ಶ್ರೀನಿವಾಸಪುರ: ಹೋರಾಟದಫಲವಾಗಿ ಅಂಬೇಡ್ಕರ್ ಭವನಕ್ಕೆಮೀಸಲಾದ ಜಾಗದಲ್ಲಿ ಕಾಮಗಾರಿಮಾಡದೇ ನಿರ್ಲಕ್ಷ್ಯ ತಾಳಿರುವತಾಲೂಕು ಆಡಳಿತದ ವಿರುದ್ಧ ಕೆಲವುದಲಿತ ಸಂಘಟನೆಗಳ ಮುಖಂಡರುಪ್ರತಿಭಟನೆ ನಡೆಸಿದರು.
ತಾಲೂಕು ಕಚೇರಿ ಮುಂದೆ ದಲಿತಸಂಘಟನೆಗಳ ಮುಖಂಡರುಅಂಬೇಡ್ಕರ್ ಜಯಂತಿಯಂದು ಕಪ್ಪುಪಟ್ಟಿ ಧರಿಸಿ ಪ್ರತಿಭಟನೆ ನಡೆಸಲುಮುಂದಾಗುತ್ತಿದ್ದಂತೆ ತಹಶೀಲ್ದಾರ್‌ಎಸ್.ಎಂ.ಶ್ರೀನಿವಾಸ್ ಆಗಮಿಸಿದರು. ಸಂಬಂಧಿಸಿದ ಭವನದ ವಿಷಯತಿಳಿಸಲು ಮುಂದಾಗುತ್ತಿದ್ದಂತೆಮಾತನಾಡಲು ಅವಕಾಶ ಕೊಡದೆಆಡಳಿತ ವಿರುದ್ಧ ಆರೋಪಗಳಸುರಿಮಳೆಗೈದರು.
ಫೆನ್ಸಿಂಗ್ ಮಾಡಿಲ್ಲ:ಹಲವು ದಶಕಗಳಹೋರಾಟದ ಫಲವಾಗಿ ಪದವಿ ಹಾಸ್ಟೆಲ್‌ಬಳಿ ಅಂಬೇಡ್ಕರ್ ಭವನಕ್ಕಾಗಿ 2 ಎಕರೆಜಮೀನು ಮಂಜೂರುಮಾಡಲಾಯಿತು. ನಂತರ ಈಜಮೀನಿಗೆ ಫೆನ್ಸಿಂಗ್ ಹಾಕಲುಭವನಕ್ಕಾಗಿ ಹಣ ಮಂಜೂರಾಗಿದ್ದುಏನಾಯಿತೋ ಏನೋ ಗೊತ್ತಿಲ್ಲ.ಸಂಬಂಧಿಸಿದ ಅಧಿಕಾರಿಗಳು , ಸಮಾಜಕಲ್ಯಾಣ ಇಲಾಖೆ ಜವಾಬ್ದಾರಿಯಿಂದನುಣುಚಿಕೊಂಡಿದೆ ಎಂದು ಆರೋಪಿಸಿದರು.
ಭವನ ನನೆಗುದಿಗೆ ಬಿದ್ದಿದೆ. ಅಲ್ಲದೇಸದರಿ ಭವನಕ್ಕೆ ಮಂಜೂರಾದ ಜಾಗದಲ್ಲಿಒಂದೆರೆಡು ಮನೆಗಳನ್ನು ಅಕ್ರಮವಾಗಿನಿರ್ಮಿಸಿಕೊಂಡಿರುವವರ ವಿರುದ್ಧ ಕ್ರಮಕೈಗೊಳ್ಳಲು ವಿಫಲರಾಗಿದ್ದಾರೆಂದರು.ಸಮಜಾಯಿಷಿಗೆ ಸೊಪ್ಪುಹಾಕದ ದಲಿತಮುಖಂಡರು ಕ್ರಾಂತಿಗೀತೆ ಹಾಡುವಜತೆಯಲ್ಲಿ ಆಡಳಿತದ ನಿರ್ಲಕ್ಷದ ಬಗ್ಗೆಘೋಷಣೆ ಕೂಗಿದರು.
ಮತ್ತೂಂದಡೆಜಿಲ್ಲಾಧಿಕಾರಿಗೆ ತಹಶೀಲ್ದಾರರು ಮೊಬೈಲ್‌ಮೂಲಕ ಮಾತುಕತೆ ನಡೆಸಿಸಂಬಂಧಪಟ್ಟಂತೆ ಕ್ರಮ ಕೈಗೊಳ್ಳುವ ಭರವಸೆನೀಡಿದ ನಂತರ ಪ್ರತಿಭಟನೆಹಿಂತೆಗೆದುಕೊಳ್ಳಲಾಯಿತು. ರಾಮಾಂಜಮ್ಮ, ಈರಪ್ಪ, ಟಿ. ನಾರಾಯಣಸ್ವಾಮಿ,ಆನಂದ್, ಕೃಷ್ಣಪ್ಪ, ವೆಂಕಟೇಶ್,ಹನುಮಂತಪ್ಪ, ತಿಮ್ಮಯ್ಯ, ಪೆದ್ದಪಲ್ಲಿಈರಪ್ಪ, ನರಸಿಂಹ ಇತರರು ಇದ್ದರು.