Advertisement
ಉತ್ತರಪ್ರದೇಶದ ಹತ್ರಾಸ್‌ನಲ್ಲಿ ದಲಿತ ಯುವತಿ ಹತ್ಯೆ ಖಂಡಿಸಿ ನಡೆಸಿದ ಕ್ಯಾಂಡಲ್ ಮೆರವಣಿಗೆಯಲ್ಲಿ ಭಾಗವಹಿಸಿ ಅವರು ಮಾತನಾಡಿದರು. ಉತ್ತರ ಪ್ರದೇಶದ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ಇಂಥ ಪ್ರಕರಣಗಳನ್ನು ಖಂಡಿಸುವ ಬದಲಿಗೆ ಸಾಥ್ ನೀಡುತ್ತಿರುವುದು ಇಲ್ಲಿಯ ಮಹಿಳೆಯರಿಗೆ ರಕ್ಷಣೆ ಇಲ್ಲದಂತಾಗಿದೆ. ಮಹಿಳೆ ಮತ್ತು ದಲಿತರ ಮೇಲಿನ ಅತ್ಯಾಚಾರ ಹಾಗೂ ಕೊಲೆ ಪ್ರಕರಗಳು ನಿರಂತರವಾಗಿದ್ದರೂ ಕೇಂದ್ರ ಸರಕಾರ ಕಣ್ಣುಮುಚ್ಚಿ ಕುಳಿತಿದೆ. ಸಾಂತ್ವನ ಹೇಳಲು ಹೋಗಿದ್ದ ಕಾಂಗ್ರೆಸ್ ರಾಷ್ಟ್ರೀಯ ಅಧ್ಯಕ್ಷ ರಾಹುಲ್ ಗಾಂಧಿ ಮತ್ತು ಪ್ರಿಯಾಂಕ ಗಾಂಧಿ ಅವರ ಮೇಲೆ ಪೊಲೀಸರ ದೌರ್ಜನ್ಯ ಮಾಡಿರುವುದು ಖಂಡನೀಯ. ಯುಪಿ ಮತ್ತು ಕೇಂದ್ರ ಸರಕಾರ ನೈತಿಕವಾಗಿ ದಿವಾಳಿಯಾಗಿದೆ ಎಂದು ಆಕ್ರೋಶ ವ್ಯಕ್ತಪಡಿಸಿದರು.
Related Articles
Advertisement
ಸಂಘಟನೆ ಅಧ್ಯಕ್ಷ ಟಿ.ಮಹೇಂದ್ರ ಮಾತನಾಡಿ, ಈ ಪ್ರಕರಣದಲ್ಲಿ ಯುಪಿ ಸರ್ಕಾರದ ನಡೆಯನ್ನು ಸೂಕ್ಷ್ಮವಾಗಿ ಗಮನಿಸಿದರೆ ಅಪರಾಧ ಕೃತ್ಯಕ್ಕೆ ಬೆಂಬಲ ನೀಡಿರುವುದು ಕಂಡು ಬರುತ್ತಿದೆ. ದಲಿತ ಯುವತಿ ಮೇಲೆ ಅತ್ಯಾಚಾರ, ಕೊಲೆ ಹಾಗೂ ದೈಹಿಕ ಹಿಂಸೆ ಮಾಡಿರುವುದು ಘೋರ ದೌರ್ಜನ್ಯವಾಗಿದೆ. ಮಹಿಳೆಯರಿಗೆ ಗೌರವ ನೀಡಬೇಕಾದ ಸಮಾಜದಲ್ಲಿ ಹೀಗೆ ಮೇಲಿಂದ ಮೇಲೆ ದೌರ್ಜನ್ಯ ಪ್ರಕರಣಗಳು ನಡೆಯುತ್ತಿರುವುದು ನಾಗರಿಕ ಸಮಾಜವೇ ತಲೆತಗ್ಗಿಸುವಂತಾಗಿದೆ. ಕೂಡಲೇ ಅಲ್ಲಿನ ಸರ್ಕಾರ ಪಾರದರ್ಶಕವಾಗಿ ತನಿಖೆ ನಡೆಸಿ ಅಪರಾಧಿಗಳನ್ನು ಗಲ್ಲು ಶಿಕ್ಷೆಗೊಳಪಡಿಸಬೇಕು. ಉತ್ತರ ಪ್ರದೇಶದಲ್ಲಿ ಆಗಾಗ ಮಹಿಳೆಯರ ಮೇಲೆ ದೌರ್ಜನ್ಯಗಳು ನಡೆಯುತ್ತಿರುವುದನ್ನು ಸರಕಾರ ಗಂಭೀರವಾಗಿ ಪರಿಗಣಿಸಿ ತಪ್ಪಿತಸ್ಥರಿಗೆ ಸೂಕ್ತ ಶಿಕ್ಷೆಯಾಗಬೇಕು ಎಂದು ಒತ್ತಾಯಿಸಿದರು.
ಪ್ರತಿಭಟನೆಯಲ್ಲಿ ಪುರಸಭೆ ಸದಸ್ಯ ಜೋಗಿ ಹನುಮಂತ, ಸಂಘಟನೆಯ ಚಿಂತ್ರಪಳ್ಳಿ ನಾಗರಾಜ್, ಕೊಳ್ಳಿ ಪ್ರಕಾಶ್, ಹುಲ್ಮನಿ ಮಂಜುನಾಥ, ಬೆಣ್ಣಿಕಲ್ಲು ಹನುಮಂತಪ್ಪ, ಕುಪ್ಪಿನಕೇರಿ ವಿರೂಪಾಕ್ಷ, ಭಂಟರಕುಬೇರ, ಕನ್ನಿಹಳ್ಳಿ ಜಗದೀಶ್, ವಟ್ಟಮ್ಮನಹಳ್ಳಿ ಉದಯ್, ದೇವರಮನಿ ನೀಲಪ್ಪ, ಕೋಟೆಪ್ಪ, ದಾದಮ್ಮನವರ ಪ್ರಭು, ಎನ್.ಡಿ.ಕೆರೆ ಉಮೇಶ್, ಟಿ.ಸೋಮಶೇಖರ್, ಟಿ.ಗೌತಮ್, ಎ.ಕೆ. ಮಂಜುನಾಥ, ಅಂಜಿನಪ್ಪ, ಬಿ.ಪರಶುರಾಮ,ಕೆಚ್ಚಿನಬಂಡಿ ಸಂತೋಷ, ಪ್ರಭು ವಾಲ್ಮೀಕಿ, ಎಸ್ .ಪ್ರವೀಣ ಇತರರಿದ್ದರು.