Advertisement

ಸಮುದಾಯದಿಂದ ಸರ್ಕಾರಕ್ಕೆ ತಕ್ಕ ಪಾಠ: ಎಚ್ಚರಿಕೆ

04:25 PM May 21, 2022 | Team Udayavani |

ಪಾವಗಡ: ರಾಜನಹಳ್ಳಿ ಪ್ರಸನ್ನನಂದಾ ಪುರಿಸ್ವಾಮಿಗಳ ಮೀಸಲಾತಿ ಧರಣಿಯನ್ನ ನಿರ್ಲಕ್ಷ್ಯ ಮಾಡಿದರೆ ಸಮುದಾಯದ ವತಿಯಿಂದ ಸರ್ಕಾರಕ್ಕೆ ಪಾಠ ಕಲಿಸುತ್ತೇವೆ. ರಾಜ್ಯದಲ್ಲಿ ಮತ್ತೂಮ್ಮೆ ಹಲಗಲಿಬೇಡರ ದಂಗೆಯನ್ನು ಕಣ್ಣಾರೆ ರಾಜ್ಯ ಸರ್ಕಾರ ಕಾಣಬೇಕಾಗುತ್ತದೆ ಎಂದು ಲೋಕೇಶ್‌ ಪಾಳೇಗಾರ್‌ ಎಚ್ಚರಿಸಿದರು.

Advertisement

ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡದ ಮೀಸಲಾತಿ ಹೆಚ್ಚಳಕ್ಕೆ ರಾಜನಹಳ್ಳಿಯ ಪ್ರಸನ್ನ ನಂದಾಪುರಿ ಸ್ವಾಮೀಜಿ ಕೈಗೊಂಡಿರುವ ಹೋರಾಟಕ್ಕೆ ಕೈಜೋಡಿಸಿ ತಾಲೂಕು ಮೀಸಲಾತಿ ಹೋರಾಟಸಮಿತಿ ವತಿಯಿಂದ ತಾಪಂ ಕಚೇರಿಯಿಂದ ಹೊರಟ ಪ್ರತಿಭಟನೆಕಾರರು ಶನಿಮಹಾತ್ಮ ಸರ್ಕಲ್‌ ಬಳಿಮಾನವ ಸರಪಳಿ ನಿರ್ಮಿಸಿ ರಾಜ್ಯ ಸರ್ಕಾರದ ವಿರುದ್ಧ ಧಿಕ್ಕಾರ ಕೂಗಿದರು. ತಹಶೀಲ್ದಾರ್‌ ಕಚೇರಿ ಮುಂದೆರಸ್ತೆ ತಡೆ ನಡೆಸಿ ತಹಶೀಲ್ದಾರ್‌ ಕಚೇರಿಗೆ ಮುತ್ತಿಗೆ ಹಾಕಿ ಮನವಿ ಪತ್ರ ಸಲ್ಲಿಸಿದರು.

ಮರ್ಹಷಿ ವಾಲ್ಮೀಕಿ ಜಾಗೃತಿ ವೇದಿಕೆ ತಾ.ಅಧ್ಯಕ್ಷ ಲೋಕೇಶ್‌ ಪಾಳೇಗಾರ್‌ ಮಾತನಾಡಿ, ಅಧಿಕಾರಕ್ಕೆಬಂದ ತಕ್ಷಣ ಮೀಸಲಾತಿ ಹೆಚ್ಚಿಸುವ ಬಗ್ಗೆ ಅಂದಿನ ಮುಖ್ಯಮಂತ್ರಿ ಬಿ.ಎಸ್‌.ಯಡಿಯೂರಪ್ಪ ಭರವಸೆ ನೀಡಿದ್ದರು. ಇಂದಿನ ಸಿಎಂ ಬಸವರಾಜ ಬೊಮ್ಮಾಯಿರವರು ಕೂಡ ಹೇಳಿ ಇಂದಿಗೂ ಭರವಸೆಈಡೇರಿಸದ ಕಾರಣ ರಾಜ್ಯದಾದ್ಯಂತ ಸರ್ಕಾರದವಿರುದ್ಧ ಬೃಹತ್‌ ಪ್ರತಿಭಟನೆ ನಡೆಸಲಾಗುತ್ತಿದೆ ಎಂದರು.

ಮುಖಂಡರಾದ ನೇರಳೆಕುಂಟೆ ನಾಗೇಂದ್ರ ಕುಮಾರ್‌ ಮಾತನಾಡಿ, ಮೀಸಲಾತಿ ಹೆಚ್ಚಿಸದಿದ್ದಲ್ಲಿವಿಧಾನಸೌಧ ಮುತ್ತಿಗೆ ಹಾಕಲಾಗುವುದು ಎಂದು ಹೇಳಿದರು.

ಡಿಜೆಎಸ್‌ ನಾರಾಯಣಪ್ಪ, ಜಾಗೃತಿ ವೇದಿಕೆಯತಾಲೂಕು ಕಾರ್ಯದರ್ಶಿ ಚಂದ್ರಶೇಖರ್‌, ಬಿಎಸ್‌ಪಿಪಕ್ಷದ ತಾಲೂಕು ಅಧ್ಯಕ್ಷ ಹನುಂಮತರಾಯ,ತಾ.ಪಂ. ಮಾಜಿ ಸದಸ್ಯರಾದ ನರಸಿಂಹ, ಪ್ರಗತಿರಾಮಾಂಜಿನೇಯಲು, ನಾಗೇಶ್‌, ಬೋವಿ ಸಮಾಜದಬಂಗಾರಪ್ಪ, ಸಿ.ಕೆ.ತಿಪ್ಪೇಸ್ವಾಮಿ, ಚಲವಾದಿಸಮುದಾಯದ ರವೀಂದ್ರ, ರಂಗಸ್ವಾಮಿ, ನಾಗರಾಜು,ಲಂಬಾಣಿ ಸಮುದಾಯದ ಗೋವಿಂದನಾಯ್ಕ,ಮುಖಂಡರಾದ ಸಿ.ಕೆ.ತಿಪ್ಪೇಸ್ವಾಮಿ,ಹನುಮಂತರಾಯಪ್ಪ, ಆರ್‌.ಎನ್‌.ಲಿಂಗಪ್ಪ,ಅಂಬಿಕರಮೇಶ್‌, ರಂಗಮ್ಮ ಬೆಳ್ಳಿಬಟ್ಟಲ ಜಯಮ್ಮ ಮಾತನಾಡಿದರು.

Advertisement

ತಹಶೀಲ್ದಾರ್‌ ವರದರಾಜು ಮನವಿ ಸ್ವೀಕರಿಸಿಜಿಲ್ಲಾಧಿಕಾರಿಗಳ ಮೂಲಕ ರಾಜ್ಯ ಸರ್ಕಾರಕ್ಕೆ ಸಲ್ಲಿಸಲಾಗುವುದು ಎಂದು ತಿಳಿಸಿದರು.

ಓಂಕಾರ್‌ನಾಯಕ, ಬಲರಾಮ್‌, ನಲಿಗಾನಹಳ್ಳಿ ಮಂಜುನಾಥ,ಚಿನ್ನಮ್ಮನ ಹಳ್ಳಿ ವೆಂಕಟರಮಣ, ಕರವೇಲಕ್ಷ್ಮಿನಾರಾಯಣ, ಕಾವಲಗೇರೆ ರಾಮಾಂಜಿ, ವಕೀಲ ಕೃಷ್ಣ, ಕೆ.ಟಿ.ಹಳ್ಳಿ ಶ್ರೀನಿವಾಸ್‌, ನಾಗರಾಜು, ಈರಪ್ಪ,ರಾಮು, ನಾಗರಾಜು ಇದ್ದರು.

Advertisement

Udayavani is now on Telegram. Click here to join our channel and stay updated with the latest news.

Next