Advertisement

ಭೂ-ಕಬಳಿಕೆ ಆರೋಪ: ಕ್ರಮಕ್ಕೆ ಆಗ್ರಹ

03:20 PM Dec 22, 2020 | Suhan S |

ಬಂಗಾರಪೇಟೆ: ತಾಲೂಕಿನ ದೊಡ್ಡೂರು ಕರಪನಹಳ್ಳಿ ಗ್ರಾಪಂ ವ್ಯಾಪ್ತಿಯ ಪ್ಲಾಂಟೇಷನ್‌ ಬಳಿ ಜಮೀನಿಗೆ ನಕಲಿ ದಾಖಲೆ ಸೃಷ್ಟಿಸಿ ಮೂಲ ವಾರಸುದಾರರಾದ ಪದ್ಮ ಪ್ರಸನ್ನಕುಮಾರ್‌ ಅವರಿಗೆ ಕಂಗಾಂಡ್ಲಹಳ್ಳಿ ಮುನಿರತ್ನಂನಾಯ್ಡು ಹಾಗೂ ಇವರೊಂದಿಗಿರುವ ಮೂವರು ವಂಚನೆ ಮಾಡಿದ್ದು, ಇವರ ವಿರುದ್ಧ ಕ್ರಿಮಿನಲ್‌ ದೂರು ದಾಖಲಿಸಬೇಕೆಂದು ಒತ್ತಾಯಿಸಿ ಕರ್ನಾಟಕ ದಲಿತ ರೈತ ಸೇನೆ ಅಧ್ಯಕ್ಷ ಹುಣಸನಹಳ್ಳಿ ವೆಂಕಟೇಶ್‌ ನೇತೃತ್ವದಲ್ಲಿ ತಾಲೂಕು ಕಚೇರಿ ಮುಂದೆ ಪ್ರತಿಭಟನೆ ನಡೆಸಿದರು.

Advertisement

ಹುಣಸನಹಳ್ಳಿ ವೆಂಕಟೇಶ್‌ ಮಾತನಾಡಿ, ಡಿ.ಕೆ.ಹಳ್ಳಿ ಗ್ರಾಪಂನ ಪ್ಲಾಂಟೇಷನ್‌ಗೆ ಸೇರಿದ ಮೂರು ಎಕರೆಜಮೀನಿನ ಮೂಲ ವಾರಸುದಾರರಾದ ಪದ್ಮ ಪ್ರಸನ್ನಕುಮಾರ್‌ ಅವರ ಹೆಸರನ್ನು ನಕಲಿಯಾಗಿ ಬಳಸಿ2013 ರಲ್ಲಿ ನಕಲಿ ಜಿಪಿಎ ಅಧಿಕಾರ ಪಡೆದಿರುವ ಬಗ್ಗೆ ಸುಳ್ಳು ದಾಖಲೆ ಸೃಷ್ಟಿಸಿ ಕೊಂಡು.ಚಾರ್ಲ್ಸ್‌ಎಂಬುವವರು ನಕಲಿ ದಾಖಲೆಗಳನ್ನು ಸೃಷ್ಟಿಸಿಕೊಂಡು 2017ರಲ್ಲಿ ಜಾನ್ಸನ್‌ ಎಂಬುವವರಿಗೆ ಅಕ್ರಮವಾಗಿ ಮಾರಾಟ ಮಾಡಲಾಗಿದೆ. 2018ರಲ್ಲಿ ಜಾನ್ಸನ್‌, ಪ್ರಭಾವಿ ಮುಖಂಡ ಕಂಗಾಂಡ್ಲಹಳ್ಳಿ ಮುನಿರತ್ನಂನಾಯ್ಡುಅವರಮಗಭಾಸ್ಕರ್‌ಎಂಬುವವರಿಗೆ ಕ್ರಮ ಮಾಡಿಕೊಟ್ಟಿರುವುದು ವಿವಾದಕ್ಕೆ ಕಾರಣವಾಗಿದೆ ಎಂದು ಆರೋಪಿಸಿದರು.

ಸುಳ್ಳು ದಾಖಲೆ ಸೃಷ್ಟಿ ಮಾಡಲು ಸಹಕರಿಸಿದ ಅಧಿಕಾರಿಗಳನ್ನು ವಜಾ ಮಾಡಿ, ಕ್ರಿಮಿನಲ್‌ ಕೇಸ್‌ ದಾಖಲಿಸಬೇಕೆಂದು ಆಗ್ರಹಿಸಿದರು. ಪ್ರತಿಭಟನೆಯಲ್ಲಿ ಸೇನೆಯ ಗೌರವಾಧ್ಯಕ್ಷ ಎನ್‌.ಅಜಿತ್‌ಕುಮಾರ್‌, ಸೇಟ್‌ ಕಾಂಪೌಂಡ್‌ ಮಾರಿ, ದೇಶಿಹಳ್ಳಿ ಮಲ್ಲಿಕಾರ್ಜುನ್‌,ಸಕ್ಕನಹಳ್ಳಿ ಕುಪೇಂದ್ರ, ಅಂಬೇಡ್ಕರ್‌ ನವ ರಕ್ಷಣಾ ವೇದಿಕೆಯ ಜಿಲ್ಲಾಧ್ಯಕ್ಷ ಬಟ್ರಕುಪ್ಪ ಅರುಣ್‌, ಬ್ಯಾಡಬೆಲೆಅಂಬರೀಶ್‌, ಸೇಟ್‌ ಕಾಂಪೌಂಡ್‌ ಅಜಯ್‌, ಅರವಿಂದ, ಗಣೇಶ್‌ ಮುಂತಾದವರು ಹಾಜರಿದ್ದರು.

ಕಾರ್ಖಾನೆ ಪುನಶ್ಚೇತನ ಪ್ರಯತ್ನ :

ಕೆಜಿಎಫ್: ಕೆಜಿಎಫ್ ಭಾರತ್‌ ಗೋಲ್ಡ್‌ ಮೈನ್ಸ್‌ ಯುನೈಟೆಡ್‌ ಎಂಪ್ಲಾಯಿಸ್‌ ಇಂಡಸ್ಟ್ರಿಯಲ್‌ ಸಹಕಾರ ಸಂಘನಿಯಮಿತ 2019-20ನೇ ಸಾಲಿನ 22ನೇ ಸಾಲಿನ ಸರ್ವ ಸದಸ್ಯರ ವಾರ್ಷಿಕ ಮಹಾಸಭೆಯು ಸಂಘದ ಅಧ್ಯಕ್ಷ ಕೆ.ಅನ್ಬಳಗನ್‌ ಅಧ್ಯಕ್ಷತೆಯಲ್ಲಿ ನಡೆಯಿತು.

Advertisement

ಜ್ಯೋತಿ ಬೆಳಗುವುದರ ಮೂಲಕಕಾರ್ಯಕ್ರಮಕ್ಕೆ ಚಾಲನೆ ನೀಡಲಾಯಿತು. ಚಿನ್ನದ ಗಣಿಗಳ ಪುನಶ್ಚೇತನಕ್ಕೆ ಹಾಗೂ ಗಣಿ ಕಾರ್ಮಿಕರ ವಸತಿ ಗೃಹಗಳನ್ನು ಅವರುಗಳಿಗೆ ಸ್ವಂತ ಮಾಡಿಕೊಡುವಂತೆ ಒತ್ತಾಯ ಮಾಡ ಲಾಯಿತು. ಸಂಘದ ಅಧ್ಯಕ್ಷ ಕೆ.ಅನಳಗನ್‌ ಮಾತನಾಡಿದ, ಬಿ.ಜಿ.ಎಂ.ಎಲ್‌. ಕಾರ್ಖಾನೆಯ ಪುನಶ್ಚೇತನಕ್ಕಾಗಿ ಕೇಂದ್ರ ಸರ್ಕಾರದ ಮಾರ್ಗ ದರ್ಶನದಲ್ಲಿ, ಸಿಎಂ ಬಿ.ಎಸ್‌. ಯಡಿಯೂರಪ್ಪ ಅಧ್ಯಕ್ಷತೆಯಲ್ಲಿ ಕೇಂದ್ರಕಲ್ಲಿದ್ದಲು ಮತ್ತು ಗಣಿ ಸಚಿವ ಪ್ರಹ್ಲಾದ್‌ ಜೋಶಿ ನೇತೃತ್ವದಲ್ಲಿ ಆಗಸ್ಟ್‌ನಲ್ಲಿ  ಸಭೆ ನಡೆಸಿರುವುದುಕಾರ್ಮಿಕರುಗಳಿಗೆ ಧೈರ್ಯ ತುಂಬಿದಂತಾಗಿದೆ.

ಸಂಘದ ಕಾರ್ಯದರ್ಶಿ ಲಯನ್‌ ಡಾ.ಆರ್‌.ಪ್ರಭುರಾಂ, 2019-20ನೇ ಸಾಲಿನ ವಾರ್ಷಿಕ ಸರ್ವ ಸದಸ್ಯರ ಸಭೆಯ ಸೂಚನಾ ಪತ್ರ ಓದಿ ವಿವರಿಸಿದರು. ಉಪಾಧ್ಯಕ್ಷರಾದ ಟಿ.ವಿನ್ಸೆಂಟ್‌, ನಿರ್ದೇಶಕರಾದ ಆರ್‌.ಗೋಪಿನಾಥ್‌, ಶ್ರೀನಿವಾಸನ್‌, ಸಾವಿತ್ರಿ, ಮುನಿಯಮ್ಮ, ಕಬಿಲನಾಥನ್‌, ಆನಂದನ್‌, ನಲ್ಲಮನವಾಲನ್‌, ಎ.ಸುಬ್ರಹ್ಮಣಿ ಇದ್ದರು.

Advertisement

Udayavani is now on Telegram. Click here to join our channel and stay updated with the latest news.

Next