Advertisement

ಅಧಿಕಾರಿಗಳು ಫೋಟೊಗಷ್ಟೇ ಸೀಮಿತವಾಗಿದ್ದಾರೆ..: ರಾಮನಗರ ನಗರಸಭೆಗೆ ಸದಸ್ಯರ ಮುತ್ತಿಗೆ

01:24 PM Sep 05, 2022 | Team Udayavani |

ರಾಮನಗರ: ನಗರದಲ್ಲಿ ಪ್ರವಾಹ ಸಂಭವಿಸಿದ್ದು ನಾಗರಿಕರ ಬದುಕು‌ ದುಸ್ತರವಾಗಿದೆ. ಆದರೆ ಸಂಬಂಧಿಸಿದ ನಗರಸಭೆಯ ಅಧಿಕಾರಿಗಳು ಸ್ವಚ್ಚತಾ‌ ಕಾರ್ಯ ಚುರುಕುಗೊಳಿಸುತ್ತಿಲ್ಲ. ದೊಡ್ಡವರು ಬಂದಾಗ ಫೋಟೋಗಷ್ಟೇ ಸೀಮಿತವಾಗಿದ್ದಾರೆ. ನಮ್ಮ ವಾರ್ಡ್ ಗಳು ಗಬ್ಬು ನಾರುತ್ತಿವೆ ಎಂದು ಆರೋಪಿಸಿ ನಗರಸಭೆಯ ಸದಸ್ಯರು ಒಕ್ಕೋರಲಿನಲ್ಲಿ‌ ನಗರವಾಸಿಗಳ ಜೊತೆಗೂಡಿ ನಗರಸಭೆಗೆ ಮುತ್ತಿಗೆ ಹಾಕಿ ಆಕ್ರೋಶ ಹೊರಹಾಕಿದ ಘಟನೆ ಸೋಮವಾರ ನಡೆಯಿತು.‌

Advertisement

ನಂತರ ನಗರಸಭೆಯ ಮೀಟಿಂಗ್ ಹಾಲ್‌ ನಲ್ಲಿ ನಡೆದ ಸಂಧಾನ ಸಭೆಯಲ್ಲಿ ಸಮಸ್ತೆಗಳ‌ ಮಹಾಪೂರವನ್ನೇ ಹರಿಸಿದ ಸಾರ್ವಜನಿಕರು ಮತ್ತು ನಗರಸಭೆ ಸದಸ್ಯರು ಕಸದ ರಾಶಿ ಹೆಚ್ಷಾಗಿದೆ. ನೀರು‌ ಸರಬರಾಜು ಮಾಡುತ್ತಿಲ್ಲ. ಕ್ಲೀನಿಂಗ್ ಕಾಮಗಾರಿ‌ ವಿಳಂಬ ಮಾಡುತ್ತಿದ್ದಾರೆ. ನಗರದಲ್ಲಿ ವಾಸನೆ ಹೆಚ್ಚಾಗುತ್ತಿದೆ. ಸಂಘ ಸಂಸ್ಥೆಗಳು ಬರದಿದ್ದಿರೆ ನಾವು ಬದುಕುವುದೇ ಕಷ್ಟಕರವಾಗಿತ್ತು. ಸಂಘ ಸಂಸ್ಥೆಗಳು ನಮಗೆ ಜೀವ ನೀಡುತ್ತಿವೆ. ಅಧಿಕಾರಿಗಳು ಅಧ್ಯಕ್ಷರು ಫೋಟೋಗೆ ಸೀಮಿತವಾಗಿದ್ದಾರೆ ಎಂದು ಆಕ್ರೋಶ‌ ವ್ಯಕ್ತಪಡಿಸಿದ್ದಾರೆ.

ಇದನ್ನೂ ಓದಿ:ನಿಮ್ಮ ಮನೆ ಮೊದಲು ಸರಿಪಡಿಸಿಕೊಳ್ಳಿ‌: ಕಾಂಗ್ರೆಸ್ ಗೆ ಸೋಮಶೇಖರ್ ತಿರುಗೇಟು

ಅಧಿಕಾರಿಗಳು ಹಾಗೂ ಅಧ್ಯಕ್ಷರಿಗೆ ಮುತ್ತಿಗೆ ಹಾಕಿದ ಸದಸ್ಯರು‌ ತ್ವರಿತವಾಗಿ ಸ್ವಚ್ಚತಾ‌ಕಾರ್ಯ ಆರಂಬಿಸಬೇಕು ಎರಡು ಮೂರು ದಿನದಲ್ಲಿ ಸ್ವಚ್ಚತೆ ಹಾಗೂ ತಾತ್ಕಾಲಿಕ ರಸ್ತೆ ನಿರ್ಮಾಣ ಮಾಡಬೇಕು ಎಂದು ಮುತ್ತಿಗೆ ಹಾಕಿ ಆಗ್ರಹಿಸಿದರು

Advertisement

Udayavani is now on Telegram. Click here to join our channel and stay updated with the latest news.

Next