ಹರಪನಹಳ್ಳಿ: ತುತ್ತಿನ ಚೀಲ ತುಂಬಿಸಿಕೊಳ್ಳಲು ವಲಸ ಹೋಗಿರುವ ಬಂಜಾರ ಕುಟುಂಬದ 12 ವರ್ಷದ ಬಾಲಕಿ ಮೇಲೆ ಅತ್ಯಾಚಾರ ನಡೆಸಿ ಬರ್ಬರವಾಗಿ ಹತ್ಯೆಮಾಡಿರುವ ಆರೋಪಿಗೆ ಗಲ್ಲು ಶಿಕ್ಷೆ ವಿ ಧಿಸಬೇಕೆಂದುಒತ್ತಾಯಿಸಿ ಪಟ್ಟಣದಲ್ಲಿ ಶನಿವಾರ ಲಂಬಾಣಿ ಸಮುದಾಯದ ಗುರುಗಳಾದ ಗೋಸಾಯಿಬಾಬಸ್ವಾಮೀಜಿ ನೇತೃತ್ವದಲ್ಲಿ ಬಂಜಾರ ಸಮುದಾಯದ ವತಿಯಿಂದ ಬೃಹತ್ ಪ್ರತಿಭಟನೆ ನಡೆಸಿ ಟೈರ್‌ಗೆ ಬೆಂಕಿ ಹಚ್ಚುವ ಮೂಲಕ ಆಕ್ರೋಶ ವ್ಯಕ್ತಪಡಿಸಿದರು.
ಹೊಸಪೇಟೆ ತಾಲೂಕಿನ ತಾಳೆಬಸಾಪುರ ತಾಂಡಾದ ಅಪ್ರಾಪ್ತ ಬಾಲಕಿ ಮೇಲೆ ಅತ್ಯಾಚಾರ ನಡೆಸಿ ಬರ್ಬರವಾಗಿ ಕೊಲೆ ಮಾಡಿದ ಆರೋಪಿಯನ್ನುಕಾನೂನಿನ ಅಡಿಯಲ್ಲಿ ಗಲ್ಲು ಶಿಕ್ಷೆ ವಿಧಿಸಬೇಕು ಎಂದು ಒತ್ತಾಯಿಸಿ ಪ್ರತಿಭಟನಾಕಾರರು ಪಟ್ಟಣದ ಹೊಸ ಬಸ್ ನಿಲ್ದಾಣದಿಂದ ಐ.ಬಿ. ವೃತ್ತದವರೆಗೆ ಕಾಲ್ನಡಿಗೆಯಲ್ಲಿ ಆಗಮಿಸಿ ಟೈರ್ ಗೆ ಬೆಂಕಿ ಹಾಕಿ ಘೋಷಣೆ ಮೊಳಗಿಸಿದರು. ಕೊಲೆಗಡುಕರಿಗೆ ಶೀಘ್ರವಾಗಿ ಕಠಿಣ ಶಿಕ್ಷೆಯಾಗಲು ತಕ್ಷಣ ತ್ವರಿತ ನ್ಯಾಯಾಲಯವನ್ನು ಸ್ಥಾಪಿಸಿ ವಿಚಾರಣೆ ಪ್ರಾರಂಭಿಸಬೇಕು. ಆರತಿಬಾಯಿ ಕುಟುಂಬಕ್ಕೆ 25ಲಕ್ಷ ರೂ. ಪರಿಹಾರ ಘೋಷಣೆ ಮಾಡಬೇಕು ಎಂದು ಆಗ್ರಹಿಸಿದರು.
ಬಂಜಾರ ಅಭಿವೃದ್ಧಿ ನಿಗಮದ ರಾಜ್ಯ ನಿರ್ದೇಶಕ ಎಸ್.ಪಿ. ಲಿಂಬ್ಯಾನಾಯ್ಕ, ತಾಪಂ ಉಪಾಧ್ಯಕ್ಷ ಎಲ್. ಮಂಜ್ಯಾನಾಯ್ಕ, ವಿದ್ಯಾರ್ಥಿ ಸಂಘಟನೆ ಮಖಂಡ ಈಶ್ವರನಾಯ್ಕ, ಯುವ ಕಾಂಗ್ರೆಸ್ ಅಧ್ಯಕ್ಷ ಶಿವಕುಮಾರನಾಯ್ಕ, ಬಿಜೆಪಿ ಹಿರಿಯ ಮುಖಂಡ ಎಂ.ಪಿ.ನಾಯಕ್, ಬಿ.ವೈ. ವೆಂಕಟೇಶನಾಯ್ಕ ಸಿ.ಸಿ. ರಾಮಚಂದ್ರನಾಯ್ಕ, ರಮೇಶನಾಯ್ಕ,ರಾಜುನಾಯ್ಕ, ಶಿವಣ್ಣನಾಯ್ಕ ಮಾತನಾಡಿದರು. ಮುಖಂಡರಾದ ಕುಮಾರನಾಯ್ಕ, ಹರೀಶನಾಯ್ಕ, ರವಿನಾಯ್ಕ, ಹುಲಿಕಟ್ಟಿ ರಾಜಪ್ಪ, ಮಾರುತಿನಾಯ್ಕ ಮತ್ತಿತರರು ಭಾಗವಹಿಸಿದ್ದರು.
ಬಾಲಕಿ ಹತ್ಯೆಗೆ ಎಬಿವಿಪಿ ಖಂಡನೆ :
ಕೂಡ್ಲಿಗಿ: ಪಟ್ಟಣದ ತಾಲೂಕು ಆಡಳಿತ ಕಚೇರಿಯಲ್ಲಿ ಕೂಡ್ಲಿಗಿ ತಾಲೂಕು ಎಬಿವಿಪಿ ಘಟಕ ವತಿಯಿಂದಮಂಡ್ಯ ಜಿಲ್ಲೆಯ ಮದ್ದೂರು ತಾಲೂಕಿನ ಹುರುಗಲುವಾಡಿಯಲ್ಲಿ ಅಪ್ರಾಪ್ತ ಬಾಲಕಿ ಹತ್ಯೆ ಖಂಡಿಸಿ ಕೂಡ್ಲಿಗಿ ತಾಲೂಕು ಗ್ರೇಡ್-2 ತಹಶೀಲ್ದಾರ್ ಅರುಧಂತಿ ನಾಗವಿಗೆ ಅವರಿಗೆ ಮನವಿ ಸಲ್ಲಿಸಲಾಯಿತು.
ಪಟ್ಟಣದಲ್ಲಿ ಎಬಿವಿಪಿ ವಿದ್ಯಾರ್ಥಿ ಪರಿಷತ್ ಚಿತಾಭಸ್ಮದಿಂದ ಪ್ರತಿಭಟನಾ ಮೆರವಣಿಗೆ ಮಾಡಿ ತಹಶೀಲ್ದಾರ್‌ರಿಗೆ ಮನವಿ ಸಲ್ಲಿಸಿದರು.ವಿದ್ಯಾರ್ಥಿ ಪರಿಷತ್ ಪ್ರಮುಖ ವಿನಾಯಕ ಎಲ್. ಎಸ್. ಮಾತನಾಡಿ, ಇಂಥ ಅತ್ಯಾಚಾರಿಗಳಿಗೆ ಗಲ್ಲುಶಿಕ್ಷೆ ವಿಧಿಸಬೇಕೆಂದು ಒತ್ತಾಯಿಸಿದರು. ಪ್ರಧಾನ ಕಾರ್ಯದರ್ಶಿ ಎಲ್. ಹನುಮಂತು, ಟಿ. ವಿರೂಪಾಕ್ಷಿ, ಶ್ರೀನಿವಾಸ್, ವಿಜಯಕುಮಾರ, ಕೋಟ್ರೇಶ, ಕರಿಬಸಪ್ಪ, ಅಂಜಿನಿ, ಎ.ಕೆ.ಲಕ್ಷ್ಮಣ, ತಿಪ್ಪೇಸ್ವಾಮಿ, ಉಮೇಶ.ಬಿ, ಪವನಕುಮಾರ ಉಪಸ್ಥಿತರಿದ್ದರು.