Advertisement
ನಗರದ ಹಳೆ ಬಸ್ ನಿಲ್ದಾಣದಲ್ಲಿ ಜಮಾವಣೆಗೊಂಡ ಮಾಜಿ ಸೈನಿಕರು ಕೇಂದ್ರ ಸರಕಾರದ ಮಾರ್ಗಸೂಚಿಯಂತೆ ಮಾಜಿ ಸೈನಿಕರು ಅಥವಾ ಅವರ ಅವಲಂಬಿತರಿಗೆ ನೀಡಬೇಕಿರುವ ಭೂಮಿ ಮಂಜೂರು ಮಾಡುವಂತೆ ಆಗ್ರಹಿಸಿದರು.
Related Articles
Advertisement
ಮೊದಲೇ ಅನುಮತಿ ಪಡೆದಿರಬೇಕೆಂಬ ಮಾತಿಗೆ ಮಡಿಕೇರಿಯಲ್ಲೇ ಹೆದ್ದಾರಿ ತಡೆ ಮಾಡುತ್ತೇವೆ ತಾಲೂಕು ಅನುಮತಿ ಏಕೆ ಬೇಕು. ನಮ್ಮನ್ನು ಅರೆಸ್ಟ್ ಬೇಕಾದರೆ ಮಾಡಿರೆಂದು ಪಟ್ಟು ಹಿಡಿದರು.
ಹೆದ್ದಾರಿ ಬಂದ್ ಆಗಿರುವ ಬಗ್ಗೆ ಮಾಹಿತಿ ಪಡೆದ ಡಿವೈಎಸ್ ಪಿ ರವಿಪ್ರಸಾದ್ ಸ್ಥಳಕ್ಕಾಗಮಿಸಿ ಪ್ರತಿಭಟನಾ ನಿರತ ಮಾಜಿ ಸೈನಿಕರನ್ನು ಮನವೊಲಿಸಿ ಸುಗಮ ಸಂಚಾರಕ್ಕೆ ಅನುವು ಮಾಡಿಕೊಟ್ಟರು.
ಇದನ್ನೂ ಓದಿ:ಇಲಾಖೆಯಲ್ಲಿನ ಅನಗತ್ಯ ಖರ್ಚಿಗೆ ಕಡಿವಾಣ ಹಾಕುವುದು ಮೊದಲ ಗುರಿ ; ಸಚಿವ ಕೋಟ
ನಂತರ ಉಪ ವಿಭಾಗಾಧಿಕಾರಿ ವರ್ಣಿತ್ ನೇಗಿಯವರಿಗೆ ಮನವಿ ಸಲ್ಲಿಸಿದ ಪ್ರತಿಭಟನಾಕಾರರು ನಿಗದಿತ ಗಡುವಿನೊಳಗೆ ಭೂಮಿ ಮಂಜೂರಾತಿ ಮಾಡಿಕೊಡಬೇಕು ಇಲ್ಲದಿದ್ದಲ್ಲಿ ಅನಿವಾರ್ಯವಾಗಿ ಮತ್ತೆ ಪ್ರತಿಭಟನೆ ಹಾದಿ ಹಿಡಿಯುತ್ತೇವೆಂದರು.
ಮನವಿ ಸ್ವೀಕರಿಸಿದ ಎಸಿ
ಮಾಜಿ ಸೈನಿಕರಿಗೆ ಸಿಗಬೇಕಾದ ಸೌಲಭ್ಯ ಕಲ್ಪಿಸಬೇಕಾಗಿರುವುದು ಅಧಿಕಾರಿಗಳ ಜವಾಬ್ದಾರಿಯಾಗಿದ್ದು. ಈ ಬಗ್ಗೆ ಶ್ರೀಘ್ರದಲ್ಲೇ ಉಪ ವಿಭಾಗದ ತಹಸೀಲ್ದಾರ್ ಗಳ ಸಭೆ ನಡೆಸಿ. ವಸ್ತು ಸ್ಥಿತಿಯ ಕುರಿತು ಜಿಲ್ಲಾಧಿಕಾರಿಗಳಿಗೆ ವರದಿ ನೀಡಲಾಗುವುದೆಂಬ ಭರವಸೆ ಮೇರೆಗೆ ಪ್ರತಿಭಟನೆ ಹಿಂಪಡೆದರು.
ಪ್ರತಿಭಟನೆಯಲ್ಲಿ ಮಾಜಿ ಸೈನಿಕರಾದ ಸತ್ಯ ಪೌಡೇಶನ್ ಅಧ್ಯಕ್ಷ ಸತ್ಯಪ್ಪ ನೇತೃತ್ವದಲ್ಲಿ ಹುಣಸೂರು, ಹೆಚ್.ಡಿ.ಕೋಟೆ, ಪಿರಿಯಾಪಟ್ಟಣ, ಕೊಡಗುಜಿಲ್ಲೆಯ ಕುಶಾಲನಗರ ಮತ್ತಿತರ ಕಡೆಗಳಿಂದ ಆಗಮಿಸಿದ್ದ 150 ಕ್ಕೂ ಹೆಚ್ಚು ಮಾಜಿ ಸೈನಿಕರು ಭಾಗವಹಿಸಿದ್ದರು.