ಬೆಳ್ತಂಗಡಿ: ದ.ಕ.ಜಿಲ್ಲೆಯ ಸುಳ್ಯ, ಕಡಬ, ಬೆಳ್ತಂಗಡಿ ತಾಲೂಕುಗಳ ಕಸ್ತೂರಿ ರಂಗನ್ ವರದಿ ಬಾಧಿತ ಗ್ರಾಮಗಳ ಪಂಚಾಯತ್ ಎದುರು ಧರಣಿ ಸತ್ಯಾಗ್ರಹ ಕೈಗೊಳ್ಳಲು ಮತ್ತು ಆ ಸತ್ಯಾಗ್ರಹಕ್ಕೆ ಚುನಾವಣೆಗೆ ಸ್ಪರ್ಧಿಸುವ ವಿವಿಧ ಪಕ್ಷಗಳ ಅಭ್ಯರ್ಥಿಗಳು ವರದಿ ಬಗ್ಗೆ ತಮ್ಮ ನಿಲುವು ವ್ಯಕ್ತಪಡಿಸಬೇಕು ಎಂದು ಮಲೆನಾಡು ಜನಹಿತ ರಕ್ಷಣಾ ವೇದಿಕೆ ಆಗ್ರಹಿಸಿದೆ.
ವೇದಿಕೆ ಕಾರ್ಯಕರ್ತರು ಮತ್ತು ಹಿತೈಷಿಗಳ ಮನೆಗೆ ಅಭ್ಯರ್ಥಿಗಳು ಮತಯಾಚನೆಗೆ ಮನೆಭೇಟಿ ಸಂದರ್ಭ ಕಸ್ತೂರಿ ರಂಗನ್ ವರದಿ ಬಗ್ಗೆಯ ತಮ್ಮ ನಿಲುವು ಕುರಿತು ಲಿಖಿತವಾಗಿ ಅಭಿಪ್ರಾಯ ಸಂಗ್ರಹಿಸುವ ಬಗ್ಗೆ ವೇದಿಕೆ ಅಭಿಯಾನ ಕೈಗೊಳ್ಳಲಿದೆ.
ಕಸ್ತೂರಿ ರಂಗನ್ ವರದಿ ವಿರುದ್ಧದ ತಾಲೂಕು ಪ್ರತಿಭಟನೆ ಬಗ್ಗೆ ಮತ್ತು ವೇದಿಕೆ ಸಂಘಟನಾತ್ಮಕ ವಿಚಾರಗಳ ಕುರಿತು ಕುಕ್ಕೇಡಿಯಲ್ಲಿ ನಡೆದ ಜಿಲ್ಲಾ ಸಮಿತಿ ಸಭೆಯಲ್ಲಿ ತೀರ್ಮಾನಿಸಲಾಗಿದೆ.
ವೇದಿಕೆ ಸಂಚಾಲಕ ಸಂಚಾಲಕ ಕಿಶೋರ್ ಶಿರಾಡಿ, ಸುಳ್ಯ ತಾಲೂಕು ಸಂಚಾಲಕ ಭಾನುಪ್ರಕಾಶ್ ಪೆರುಮುಂಡ, ಮಡಿಕೇರಿ ತಾಲೂಕು ಸಂಚಾಲಕ ಬನ್ನೂರುಪಟ್ಟೆ ಪ್ರದೀಪ್ ಕರಿಕೆ, ಜಿಲ್ಲಾ ಸಮಿತಿ ಸದಸ್ಯರುಗಳಾದ ರವೀಂದ್ರ ರುದ್ರಪಾದ, ಸತೀಶ್ ಟಿ.ಎನ್.ಕಲ್ಮಕಾರು, ಭರತ್ ಕನ್ನಡ್ಕ, ಜಯರಾಮ ಕಟ್ಟೆಮನೆ, ಪ್ರಮುಖರಾದ ಉಮೇಶ್ ಕಜ್ಜೋಡಿ, ಸಂತೋಷ್ ಕುಮಾರ್ ಪುದುವೆಟ್ಟು, ಶೀನಪ್ಪ ನಾಯ್ಕ ಶಿಶಿಲ, ಬಿಜೋ ಕೆ.ಜೆ.ಪುದುವೆಟ್ಟು, ಸೆಬಾಸ್ಟಿನ್ ಕಳೆಂಜ, ಶಾಜಿ ಕೆ.ವಿ.ಕಳೆಂಜ, ಧನಂಜಯ ಕೊಡಂಗೆ, ಚಿದಾನಂದ ದೇವುಪಾಲ್, ಸಂತೋಷ್ ಆರ್.ಕುಲ್ಕುಂದ, ವಿಜಯ ಶಿರಾಡಿ, ನಿಶಾದ್ ಎಸ್. ಶಿರಾಡಿ ಉಪಸ್ಥಿತರಿದ್ದರು.