದಲ್ಲಿ ದನಕರು ಕೂಡಿ ಹಾಕುವುದರ ಮೂಲಕ ಪ್ರತಿಭಟನೆ ನಡೆಸಿದರು.
ಪ್ರತಿಭಟನಾ ಸ್ಥಳಕ್ಕೆ ಕೆಪಿಸಿಸಿ ವಕ್ತಾರ ಮುರಳೀಧರ್ ಹಾಲಪ್ಪ ಭೇಟಿ ನೀಡಿಮಾತನಾಡಿ, ಜಿಲ್ಲಾಡಳಿತ ರೈತರ ಬಾಳಿನಲ್ಲಿಚೆಲ್ಲಾಟವಾಡುತ್ತಿದೆ. ಇಲ್ಲಿಯ ಶಾಸಕರು,ಸಂಸದರು ಕಾಣೆಯಾದಂತೆ ಕಾಣುತ್ತಿದೆ. ಈ ಗಣಿಗಾರಿಕೆಯಲ್ಲಿ ಕಾಣದ ಕೈಗಳ ಪ್ರಭಾವ ಹೆಚ್ಚಾಗಿದ್ದು, ಪ್ರತಿಭಟನಾಕಾರರನ್ನು ಹತ್ತಿಕ್ಕುವ ಹುನ್ನಾರ ನಡೆದಿದೆ.
ಗಣಿಗಾರಿಕೆ ನಡೆಸಲು ಇದುವರೆಗೂ ಗ್ರಾಪಂ ಅನುಮೋದನೆ ಪಡೆದಿಲ್ಲ.ಗಣಿಗಾರಿಕೆ ನಡೆಯುತ್ತಿದ್ದರೂ, ಆರೋಗ್ಯ ಇಲಾಖೆ, ಪರಿಸರ ಇಲಾಖೆ, ಕಂದಾಯ ಇಲಾಖೆಅಧಿಕಾರಿಗಳೂ ಸಹ ಭೇಟಿ ನೀಡದೆ ಯಾವುದೇ ಕ್ರಮ ಕೈಗೊಂಡಿಲ್ಲ ಎಂದು ದೂರಿದರು.
ರೈತ ಮಹಿಳೆಯರ ಮೇಲೆ ದೌರ್ಜನ್ಯ: ಕಾನೂನನ್ನು ಗಾಳಿಗೆ ತೂರಿ ರೈತರನ್ನು ಮತ್ತು ರೈತ ಮಹಿಳೆಯರ ಮೇಲೆ ದೌರ್ಜನ್ಯ ಎಸಗುತ್ತಿದ್ದಾರೆ.ಕಳೆದ ಐದು ದಿನಗಳಿಂದ ರೈತ ಮಹಿಳೆಯರು ತಾಲೂಕು ಕಚೇರಿ ಮುಂಭಾಗ ಧರಣಿ ಸತ್ಯಾಗ್ರಹನಡೆಸುತ್ತಿದ್ದರೂ, ಅವರ ಕಷ್ಟ ಸುಖಗಳನ್ನುತಾಲೂಕು ಆಡಳಿತ ಮತ್ತು ಜಿಲ್ಲಾಡಳಿತ ಕೇಳುತ್ತಿಲ್ಲ. ತಾತ್ಕಾಲಿಕವಾಗಿ ಈಗಣಿಗಾರಿಕೆಯನ್ನು ನಿಲ್ಲಿಸಿ ಸಾಧಕ-ಬಾಧಕಗಳಬಗ್ಗೆ ಜಿಲ್ಲಾಧಿಕಾರಿಗಳ ಜೊತೆ ಚರ್ಚಿಸಬೇಕೆಂದು ಸ್ಥಳಕ್ಕೆ ಆಗಮಿಸಿದ ಉಪಭಾಗಾಧಿಕಾರಿ ದಿಗ್ವಿಜಯ್ ಅವರಿಗೆ ಮನವಿ ಮಾಡಿದರು.
ಪರಿಷತ್ ಮಾಜಿ ಸದಸ್ಯ ಬೆಮೆಲ್ ಕಾಂತರಾಜು, ಕಾಂಗ್ರೆಸ್ ಮುಖಂಡ ಚೌದ್ರಿ ರಂಗಪ್ಪ, ವಸಂತಕುಮಾರ್, ಕಾಂಗ್ರೆಸ್ ಅಧ್ಯಕ್ಷ ಪ್ರಸನ್ನಕುಮಾರ್, ರೈತ ಮುಖಂಡ ಶ್ರೀನಿವಾಸ್ ಗೌಡ, ಅಸ್ಲಾಂ, ನಾಗೇಂದ್ರ, ಜೆಡಿಎಸ್ ಮುಖಂಡ ಚಂದ್ರೇಶ್, ಪಿಕಾರ್ಡ್ ಮಾಜಿ ಅಧ್ಯಕ್ಷ ಉಮೇಶ್ ಹಾಗೂ ಮತ್ತಿತರರು ಇದ್ದರು.