ಹೊಸಪೇಟೆ: ನ್ಯಾ. ನಾಗಮೋಹನ್ ದಾಸ್ ಅವರ ವರದಿಯನ್ನು ಜಾರಿ ಮಾಡುವ ಜನಸಂಖ್ಯೆಗೆ ಅನುಗುಣವಾಗಿ ಎಸ್‌ಸಿ ಹಾಗೂ ಎಸ್‌ಟಿ ಸಮಾಜಕ್ಕೆ ಮೀಸಲಾತಿ ನೀಡಬೇಕು ಎಂದು ಒತ್ತಾಯಿಸಿ ರಾಜ್ಯ ಸ್ವಾಭಿಮಾನಿ ಪ.ಜಾತಿ ಮತ್ತು ಪ.ಪಂಗಡಗಳ ಮೀಸಲಾತಿ ಹೆಚ್ಚಳ ಹೋರಾಟ ಕ್ರಿಯಾ ಸಮಿತಿಯಿಂದ ನಗರದಲ್ಲಿ ಎಸ್‌ಸಿ, ಎಸ್‌ಸಿ ಸಮಾಜ ಬಾಂಧವರು, ಶುಕ್ರವಾರ ಅರಬೆತ್ತಲೆ ಪ್ರತಿಭಟನೆ ನಡೆಸಿದರು.
ನಗರದ ವಾಲ್ಮೀಕಿ ವೃತ್ತದಿಂದ ಆರಂಭವಾದ ಪ್ರತಿಭಟನಾ ಮೇರವಣಿಗೆ ಮದಕರಿ ವೃತ್ತ, ದೊಡ್ಡ ಮಸೀದ್, ಗಾಂಧಿಚೌಕ್, ಪುಣ್ಯಮೂರ್ತಿ ವೃತ್ತ, ಕೇಂದ್ರ ಬಸ್‌ನಿಲ್ದಾಣ, ಮಾರ್ಡನ್ ವೃತ್ತ ಮಾರ್ಗವಾಗಿ ಪುನೀತ್ ರಾಜ್‌ಕುಮಾರ್ ವೃತ್ತಕ್ಕೆ ಸಮಾವೇಶಗೊಂಡು ಪ್ರತಿಭಟನೆ ನಡೆಸಿದರು.
ಎಸ್.ಸಿ ಜನಾಂಗಕ್ಕೆ ಶೇ.15 ರಿಂದ ಶೇ.17 ಮತ್ತು ಎಸ್.ಟಿ ಜನಾಂಗಕ್ಕೆ ಶೇ.3 ರಿಂದ ಶೇ.7.5 ಮೀಸಲಾತಿಗಾಗಿ ಬೆಂಗಳೂರಿನ ಫ್ರೀಡಂ ಪಾರ್ಕ್ ನಲ್ಲಿ ಶ್ರೀ ಪ್ರಸನ್ನಾನಂದ ಸ್ವಾಮಿಜಿಗಳು ನಡೆಸುತ್ತಿರುವ 100 ದಿನಗಳ ಅನಿರ್ದಿಷ್ಟ ಧರಣಿಯನ್ನು ಬೆಂಬಲಿಸಿ, ಬೃಹತ್ ಪ್ರತಿಭಟನೆ ನಡೆಸಿದರು.
ಮುಖಂಡರಾದ ಮರಡಿ ಜಂಬಯ್ಯನಾಯಕ, ಬಿ.ಎಸ್.ಜಂಬಯ್ಯನಾಯಕ, ವೀರಸ್ವಾಮಿ, ಪಿ.ವೆಂಕಟೇಶ್, ಪೂಜಾರಿ ದುರುಗಪ್ಪ, ಕಿಚಡಿ ಶ್ರೀನಿವಾಸ, ಡಿ.ವೆಂಕಟರಮಣ, ಸೋಮಶೇಖರ್ ಬಣ್ಣದ ಮನೆ, ತಾಯಪ್ಪ ನಾಯಕ, ಪಿ.ವೆಂಕಟೇಶ್, ಬಿ.ರಮೇಶ್ ಇನ್ನಿತರರಿದ್ದರು.
ಇದನ್ನೂ ಓದಿ : ಪರಿಶಿಷ್ಟ ಜಾತಿ, ಪಂಗಡದ ಹಕ್ಕು ಕೇಂದ್ರ, ರಾಜ್ಯ ಸರ್ಕಾರ ಕಸಿಯುತ್ತಿದೆ : ಡಾ.ರಂಗನಾಥ್ ಆರೋಪ