Advertisement

ಜಂಪೇನಹಳ್ಳಿ ಮಗು ಪ್ರಕರಣ ಖಂಡಿಸಿ ಧರಣಿ

05:06 PM Mar 26, 2021 | Team Udayavani |

ಕುಣಿಗಲ್‌: ಕೊರಟಗೆರೆ ತಾಲೂಕು ಜಂಪೇನ ‌ಹಳ್ಳಿಗ್ರಾಮದಲ್ಲಿ ದಲಿತ ಮೃತ ಮಗುವಿನ ಶವವನ್ನು ಹೊರತೆಗೆದು ಶವ ಸಂಸ್ಕಾರಕ್ಕೆ ಅಡ್ಡಿಪಡಿಸಿದ ಅಮಾನವೀಯ ಘಟನೆ ಖಂಡಿಸಿ, ಕುಣಿಗಲ್‌ ತಾಲೂಕು ದಲಿತ ಸಂಘಟನೆಗಳ ಒಕ್ಕೂಟದ ಪದಾಧಿಕಾರಿಗಳು ತಾಲೂಕು ಕಚೇರಿ ಎದುರು ಗುರುವಾರ ಧರಣಿ ಸತ್ಯಾಗ್ರಹ ನಡೆಸಿದರು.

Advertisement

ಜಂಪೇನಗಹಳ್ಳಿ ಗ್ರಾಮದಲ್ಲಿನ ಘಟನೆಯಿಂದ ಇಡೀ ನಾಗರಿಕ ಸಮಾಜ ತಲೆ ತಗ್ಗಿಸುವಂತ್ತಾಗಿದೆ. ಘಟನೆಗೆ ಸಂಬಂಧಿಸಿದ ಶಾಹಿ ಗಾರ್ಮೆಂಟ್ಸ್‌ ಮಾಲೀಕರು ಹಾಗೂ ಸರ್ಕಾರಿ ಅಧಿಕಾರಿಗಳ ಮೇಲೆಶಿಸ್ತುಕ್ರಮ ಜರುಗಿಸುವಂತೆ ಆಗ್ರಹಿಸಿ, ಪುರಸಭಾ ಸದಸ್ಯ ಆನಂದ್‌ ಕಾಂಬ್ಲಿ, ಶ್ರೀನಿವಾಸ್‌, ತಾಪಂ ಮಾಜಿ ಅಧ್ಯಕ್ಷ ಎಸ್‌.ಆರ್‌.ಚಿಕ್ಕಣ್ಣ, ಜಿಲ್ಲಾ ಡಿಎಸ್‌ಎಸ್‌ಸಂಚಾಲಕ ವಿ.ಶಿವಶಂಕರ್‌, ದಲಿತ್‌ನಾರಾಯಣ್‌ನೇತೃತ್ವದಲ್ಲಿ ಒಕ್ಕೂಟದ ಪದಾಧಿಕಾರಿಗಳು ಪ್ರತಿಭಟನೆ ನಡೆಸಿ ವಿರುದ್ಧ ಧಿಕ್ಕಾರ ಕೂಗಿದರು.

ಹೀನಾಯ ಕೃತ್ಯ: ಎತ್ತಿನಹೊಳೆ ಕಾಮಗಾರಿ ಬ್ಲಾಸಿಂಗ್‌ ಶಬ್ದಕ್ಕೆ ಜಂಪೇನಹಳ್ಳಿ ಗ್ರಾಮದ ದಲಿತ ಸಮುದಾಯಕ್ಕೆ ಸೇರಿದ ಮೂರು ತಿಂಗಳ ಹೆಣ್ಣು ಮೃತಪಟ್ಟಿತ್ತು. ಘಟನೆ ಬಗ್ಗೆ ಪ್ರಶ್ನಿಸಲು ಶಕ್ತಿ ಇಲ್ಲದ ದಲಿತ ಕುಟುಂಬ ಸುವರ್ಣ ಮುಖೀ ನದಿಗೆ ಹೊಂದುಕೊಂಡತ್ತೇ ಇರುವ ಸರ್ಕಾರಿ ಜಮೀನಿನಲ್ಲಿ ಮೃತ ಮಗುವಿನ ಶವ ಸಂಸ್ಕಾರವನ್ನು ಮಾಡಿದ್ದರು. ಶಾಹಿ ಗಾರ್ಮೆಂಟ್ಸ್‌ ಮಾಲೀಕರು ನಮ್ಮ ಜಾಗದಲ್ಲಿ ಶವ ಸಂಸ್ಕಾರ ಮಾಡಿದ್ದಾರೆಂದು ಗುಂಡಿಯಿಂದ ಶವವನ್ನು ಸೆಕ್ಯುರಿಟಿ ಮೂಲಕ ಹೊರ ತೆಗೆಸಿ ಇಡೀ ನಾಗರೀಕ ಸಮಾಜ ತಲೆ ತಗ್ಗಿಸುವಂñಹ ‌ ಹೀನಾಯ ಕೃತ್ಯ ಎಸಗಲಾಗಿದೆ ಎಂದು ದಲಿತ ಮುಖಂಡರು ಕಿಡಿಕಾರಿದರು.

ದಲಿತರು ಎಲ್ಲ ಸಮುದಾಯವನ್ನು ಪ್ರೀತಿಸುವಂತಹ ಸಮುದಾಯ. ಆದರೆ, ನಮ್ಮಲ್ಲೇ ಎತ್ತುಕಟ್ಟುವಂತಹ ಕೆಲಸ ನಡೆಯುತ್ತಿದೆ. ಇದನ್ನುಖಂಡಿಸುತ್ತೇವೆ. ನಮಗೆ ಎಲ್ಲರ ಸ್ನೇಹ ಬೇಕು ಸಂಘರ್ಷ ಬ್ಯಾಡ ಎಂದ ಮುಖಂಡರು, ದೇಶಕ್ಕೆ ಸ್ವಾತಂತ್ರ ಬಂದು 74 ವರ್ಷ ಕಳೆದರೂ ಇಂತಹಕೃತ್ಯಗಳು ನಿರಂತರವಾಗಿ ನಡೆಯುತ್ತಿದೆ. ದಲಿತನ್ನು ಮನುಷ್ಯರಂತೆ ನೋಡುತ್ತಿಲ್ಲ. ಇದು ನಮ್ಮ ಸಂಸ್ಕೃತಿಯಲ್ಲ ಎಂದು ಆಕ್ರೋಶ ವ್ಯಕಪಡಿ‌¤ ಸಿದರು.

ಪರಿಹಾರದ ಭಿಕ್ಷೆ ಬೇಕಿಲ್ಲ: ನೊಂದ ಸಮಾಜದ ಮನುಷ್ಯರು ಘನತೆಯಿಂದ ಬದುಕುವ ವ್ಯವಸ್ಥೆ ಇಲ್ಲ. ಜಂಪೇನಹಳ್ಳಿ ಘಟನೆ ಹಿನ್ನೆಲೆ ಸಂತ್ರಸ್ತರಿಗೆ ಪರಿಹಾರದಭಿಕ್ಷೆ ನಮಗೆ ಬೇಕಿಲ್ಲ, ಸ್ವಾಭಿಮಾನ ಬೇಕು. ಸಮಾಜದಲ್ಲಿ ಎಲ್ಲರಂತೆ ಸಮಾನತೆಯಿಂದಬದುಕುವಂತಹ ವ್ಯವಸ್ಥೆ ಸರ್ಕಾರ ಕಲ್ಪಿಸಿಕೊಡಬೇಕು ಎಂದು ಒತ್ತಾಯಿಸಿದರು.

Advertisement

ತಾಲೂಕು ಕಚೇರಿ ಶಿರಸ್ತೇದಾರ್‌ ಜಯಪ್ಪಚಾರ್‌ ಅವರಿಗೆ ಮನವಿ ಸಲ್ಲಿಸಿದರು. ದಲಿತ ಮುಖಂಡ ಜಿ.ಕೆ.ನಾಗಣ್ಣ, ವರದರಾಜು, ನರಸಿಂಹಮೂರ್ತಿ, ಎಸ್‌.ಟಿ. ಕೃಷ್ಣರಾಜು, ರಾಮಲಿಂಗಯ್ಯ, ಆನಂದ್‌, ಎನ್‌.ರಾಜೇಶ್‌, ನಂಜಪ್ಪ ವಿನಯ್‌, ತಿಮ್ಮಪ್ಪ, ಗೋವಿಂದರಾಜು ಇದ್ದರು.

Advertisement

Udayavani is now on Telegram. Click here to join our channel and stay updated with the latest news.

Next