Advertisement

ದಲಿತರ ಮೇಲೆ ಹಲ್ಲೆ, ದೌರ್ಜನ್ಯ ತಡೆಗೆ ಆಗ್ರಹ

02:20 PM Jan 12, 2022 | Team Udayavani |

ಕೆ.ಆರ್‌.ಪೇಟೆ: ಇತ್ತೀಚಿನ ದಿನಗಳಲ್ಲಿ ದಲಿತರ ಮೇಲೆ ನಿರಂತರವಾಗಿ ಹಲ್ಲೆ, ದೌರ್ಜನ್ಯ ನಡೆಯುತ್ತಿದ್ದರೂ ಪೊಲೀಸ್‌ ಇಲಾಖೆ, ತಾಲೂಕು ಆಡಳಿತ ದಲಿತರಿಗೆ ರಕ್ಷಣೆ ನೀಡುವಲ್ಲಿ ವಿಫಲವಾಗಿವೆ ಎಂದು ರಾಜ್ಯ ಮಾದಿಗ ಸಮಾಜ ಸಂಘಟನೆಯ ತಾಲೂಕು ಅಧ್ಯಕ್ಷ ದೇವರಾಜು ಆರೋಪಿಸಿದರು.

Advertisement

ಪಟ್ಟಣದ ಪ್ರವಾಸಿ ಮಂದಿರದಲ್ಲಿ ಕರ್ನಾಟಕ ರಾಜ್ಯ ಮಾದಿಗ ಸಮಾಜ ಸಂಘಟನೆ, ಮಂಡ್ಯ ಜಿಲ್ಲಾ ಛಲವಾದಿ ಮಹಾಸಭಾ ಹಾಗೂ ದಲಿತ ಸಂಘರ್ಷ ಸಮಿತಿ ಸೇರಿದಂತೆ ವಿವಿಧ ದಲಿತ ಪರಸಂಘಟನೆಗಳ ಕಾರ್ಯಕರ್ತರು ಹಮ್ಮಿಕೊಂಡಿದ್ದಪ್ರತಿಭಟನೆಯಲ್ಲಿ ಭಾಗವಹಿಸಿ ಅವರು ಮಾತನಾಡಿದರು.

ತಾಲೂಕಿನಾದ್ಯಂತ ಕೆಲವು ಹಳ್ಳಿಗಳಲ್ಲಿ ದಲಿತರ ಮೇಲೆ ದಾಳಿ ನಡೆಯುತ್ತಿದ್ದರೂ ಜಿಲ್ಲಾಡಳಿತ, ತಾಲೂಕು ಆಡಳಿತ ಕೈಕಟ್ಟಿ ಕೂತಿವೆ. ಮುಂದಿನ ದಿನ ಗಳಲ್ಲಿ ಇದೇ ರೀತಿ ಮುಂದುವರಿದರೆ ತಾಲೂಕಿನ ಎಲ್ಲಾ ದಲಿತ ಸಂಘಟನೆಗಳ ಜೊತೆ ಸೇರಿ ಬೃಹತ್‌ ಹೋರಾಟ ಮಾಡಬೇಕಾಗುತ್ತದೆ ಎಂದು ಎಚ್ಚರಿಸಿದರು.

ಜಾತಿ ನಿಂದನೆ: ಛಲವಾದಿ ಮಹಾಸಭಾದ ಜಿಲ್ಲಾಧ್ಯಕ್ಷ ದಲಿತ ಮುಖಂಡರಾದ ಮಾಂಬಳ್ಳಿ ಜಯರಾಂ ಮಾತನಾಡಿ, ತಾಲೂಕಿನ ಶೀಳನೆರೆ ಹೋಬಳಿ ಎಚ್‌.ಬಳ್ಳೇಕೆರೆ ಗ್ರಾಮದ ದಲಿತ ಮಹಿಳೆಚಂಪಕ ಮತ್ತು ಚೆಲುವರಾಜು ಅವರು ಅಂಗಡಿಯಲ್ಲಿ ಸಾಮಾನು ತರಲು ಹೋಗಿದ್ದಾಗ ಸವ ರ್ಣೀಯ ವ್ಯಕ್ತಿಗಳಾದ ಬಸಪ್ಪ ಮತ್ತು ಅವರ ಪತ್ನಿರೂಪಾಬಸಪ್ಪ ಅವರು ಜಾತಿ ನಿಂದನೆ ಮಾಡಿನಂತರ ದಲಿತ ಕಾಲೋನಿಯ ಬಳಿ ಹೋಗಿ ಹಲ್ಲೆ ನಡೆಸಿ ದೌರ್ಜನ್ಯ ನಡೆಸಿದ್ದಾರೆ ಎಂದು ಆರೋಪಿಸಿದರು.

ಕ್ಷುಲ್ಲಕ ಕಾರಣದಿಂದಾಗಿ ದಲಿತ ಮಹಿಳೆಯ ಮೇಲೆ ಮಾರಣಾಂತಿಕ ಹಲ್ಲೆ ನಡೆಸಿರುವುದನ್ನು ಖಂಡಿಸಿದಲ್ಲದೇ ಹಲ್ಲೆ ಮಾಡಿದ ಮಹಿಳೆಯನ್ನು ಬಂಧಿಸಬೇಕು. ಅಲ್ಲದೇ ಹಲ್ಲೆಗೊಳಗಾದ ಕುಟುಂ ಬಕ್ಕೆ ಪೋಲೀಸ್‌ ಅಧಿಕಾರಿಗಳು ರಕ್ಷಣೆ ನೀಡಬೇಕು ಎಂದು ಆಗ್ರಹಿಸಿದರು.

Advertisement

ಸಭೆ ನಡೆಸಿ: ತಾಲೂಕು ಡಾ.ಜಗಜೀವನರಾಂ ಸಂಘಗಳ ಒಕ್ಕೂಟದ ತಾಲೂಕು ಅಧ್ಯಕ್ಷ ಹೊಸ ಹೊಳಲು ಪುಟ್ಟರಾಜು ಮಾತನಾಡಿ, ಇಂದಿಗೂ ಕೆಲವು ಹಳ್ಳಿಗಳಲ್ಲಿ ಜಾತೀಯತೆ ಜೀವಂತವಾಗಿದೆ. ತಿಂಗಳಿಗೊಮ್ಮೆ ಆದರೂ ದಲಿತರ ಕುಂದುಕೊರತೆ ನಿವಾರಿಸಲು ಪೊಲೀಸ್‌ ಇಲಾಖೆಯ ಹಿರಿಯ ಅದಿಕಾರಿಗಳು ಸಭೆ ನಡೆಸಿ ದಲಿತರಿಗೆ ನ್ಯಾಯ ಕೊಡಿಸಬೇಕೆಂದು ತಿಳಿಸಿದರು.

ತಾಲೂಕು ದಲಿತ ಸಂಘಟನೆ ಸದಸ್ಯರು, ತಾಲೂಕು ಆಡಳಿತ ವಿರುದ್ಧ ಧಿಕ್ಕಾರ ಘೋಷಣೆಕೂಗಿ ಆಕ್ರೋಶ ವ್ಯಕ್ತಪಡಿಸಿದರು. ತಾಪಂ ಮಾಜಿ ಅಧ್ಯಕ್ಷ ಸೋಮಯ್ಯ, ದಲಿತ ಸಂಘರ್ಷ ಸಮಿತಿ ಪಾಂಡವಪುರ ಉಪವವಿಭಾಗೀಯ ಸಂಚಾಲಕ ಲಕ್ಷ್ಮೀಪುರ ರಂಗಸ್ವಾಮಿ, ಕೂಡಲಕುಪ್ಪೆ ರಾಜಯ್ಯ,ಖಜಾಂಚಿ ಪುಟ್ಟರಾಜು, ತಾ.ಸಂ.ಕಾರ್ಯದರ್ಶಿ ಮಹಾದೇವ, ಚಲುವರಾಜು, ಉಪಾಧ್ಯಕ್ಷರಾದ ಮೋಹನ್‌, ಆಲೇನಹಳ್ಳಿ ಮಹದೇವ, ಚಟ್ಟಂಗೆರೆ ನಿಂಗರಾಜು, ಸೋಮೇಶ್‌, ಗ್ರಾಪಂ ಸದಸ್ಯರಾದ ಶಿವು, ಪಿ.ಬಿ.ಮಂಚನಹಳ್ಳಿ ಮಹೇಶ್‌, ರಾಯಸಮುದ್ರ ವೆಂಕಟೇಶ್‌ ಸೇರಿದಂತೆ ತಾಲೂಕುದಲಿತ ಸಂಘಟನೆಯ ನೂರಾರು ಸದಸ್ಯರು ಪ್ರತಿಭಟನೆಯಲ್ಲಿ ಪಾಲ್ಗೊಂಡಿದ್ದರು.

Advertisement

Udayavani is now on Telegram. Click here to join our channel and stay updated with the latest news.

Next