ರಬಕವಿ-ಬನಹಟ್ಟಿ : ನೇಕಾರರ ಹಕ್ಕೊತ್ತಾಯಗಳ ಈಡೇರಿಕೆಗಾಗಿ ಜು.06 ರಂದು ಜವಳಿ ಸಚಿವರ ನಿವಾಸದ ಮುಂದೆ ಧರಣಿ ನಡೆಸಲು ಮಹತ್ವದ ನಿರ್ಣಯ ಕೈಗೊಳ್ಳಲಾಗಿದೆ ಎಂದು ಕರ್ನಾಟಕ ರಾಜ್ಯ ನೇಕಾರರ ಸೇವಾ ಸಂಘದ ರಾಜ್ಯಾಧ್ಯಕ್ಷ ಶಿವಲಿಂಗ ಟಿರಕಿ ಹೇಳಿದರು.
ಅವರು ಗುರುವಾರ ರಬಕವಿಯ ಐಬಿಯ ಗಣೇಶನ ಗುಡಿಯಲ್ಲಿ ವೃತ್ತಿಪರ ನೇಕಾರರ ಬೃಹತ್ ಸಭೆಯ ನಂತರ ಪತ್ರಿಕೆ ಜೊತೆ ಮಾತನಾಡಿ, ಅಂದು ಬೆಳಿಗ್ಗೆ 9.15 ಕ್ಕೆ ಹುಬ್ಬಳ್ಳಿಯ ಚನ್ನಮ್ಮ ವೃತ್ತದಿಂದ ಪಾದಯಾತ್ರೆಯ ಮೂಲಕ ಜವಳಿ ಸಚಿವರ ನಿವಾಸದ ಮುಂದೆ ಧರಣಿ ನಡೆಸಲು ಎಲ್ಲ ನೇಕಾರರು ಒಕ್ಕೊರಲಿನ ಸಮ್ಮತಿ ಸೂಚಿಸಿದ್ದಾರೆ. ಎಂದರು.
ಸರ್ಕಾರಗಳು ರಾಜ್ಯದಲ್ಲಿ ಸಾಲದ 36 ಆತ್ಮಹತ್ಯೆಗಳು ನಡೆದರೂ 25% ನೇಕಾರರು ವೃತ್ತಿಯನ್ನು ಬಿಟ್ಟು ಗುಳೆ ಹೋಗುತ್ತಿದ್ದಾರೆ ಬೇರೆ ಬೇರೆ ಕೆಲಸಗಳಲ್ಲಿ ತೊಡಗಿಕೊಳ್ಳುತ್ತಿದ್ದಾರೆ ಅನೇಕ ಫಲಾನುಭವಿಗಳಿಗೆ ಸಾಲ ಮನ್ನಾ ಯೋಜನೆ ಸಿಗದೇ ಇದ್ದು ಬರಿ ಬಡ್ಡಿ ಭರಿಸುತ್ತಿದ್ದಾರೆ. 1230 ಕ್ಕಿಂತಲೂ ಅಧಿಕ ಮನವಿಗಳನ್ನು ಹೋರಾಟಗಳ ಮೂಲಕ ಸಲ್ಲಿಸಿದ್ದರು ಕಾರ್ಮಿಕ ಸೌಲಭ್ಯಗಳನ್ನು ಒದಗಿಸಬೇಕು ಎಂದು ಹೇಳಿದರು ಯಾವುದಕ್ಕೂ ಪರಿಗಣಿಸಲಾಗಿಲ್ಲ ಹಾಗೂ ವಿದ್ಯುತ್ ಮಿನಿಮಮ್ ಚಾರ್ಜ್ ಹೆಚ್ಚಿನ ಭದ್ರತಾ ಠೇವಣಿ ತುಂಬಾ ತೊಂದರೆಗೊಳಗಾದ ಪರಿಸ್ಥಿತಿ ಎದುರಾಗಿದೆ ಎರಡು ವರ್ಷಗಳಿಂದ ಮಾನ್ಯ ಮುಖ್ಯಮಂತ್ರಿಗಳ ಜೊತೆಯಲ್ಲಿ ರಾಜ್ಯದ ನೇಕಾರರ ಕುರಿತು ಜವಳಿ ಸಚಿವರು ಜವಾಬ್ದಾರಿಯಿಂದ ಒಂದು ಸಭೆಯನ್ನು ಮಾಡಿಸದೆ ಇದ್ದು ಹಾಗೂ ಜೂ.05 ರಂದು ನಡೆದ ಸಮಾವೇಶಕ್ಕೆ ಯಾರೊಬ್ಬರೂ ಬಾರದೆ ನೇಕಾರರ ಬಗ್ಗೆ ತಾರತಮ್ಯ ನೀತಿ ಅನುಸರಿಸಿದ್ದಾರೆ ಇದು ನೇಕಾರರಿಗೆ ಮಾಡಿದ ಅನ್ಯಾಯವಾಗಿದೆ ನಮ್ಮ ಹೋರಾಟಕ್ಕೆ ಹತ್ತಿಕ್ಕುವ ಪ್ರಯತ್ನ ಕಾರಣ ಇಡೀ ರಾಜ್ಯದ ನೇಕಾರರು ಈ ಹೋರಾಟಕ್ಕೆ ಭಾಗವಹಿಸಲಿದ್ದಾರೆ ಎಂದರು.
ಈ ಸಂದರ್ಭದಲ್ಲಿ ರಾಜೇಂದ್ರ ಮಿರ್ಜಿ, ಆನಂದ ಜಗದಾಳ, ಬಸವರಾಜ ಮನ್ಮಿ, ರವಿ ಅಮ್ಮಣಗಿ, ಮಲ್ಲಪ್ಪ ಸೋರಗಾಂವಿ, ದಾನಪ್ಪ ತುಂಗಳ, ಎಂ. ಎಸ್. ಗುಡೋಡಗಿ, ಸಂಜಯ ಖವಾಸಿ, ವಿವೇಕಾನಂದ ಭಸ್ಮೆ, ಬಿ. ಕೆ. ಬಾಣಕಾರ, ಎಂ. ಎಸ್. ಗೊಳಸಂಗಿ, ಸತೀಶ ಪಾಸ್ತೆ, ಜಿ. ಎಂ. ಮಧುರಖಂಡಿ, ರಾಜು ಯಾದವಾಡ ಸೇರಿದಂತೆ ನೂರಾರೂ ನೇಕಾರ ಮುಖಂಡರು ಇದ್ದರು.