ಚಿಕ್ಕಮಗಳೂರು: ಜಿಲ್ಲಾಸ್ಪತ್ರೆ ಸಿಬ್ಬಂದಿಗಳ ನಿರ್ಲಕ್ಷ್ಯದಿಂದ ಬಾಣಂತಿ ಸಾವನ್ನಪ್ಪಿದ್ದಾಳೆಂದು ಆರೋಪಿಸಿ ಮಹಿಳೆಯ ಸಂಬಂಧಿಕರು ಆಸ್ಪತ್ರೆ ಆವರಣದಲ್ಲಿ ಪ್ರತಿಭಟಿಸಿದ ಘಟನೆ ಶನಿವಾರ ರಾತ್ರಿ ನಡೆದಿದೆ.
22 ವರ್ಷದ ರಂಜಿತಾ ಬಾಯಿ ಅವರಿಗೆ ಶನಿವಾರ ಮಧ್ಯಾಹ್ನ ಹೆರಿಗೆ ಆಗಿದ್ದು ರಾತ್ರಿವೇಳೆ ಆರೋಗ್ಯದಲ್ಲಿ ಏರುಪೇರು ಉಂಟಾಗಿ ಮೃತಪಟ್ಟಿದ್ದಾಳೆ.
ಶನಿವಾರ ಮಧ್ಯಾಹ್ನ ಚಿಕ್ಕಮಗಳೂರು ಜಿಲ್ಲಾಸ್ಪತ್ರೆಯಲ್ಲಿ ಹೆರಿಗೆಯಾಗಿತ್ತು. ಆದರೆ, ರಂಜಿತಾ ಬಾಯಿ ಆರೋಗ್ಯದಲ್ಲಿ ರಾತ್ರಿ ವೇಳೆ ಏರುಪೇರಾಗಿತ್ತು. ಈ ಬಗ್ಗೆ ಆಸ್ಪತ್ರೆ ವೈದ್ಯರಿಗೆ ಮಾಹಿತಿ ನೀಡಿದರೂ ಆಸ್ಪತ್ರೆ ಸಿಬ್ಬಂದಿ ಸ್ಪಂದಿಸಿಲ್ಲ, ಸಕಾಲದಲ್ಲಿ ವೈದ್ಯರು ಬಂದು ತಪಾಸಣೆ ಮಾಡಿಲ್ಲ. ಅಲ್ಲದೆ ಹೆರಿಗೆ ಮಾಡಿಸಿದ್ದಕ್ಕೆ ಆಸ್ಪತ್ರೆ ಸಿಬ್ಬಂದಿ ಹಣ ಕೇಳುತ್ತಿದ್ದಾರೆ ಎಂದು ಸಂಬಂಧಿಕರು ಆರೋಪಿಸಿದರು.
ಇದನ್ನೂ ಓದಿ:SriLanka: ಶನಕ ನಾಯಕತ್ವ ಅಂತ್ಯ; ಲಂಕಾ ಏಕದಿನ- ಟಿ20 ತಂಡಕ್ಕೆ ಹೊಸ ನಾಯಕರ ಆಯ್ಕೆ
ಆಸ್ಪತ್ರೆ ಸಿಬ್ಬಂದಿ, ವೈದ್ಯರು ಸಕಾಲದಲ್ಲಿ ಬಾಣಂತಿಗೆ ಚಿಕಿತ್ಸೆ ನೀಡದ ಪರಿಣಾಮ ರಂಜಿತಾ ಬಾಯಿ ಮೃತಪಟ್ಟಿದ್ದಾಳೆಂದು ದೂರಿದ್ದಾರೆ.
ಬಾಣಂತಿ ಸಾವಿಗೆ ಕಾರಣರಾದವರ ವಿರುದ್ದ ಸೂಕ್ತ ಕ್ರಮ ಕೈಗೊಳ್ಳಬೇಕೆಂದು ಸಂಬಂಧಿಕರು ಆಗ್ರಹಿಸಿದ್ದಾರೆ. ಈ ವೇಳೆ ಸ್ಥಳಕ್ಕೆ ಬಂದ ವೈದ್ಯಾಧಿಕಾರಿಗಳು ಸೂಕ್ತ ಕ್ರಮದ ಭರವಸೆ ನೀಡಿದ್ದರಿಂದ ಸಂಬಂಧಿಕರು ಪ್ರತಿಭಟನೆ ಕೈಬಿಟ್ಟರು.
ರಂಜಿತಾ ಬಾಯಿ ಕಡೂರು ತಾಲೂಕಿನ ವಡರೇಹಳ್ಳಿ ತಾಂಡ್ಯದ ನಿವಾಸಿಯಾಗಿದ್ದಾರೆ.