Advertisement

ಜಿಲ್ಲಾ ಹೈನುಗಾರರ ಪರಿವಾರ ಒಕ್ಕೂಟದಿಂದ ಬೃಹತ್‌ ಪ್ರತಿಭಟನೆ

05:48 PM Jan 22, 2023 | Team Udayavani |

ಬ್ರಹ್ಮಾವರ: ಉಡುಪಿ ಜಿಲ್ಲಾ ಹೈನುಗಾರರ ಪರಿವಾರ ಒಕ್ಕೂಟದ ವತಿಯಿಂದ ವಿವಿಧ ಬೇಡಿಕೆಗಳ ಈಡೇರಿಕೆಗೆ ಆಗ್ರಹಿಸಿ ಶನಿವಾರ ಉಪ್ಪೂರು ಡೇರಿ ಆವರಣದಲ್ಲಿ ಬೃಹತ್‌ ಪ್ರತಿಭಟನ ಸಭೆ ಜರಗಿತು. ಜಿಲ್ಲೆಯ ಹೈನುಗಾರರು ಮತ್ತು ಸಿಬಂದಿ ಸಾವಿರಾರು ಸಂಖ್ಯೆಯಲ್ಲಿ ಸೇರಿ ತಮ್ಮ ದುಃಖವ‌ನ್ನು ಸಭೆಯಲ್ಲಿ ತೋಡಿಕೊಂಡರು.

Advertisement

ಪ್ರಮುಖ ಬೇಡಿಕೆಗಳು: ಮುಂದಿನ ಆರ್ಥಿಕ ವರ್ಷದ ಪ್ರಾರಂಭ ಅಂದರೆ ಎ.1ರಿಂದ ಪ್ರತೀ ಲೀಟರ್‌ ಹಾಲಿಗೆ ಕನಿಷ್ಠ 2 ರೂಪಾಯಿಯನ್ನು ಒಕ್ಕೂಟವು ಪ್ರೋತ್ಸಾಹ ಧನ ರೂಪದಲ್ಲಿ ಹೈನುಗಾರರಿಗೆ ನೀಡಬೇಕು. ಹಾಲಿನ ಮಾರುಕಟ್ಟೆ ದರವನ್ನು 3 ರೂ. ಹೆಚ್ಚಿಸಿ ಅದರಲ್ಲಿ 2.50 ರೂ.ನ್ನು ಹಾಲಿನ ದರ ಶಿರೋನಾಮೆಯಡಿ ರೈತರಿಗೂ, 25 ಪೈಸೆಯನ್ನು ಸಂಘಕ್ಕೂ ಮಿಕ್ಕುಳಿದ 25 ಪೈಸೆಯನ್ನು ಸಿಬಂದಿಗೂ ನೀಡಬೇಕು.

ಹಾಲಿನ ಉತ್ಪನ್ನಗಳಾದ ತುಪ್ಪ, ಬೆಣ್ಣೆ, ಹಾಲಿನ ಪುಡಿ, ಸಿಹಿ ಉತ್ಪನ್ನ ಬೆಲೆಯು ಏರಿಕೆಯಾಗಿರುದರಿಂದ ಅದಕ್ಕೆ ಪೂರಕವಾಗಿ ಫ್ಯಾಟಿನ ದರವನ್ನು ಪರಿಷ್ಕರಿಸಬೇಕು. ಪ್ರತಿ 0.1 ಫ್ಯಾಟ್‌ಗೆ ಪ್ರಕೃತ 17 ಪೈಸೆ ದರವಿದ್ದು ಅದನ್ನು 25 ಪೈಸೆಗೆ ಏರಿಸಬೇಕು ಎಂದು ಆಗ್ರಹಿಸಿದರು.

ಸಂಘದ ಮಾರ್ಜಿನ್‌ನನ್ನು ಇದೇ ಜ.1ರಿಂದ ಜ್ಯಾರಿಗೆ ಬರುವಂತೆ ಕನಿಷ್ಠ 25 ಪೈಸೆ ಹೆಚ್ಚಿಸಬೇಕು.

Advertisement

ಜಿಲ್ಲಾ ಹೈನುಗಾರರ ಪರಿವಾರ ಒಕ್ಕೂಟ ಪರವಾಗಿ ಶೇಡಿಕೊಡ್ಲು ವಿಠಲ ಶೆಟ್ಟಿ, ಜಗದೀಶ ಕಾರಂತ, ಸಬ್ಲಾಡಿ ಮಂಜಯ್ಯ ಶೆಟ್ಟಿ, ಹಂದಟ್ಟು ಜಾನಕಿ ಹಂದೆ, ಕೆಂಚನೂರು ಸೋಮಶೇಖರ ಶೆಟ್ಟಿ, ಬಾಂಡ್ಯ ಸುಬ್ಬಣ್ಣ ಶೆಟ್ಟಿ, ತೆಕ್ಕಟ್ಟೆ ಸೂರ್ಯ ಶೆಟ್ಟಿ, ಕಾರ್ಕಳ ಉದಯ ಕೋಟ್ಯಾನ್‌, ಸಿದ್ಧಾಪುರ ಗೋಪಾಲಕೃಷ್ಣ ಕಾಮತ್‌, ನೀರೆ ಕೃಷ್ಣ ಶೆಟ್ಟಿ, ಚೇರ್ಕಾಡಿ ಅಶೋಕ್‌ ಕುಮಾರ್‌ ಶೆಟ್ಟಿ, ವಡ್ಡಮೇಶ್ವರ ಶ್ರೀಪಾದ ರೈ ಮಾತನಾಡಿದವರು. ಸಿಬಂದಿ  ಪರವಾಗಿ ಸುಜಾತ ಬಾಯರಿ, ಸುರೇಖ ಶೆಟ್ಟಿ, ಹೈನುಗಾರ ಪರವಾಗಿ ಸುರೇಂದ್ರ ಶೆಟ್ಟಿ, ವೆಂಕಟೇಶ್‌ ರಾವ್‌, ಬೆಳಪು ದೇವಿ ಪ್ರಸಾದ್‌ ಶೆಟ್ಟಿ, ಮಮತಾ ಆರ್‌. ಶೆಟ್ಟಿ, ರಾಮಚಂದ್ರ ನಾವಡ, ಪ್ರಕಾಶ್‌ ಶೆಟ್ಟಿ, ಚಂದ್ರ ಪೂಜಾರಿ, ಶ್ರೀಪತಿ ಅಧಿ ಕಾರಿ ಮುಂತಾದವರು ಮಾತಾಡಿದರು.

ಒಕ್ಕೂಟದ ಪರವಾಗಿ ಮನವಿ ಸ್ವೀಕರಿಸಿದ ಅಧ್ಯಕ್ಷ ಕೆ.ಪಿ. ಸುಚರಿತ ಶೆಟ್ಟಿ ಅವರು ಹಾಲು ಉತ್ಪಾದಕರ ಹಾಗೂ ಸಿಬಂದಿ  ಪರವಾಗಿ ಒಕ್ಕೂಟ ಕಾರ್ಯಕ್ರಮ ರೂಪಿಸಲಿದೆ ಎಂದು ಭರವಸೆ ನೀಡಿದರು.ಕಾರ್ಯಕ್ರಮದಲ್ಲಿ ನಿಕಟಪೂರ್ವ ಅಧ್ಯಕ್ಷರಾದ ರವಿರಾಜ ಹೆಗ್ಡೆ, ಪ್ರಕಾಶ್ಚಂದ್ರ ಶೆಟ್ಟಿ, ದಿವಾಕರ ಶೆಟ್ಟಿ ಭಾಗವಹಿಸಿದರು. ಪ್ರತಿಭಟನಾ ಸಭೆಯಲ್ಲಿ ಜಿಲ್ಲೆಯ ಹಳ್ಳಿ ಹಳ್ಳಿಯಿಂದ ಸಾವಿರಾರು ಹೈನುಗಾರರು ಭಾಗವಹಿಸಿ ಹೈನುಗಾರ ವಿರೋಧಿ  ಧೋರಣೆಗೆ ತಮ್ಮ ಆಕ್ರೋಶವನ್ನು ಹೊರಹಾಕಿದರು.

Advertisement

Udayavani is now on Telegram. Click here to join our channel and stay updated with the latest news.

Next