Advertisement

ವಿಜಯಸಿಂಗ್‌ ವಿರುದ್ಧ ಮಾದಿಗ ದಂಡೋರ ಪ್ರತಿಭಟನೆ

07:55 AM May 21, 2019 | Suhan S |

ಬೀದರ: ಔರಾದ ಪಟ್ಟಣ ಪಂಚಾಯತಿ ಚುನಾವಣೆ ಹಿನ್ನೆಲೆಯಲ್ಲಿ ನಡೆದ ಪಕ್ಷದ ಸಭೆಯಲ್ಲಿ ಎಂಎಲ್ಸಿ ವಿಜಯಸಿಂಗ್‌ ಅವರು ವಿಜಯಕುಮಾರ ಕೌಡ್ಯಾಳ ಅವರನ್ನು ಅವಮಾನಿಸಿದ್ದಾರೆ ಎಂದು ಆರೋಪಿಸಿ ಮಾದಿಗ ದಂಡೋರ ಸಂಘಟನೆ ವತಿಯಿಂದ ಸೋಮವಾರ ನಗರದಲ್ಲಿ ಪ್ರತಿಭಟನೆ ನಡೆಸಲಾಯಿತು.

Advertisement

ಔರಾದ ಪಟ್ಟಣದಲ್ಲಿ ನಡೆದ ಸಭೆಯಲ್ಲಿ ವಿಜಯಕುಮಾರ ಕೌಡ್ಯಾಳ ಅವರಿಗೆ ಎಂಎಲ್ಸಿ ವಿಜಯಸಿಂಗ್‌ ಜೀವ ಬೇದರಿಕೆ ಹಾಕಿದ್ದಾರೆ. ಅಹಂಕಾರ ಮತ್ತು ಅಧಿಕಾರ ದರ್ಪ ತೋರಿಸಿ ತೆಳ ಸಮುದಾಯದವರ ಏಳ್ಗೆಗೆ ಮಾರಕವಾಗುತ್ತಿದ್ದಾರೆ. ಹಲ್ಲೆಗೆ ಮುಂದಾದ ಎಂಎಲ್ಸಿ ವಿರುದ್ಧ ಕೂಡಲೇ ಕಾನೂನು ಕ್ರಮ ಜರುಗಿಸಬೇಕು ಎಂದು ಒತ್ತಾಯಿಸಿ ಪ್ರತಿಭಟನೆ ನಡೆಸಿದರು. ಇದೇ ಸಂದರ್ಭದಲ್ಲಿ ವಿಜಯಸಿಂಗ್‌ ಅವರ ಪ್ರತಿಕೃತಿ ದಹನ ಮಾಡಲಾಯಿತು. ಮಾದಿಗ ಸಮಾಜದ ಅನೇಕ ಮುಖಂಡರು ಭಾಗವಹಿಸಿದ್ದರು.

Advertisement

Udayavani is now on Telegram. Click here to join our channel and stay updated with the latest news.

Next