Advertisement

ಮದ್ಯದಂಗಡಿ ವಿರೋಧಿಸಿ ಬೃಹತ್‌ ಪ್ರತಿಭಟನೆ

01:53 PM Sep 22, 2021 | Team Udayavani |

ಚಿಕ್ಕಮಗಳೂರು: ಕಡೂರು ತಾಲೂಕುಎಮ್ಮೆದೊಡ್ಡಿ ಗ್ರಾಮದಲ್ಲಿ ಗ್ರಾಮಸ್ಥರವಿರೋಧದ ನಡುವೆ ಪ್ರಭಾವಿಗಳುಅಕ್ರಮವಾಗಿ ಮದ್ಯದಂಗಡಿ ತೆರೆದಿದ್ದು, ಅಬಕಾರಿಮತ್ತು ಪೊಲೀಸ್‌ಇಲಾಖೆಅಧಿಕಾರಿಗಳು ಸಹಕಾರ ನೀಡುತ್ತಿದ್ದಾರೆ ಎಂದು ಆರೋಪಿಸಿ ಗ್ರಾಮಸ್ಥರು ನಗರದಲ್ಲಿಬೃಹತ್‌ ಪ್ರತಿಭಟನೆ ನಡೆಸಿದರು.

Advertisement

ಮಂಗಳವಾರ ನಗರದ ತಾಪಂಕಚೇರಿಯಿಂದ ಆಜಾದ್‌ ಪಾರ್ಕ್‌ವೃತ್ತದವರೆಗೂ ಪ್ರತಿಭಟನಾ ಮೆರವಣಿಗೆನಡೆಸಿದ ಗ್ರಾಮಸ್ಥರು. ಮದ್ಯದಂಗಡಿತೆರವುಗೊಳಿಸುವಂತೆ ಆಗ್ರಹಿಸಿದರು.ಈ ಸಂದರ್ಭದಲ್ಲಿ ಮಾತನಾಡಿದಪ್ರತಿಭಟನಾಕಾರರು, ಎಮ್ಮೆದೊಡ್ಡಿಗ್ರಾಪಂ ವ್ಯಾಪ್ತಿಯಲ್ಲಿ 18 ಗ್ರಾಮಗಳಿದ್ದು,ಬಹುತೇಕ ಜನರು ಎಮ್ಮೆದೊಡ್ಡಿಗ್ರಾಮವನ್ನೇ ಅವಲಂಬಿಸಿದ್ದಾರೆ.

ಈ ಗ್ರಾಮಗಳಲ್ಲಿ ಪರಿಶಿಷ್ಟ ಜಾತಿ, ಪರಿಶಿಷ್ಟಪಂಗಡಕ್ಕೆ ಸೇರಿದ ಜನರು ಹೆಚ್ಚಿನಸಂಖ್ಯೆಯಲ್ಲಿ ವಾಸವಿದ್ದು ಕೂಲಿಕಾರ್ಮಿಕರು ಹೆಚ್ಚಿದ್ದಾರೆ ಎಂದುತಿಳಿಸಿದರು.ಎಮ್ಮೆದೊಡ್ಡಿ ಗ್ರಾಮದಮುಖ್ಯರಸ್ತೆಯಲ್ಲಿ ಸರ್ಕಾರಿ ಶಾಲೆ, ಗ್ರಾಪಂ ಕಚೇರಿ, ಪಶು ಆಸ್ಪತ್ರೆ, ವಿದ್ಯಾರ್ಥಿನಿಲಯ, ಗ್ರಂಥಾಲಯ ಸೇರಿದಂತೆಅನೇಕ ಸರ್ಕಾರಿ ಕಚೇರಿಗಳಿವೆ. ಇದೇರಸ್ತೆಯಲ್ಲಿಇತ್ತೀಚೆಗೆಸನ್‌ಮೂನ್‌ ಗ್ರೂಪ್‌ಸಂಸ್ಥೆಯವರು ಗೊಬ್ಬರ ಮಾರಾಟಮಳಿಗೆ ಮತ್ತು ಲಾಡ್ಜ್ ಉದ್ದೇಶಕ್ಕೆಂದು ಗ್ರಾಪಂನಿಂದ ಪರವಾನಗಿ ಪಡೆದು ಆಕಟ್ಟಡದಲ್ಲಿ ಮದ್ಯದಂಗಡಿಆರಂಭಿಸಿದ್ದಾರೆ ಎಂದು ಆರೋಪಿಸಿದರು.

ಸರ್ಕಾರ ಮತ್ತು ನ್ಯಾಯಾಲಯದಆದೇಶವನ್ನು ಉಲ್ಲಂಘಿಸಿಮದ್ಯದಂಗಡಿ ತೆರೆಯಲಾಗಿದೆ.ಮದ್ಯದಂಗಡಿ ಸಮೀಪದಲ್ಲೇಸರ್ಕಾರಿ ಕಚೇರಿಗಳು, ಶಾಲೆ ಇದ್ದುಸಾರ್ವಜನಿಕರಿಗೆ ತೊಂದರೆಯಾಗುತ್ತಿದೆ.ಹೆಣ್ಣುಮಕ Rಳು ರಸ್ತೆಯಲ್ಲಿ ತಿರುಗಾಡಲುಹಿಂಜರಿಯುವಂತಾಗಿದೆ ಎಂದುದೂರಿದರು.ಸನ್‌ಮೂನ್‌ ಗ್ರೂಪ್‌ ಮಾಲೀಕರು ಸ್ಥಳೀಯರಲ್ಲ. ಗ್ರಾಮದಲ್ಲಿ ಬೇರೆಉದ್ದೇಶಕ್ಕೆ ಕಟ್ಟಡ ನಿರ್ಮಿಸಿ ಗ್ರಾಪಂ ಅಧಿಕಾರಿಗಳ ಮೇಲೆ ಒತ್ತಡ ತಂದುನಕಲಿ ದಾಖಲೆಗಳನ್ನು ಸೃಷ್ಟಿಸಿಪರವಾನಗಿ ಪಡೆದುಕೊಂಡಿದ್ದಾರೆ.

ಮದ್ಯದಂಗಡಿ ತೆರೆಯಲು ಗ್ರಾಪಂ ವಿರೋಧವಿದ್ದು, ಈ ಸಂಬಂಧ ಗ್ರಾಪಂಸಭಾ ನಡವಳಿಗಳೂ ಇಲ್ಲದಿದ್ದರೂ ನಕಲಿ ದಾಖಲೆಗಳನ್ನು ಸೃಷ್ಟಿಸಿ ಮದ್ಯದಂಗಡಿಗೆ ಪರವಾನಗಿ ಪಡೆದುಕೊಂಡಿದ್ದಾರೆ.ಗ್ರಾಮದಲ್ಲಿ ಇದುವರೆಗೆ ಯಾವುದೇಮದ್ಯದಂಗಡಿ ಇಲ್ಲದ ಕಾರಣ ಜನರುನೆಮ್ಮದಿಯಿಂದ ಜೀವನ ನಡೆಸುತ್ತಿದ್ದರು.ಈ ಮದ್ಯದಂಗಡಿಯಿಂದಾಗಿ ಗ್ರಾಮದ ನೆಮ್ಮದಿಗೆ ಭಂಗ ಬಂದಿದೆ.

Advertisement

ಗ್ರಾಮಸ್ಥರು, ಯುವಕರು ಕುಡಿತದದಾಸ್ಯಕ್ಕೆ ಒಳಗಾಗುವ ಸಾದ್ಯತೆ ಇದ್ದು,ಇದರಿಂದ ಮಹಿಳೆಯರು ತೊಂದರೆಗೆಅನುಭವಿಸುವಂತಾಗಿದೆ ಎಂದರು.ಅಕ್ರಮವಾಗಿ ತೆರೆಯಲಾಗಿರುವಮದ್ಯದಂಗಡಿಯನ್ನು ಶೀಘ್ರವೇತೆರವುಗೊಳಿಸಬೇಕು ಎಂದು ಆಗ್ರಹಿಸಿದರು.

ಪ್ರತಿಭಟನೆಯಲ್ಲಿಸ್ಥಳೀಯ ಮುಖಂಡ ಹಾಗೂ ವಕೀಲಲೋಕೇಶ್‌, ಎಮ್ಮೆದೊಡ್ಡಿ ಗ್ರಾಪಂಉಪಾಧ್ಯಕ್ಷ ಛಾಯಾಪತಿ, ಗ್ರಾಪಂ ಮಾಜಿಅಧ್ಯಕ್ಷ ಕೃಷ್ಣಮೂರ್ತಿ ಸದಸ್ಯರಾದ ರವಿ,ಹನುಮಂತ, ರೈತಸಂಘ- ಹಸಿರು ಸೇನೆಜಿಲ್ಲಾಧ್ಯಕ್ಷ ದುಗಪ್ಪ ‌ ಗೌಡ ಇತರರು ಇದ್ದರು .

Advertisement

Udayavani is now on Telegram. Click here to join our channel and stay updated with the latest news.

Next