ಮಂಡ್ಯ: ನಗರದ ಹಾಲಹಳ್ಳಿ ಸ್ಲಂ ಹಾಗೂ ಕಾಳಿಕಾಂಬ ಸ್ಲಂ ನಿವಾಸಿಗಳಿಗೆ ಅಗತ್ಯ ಮೂಲಭೂತ ಸೌಲಭ್ಯಗಳ ಜತೆಗೆ ಮನೆ ವಿತರಿಸಬೇಕು ಎಂದು ಒತ್ತಾಯಿಸಿ ಕರ್ನಾಟಕ ಜನಶಕ್ತಿ ಹಾಗೂ ಮಂಡ್ಯ ಜಿಲ್ಲಾ ಶ್ರಮಿಕ ನಗರ ನಿವಾಸಿಗಳ ಒಕ್ಕೂಟ ಹಾಗೂ ಮಹಿಳಾ ಮುನ್ನಡೆ ಸಂಘಟನೆ ನೇತೃತ್ವದಲ್ಲಿ ಪ್ರತಿಭಟನೆ ನಡೆಯಿತು.
ನಗರದ ಜಿಲ್ಲಾಧಿಕಾರಿ ಕಚೇರಿ ಬಳಿ ಜಮಾಯಿಸಿದ ಪ್ರತಿಭಟನಾಕಾರರು, ಜಿಲ್ಲಾಡಳಿತ, ಜನಪ್ರತಿ ನಿ ಧಿಗಳ ವಿರುದ್ಧ ಘೋಷಣೆ ಕೂಗಿದರು.ಹಾಲಹಳ್ಳಿ ಸ್ಲಂನಲ್ಲಿ ಇನ್ನೂ ಹಂಚಲು ಮೀನಮೇಷ ಎಣಿಸುತ್ತಿರುವುದು ಸರಿಯಲ್ಲ ಎಂದರು.
ಕಾಳಿಕಾಂಬ ಸ್ಲಂ ಸಮಸ್ಯೆ ಬಗೆಹರಿಸಿ: ನಗರದ ಕಾಳಿಕಾಂಬ ಸ್ಲಂ ಸಮಸ್ಯೆಯನ್ನು ಶೀಘ್ರ ಬಗೆಹರಿಸಿ ನಿವಾಸಿಗಳಿಗೆ ಮನೆ ಗಳ ನಿರ್ಮಾಣ ಮಾಡಿಕೊಡಬೇಕು ಎಂದು ಕರ್ನಾಟಕ ಜನಶಕ್ತಿ ನೇತೃತ್ವದಲ್ಲಿ ನಿವಾಸಿಗಳು ಜಿಲ್ಲಾಧಿಕಾರಿ ಕಚೇರಿ ಮುಂದೆ ಪ್ರತಿಭಟನೆ ನಡೆಸಿದರು.
ಕರ್ನಾಟಕ ಜನಶಕ್ತಿ ಸಂಚಾಲಕ ಸಿದ್ದರಾಜು ಮಾತನಾಡಿ, ಕಾಳಿಕಾಂಬ ಸ್ಲಂ ಪ್ರದೇಶ ಎಂದು ಘೋಷಣೆಯಾಗಿರುವ ಜಾಗದಲ್ಲಿ ಕಾಳಿಕಾಂಬ ಟ್ರಸ್ಟ್ ನವರು ಕಲ್ಯಾಣ ಮಂಟಪ ನಿರ್ಮಾಣ ಮಾಡಿಕೊಂಡಿದ್ದಾರೆ. ಇದನ್ನು ತೆರವುಗೊಳಿಸುವ ಮೂಲಕ ನಿವಾಸಿಗಳಿಗೆ ಮನೆ ನೀಡಬೇಕು ಎಂದು ಒತ್ತಾಯಿಸಿದರು.
ಮಹಿಳಾ ಮುನ್ನಡೆಯ ಪೂರ್ಣಿಮಾ, ಎಸ್. ಪ್ರಕಾಶ್, ಸುಬ್ರಹ್ಮಣಿ, ಶಿವ ಲಿಂಗ, ಗಣೇಶ, ಮಂಜುಳಾ, ವಿಜಿಯಮ್ಮ, ವರಲಕ್ಷ್ಮೀ, ಶಶಿ ಕಲಾ, ಗೀತಾ, ಶಿಲ್ಪಾ, ಸುಭಾಷ್, ಯಲ್ಲಮ್ಮ ಇದ್ದರು.