ಮಾನ್ವಿ: ಕೇಂದ್ರ ಸರ್ಕಾರದ ರೈತವಿರೋಧಿ ಧೋರಣೆ ಖಂಡಿಸಿ ಮತ್ತುಪಟ್ಟಣದ ರಿಲಾಯನ್ಸ್ ಪೆಟ್ರೋಲ್‌ಬಂಕ್ ಬಳಿ ಕರ್ನಾಟಕ ರೈತ ಸಂಘದ ಕಾರ್ಯಕರ್ತರು ಪ್ರತಿಭಟನೆ ನಡೆಸಿದರು.
ಅಖೀಲ ಭಾರತ ಕಿಸಾನ್ ಸಂಘರ್ಷಸಮನ್ವಯ ಸಮಿತಿ ನೀಡಿದ್ದ ಕರೆಯಮೇರೆಗೆ ಪ್ರತಿಭಟನೆ ನಡೆಸಿದ ನಂತರಮಾತನಾಡಿದ ಕೆಆರ್‌ಎಸ್ ಜಿಲ್ಲಾಧ್ಯಕ್ಷಅಶೋಕ ನೀಲಗಲ್, ರೈತ ವಿರೋಧಿ
ಕಾಯ್ದೆಗಳ ರದ್ದತಿಗೆ ಆಗ್ರಹಿಸಿ ಕಳೆದ31 ದಿನಗಳಿಂದ ಸಿಂಘ್ ಗಡಿಯಲ್ಲಿ ಕೊರೆಯುವ ಚಳಿಯಲ್ಲಿ 30ಕ್ಕೂ ಹೆಚ್ಚು ರೈತರು ತಮ್ಮ ಜೀವನ ಕಳೆದುಕೊಂಡಿದ್ದಾರೆ. ಸಾವಿರಾರುರೈತರು ತಮ್ಮ ಪ್ರಾಣವನ್ನು ಪಣಕ್ಕಿಟ್ಟು ಹೋರಾಟ ನಡೆಸುತ್ತಿದ್ದಾಗ್ಯೂ ಕೇಂದ್ರ ಸರ್ಕಾರ ಬಹುರಾಷ್ಟ್ರೀಯ ಕಂಪನಿಗಳ ಪರ ಧೋರಣೆ ಅನುಸರಿಸುತ್ತಿದೆ ಎಂದು ಕಿಡಿಕಾರಿದರು.
ಭೂ ಸುಧಾರಣಾ ಕಾಯ್ದೆಯಿಂದ ಕೃಷಿ ಭೂಮಿ ಬಂಡವಾಳ ಶಾಹಿಗಳ ಪಾಲಾಗಲಿದೆ. ರೈತರು ಭೂಮಿ ಕಳೆದು ಕೊಳ್ಳಲಿದ್ದಾರೆ.ಆದ್ದರಿಂದ ಕಾಯ್ದೆಯೆ 79ಎ, 79ಬಿನಿಯಮಗಳನ್ನು ತೆಗೆಯಬಾರದು.ಆದ್ದರಿಂದ ಕೂಡಲೇ ಕೇಂದ್ರ ಸರ್ಕಾರವು ಕೃಷಿ ತಿದ್ದುಪಡಿಕಾಯ್ದೆಗಳನ್ನು ರದ್ದುಗೊಳಿಸಬೇಕಮತ್ತು ಮಾತುಕತೆ ಸಭೆಗೆ ಎಲ್ಲಾ ಸಂಘಟನೆಗಳ ಪ್ರಮುಖರನ್ನುಆಹ್ವಾನಿಸಬೇಕು ಹಾಗೂ ಎಂಎಸ್ ಪಿನ್ನು ಕಾನೂನು ವ್ಯಾಪ್ತಿಗೊಳಿಸಬೇಕು, ಬೆಳೆ ನಷ್ಟ ಪರಿಹಾರ ಮಂಜೂರು ಸೇರಿದಂತೆ ಇನ್ನಿತರ ಬೇಡಿಕೆಗಳನ್ನು ಈಡೇರಿಸಬೇಕೆಂದು ಒತ್ತಾಯಿಸಿದರು.
ಈ ವೇಳೆ ಕೆಆರ್‌ಎಸ್ ಜಿಲ್ಲಾಧ್ಯಕ್ಷ ಅಶೋಕ ನೀಲಗಲ್, ಮುಖಂಡರಾದ ಬುಡ್ಡಪ್ಪ ನಾಯಕ, ಆನಂದ ಭೋವಿ,ಲಾಲಪ್ಪ ನಾಯಕ, ವಿರೇಶ ನಾಯಕ,ರಮೇಶ ಸಿರವಾರ, ನಾಗರಾಜ ಸಿರವಾರ, ಹುಲಿಗೆಪ್ಪ ಸಿರವಾರ,ವೆಂಕಟೇಶ ನಾಯಕ, ಬಸವರಾಜಚಾಗಭಾವಿ, ಮಾರೆಪ್ಪ ಲಕ್ಕಂದಿನ್ನಿ, ಶಿವಯ್ಯ ಲಕ್ಕಂದಿನ್ನಿ, ದೇವಪ್ಪ ನಾಯಕ ಇದ್ದರು.