Advertisement
ಈ ಸಂದರ್ಭದಲ್ಲಿ ಮಾಜಿ ಶಾಸಕ ಎನ್.ಟಿ. ಬೊಮ್ಮಣ್ಣ ಮಾತನಾಡಿ, ಜಾತ್ಯತೀತವಾಗಿ, ಪಕ್ಷಾತೀತವಾಗಿ ಇಂಥ ಕೃತ್ಯಗಳನ್ನು ಎಸಗುವವರ ವಿರುದ್ಧ ಹೋರಾಟ ನಡೆಸಬೇಕಾಗಿದೆ. ಜನವಿರೋಧಿ ನೀತಿಯ ಸರ್ಕಾರದ ವಿರುದ್ಧ ಜನಾಂದೋಲನ ಮಾಡುವ ಮೂಲಕ ಪಾಠ ಕಲಿಸಬೇಕಾಗಿದೆ ಎಂದರು. ಕರ್ನಾಟಕ ವಾಲ್ಮೀಕಿ ನಾಯಕ ಮಹಾಸಭಾ ರಾಜ್ಯ ಸಂಘಟನಾ ಕಾರ್ಯದರ್ಶಿ ನಾಗಮಣಿ ಜಿಂಕಲ್ ಮಾತನಾಡಿ, ದೇಶದಲ್ಲಿ ಹೆಣ್ಣು ಮಕ್ಕಳಿಗೆ ಮುಕ್ತ ಸ್ವಾತಂತ್ರವಿಲ್ಲದಂತಾಗಿದೆ ಎಂದು ಆಕ್ರೋಶ ವ್ಯಕ್ತಪಡಿಸಿದರು.
Related Articles
Advertisement
ಉತ್ತರ ಪ್ರದೇಶದ ಹತ್ರಾಸ್‌ನಲ್ಲಿ 19ವರ್ಷದ ಯುವತಿಯನ್ನು ನಾಲ್ಕು ಜನರು ಸೇರಿ ಅತ್ಯಂತ ಕ್ರೂರವಾಗಿ ಸಾಮೂಹಿಕವಾಗಿ ಅತ್ಯಾಚಾರವೆಸಗಿದ್ದಾರೆ. ಯುವತಿಯ ನಾಲಿಗೆಯನ್ನು ಕತ್ತರಿಸಿದ್ದಾರೆ. ಬೆನ್ನು ಮೂಳೆ ಮುರಿದಿದ್ದಾರೆ. ಕತ್ತನ್ನು ತಿರುಗಿಸಿ ಅತ್ಯಂತ ಕ್ರೂರವಾಗಿ ಕೊಲೆ ಮಾಡಿದ್ದಾರೆ. ಇದು ಅತ್ಯಂತ ಅಮಾನವೀಯ ಘಟನೆಯಾಗಿದೆ ಎಂದು ಪ್ರತಿಭಟನಾನಿರತರು ಅಸಮಧಾನ ವ್ಯಕ್ತಪಡಿಸಿದ್ದಾರೆ.
ಅತ್ಯಾಚಾರಕ್ಕೆ ಒಳಗಾಗಿ ದೆಹಲಿಯಆಸ್ಪತ್ರೆಯಲ್ಲಿ ಕೊನೆಯುಸಿರೆಳೆದಿದ್ದ ಯುವತಿ ಮೃತದೇಹವನ್ನು ಕುಟುಂಬಕ್ಕೆ ಒಪ್ಪಿಸದೆ, ಪೋಷಕರಿಗೆ ಮಾಹಿತಿ ನೀಡದೆ ಪೊಲೀಸ್ ಸರ್ಪಗಾವಲಿನಲ್ಲಿ ಸುಟ್ಟು ಹಾಕಿರುವ ಉತ್ತರ ಪ್ರದೇಶ ಸರ್ಕಾರ, ಪೊಲೀಸರ ಆಡಳಿತ
ಯಂತ್ರ ಕೈಗೊಂಡಿರುವ ಕ್ರಮ ಅತ್ಯಂತ ಖಂಡನೀಯವಾಗಿದೆ. ಅತ್ಯಾಚಾರಿಗಳಿಗೆ ಕಠಿಣ ಶಿಕ್ಷೆ ಆಗಬೇಕು. ಅದು ಭವಿಷ್ಯದಲ್ಲಿ ಇತರರಿಗೆ ಪಾಠವಾಗಬೇಕು. ಸಮಾಜದಲ್ಲಿ ಇಂಥ ಘಟನೆಗಳನ್ನು ಮರುಕಳಿಸದಂತೆ ಕ್ರಮಕೈಗೊಳ್ಳಬೇಕು ಎಂದು ಜಿಲ್ಲಾಡಳಿತದ ಮೂಲಕ ರಾಷ್ಟ್ರಪತಿಗಳಿಗೆ ಮನವಿ ಸಲ್ಲಿಸಲಾಯಿತು.
ಪ್ರತಿಭಟನೆಯಲ್ಲಿ ಸಂಘಟನೆಯ ಎನ್. ಸತ್ಯನಾರಾಯಣ, ಕೆ.ಗಾದಿಲಿಂಗಪ್ಪ, ವಿ.ಎಸ್. ಶಿವಶಂಕರ್, ದುರುಗಪ್ಪ ತಳವಾರ, ವಿ.ಎನ್. ರಾಮಚಂದ್ರ, ದುರ್ಗೇಶ್, ನಾಗರಾಜ, ಯರ್ರಿಸ್ವಾಮಿ, ಪಿ.ಟಿ. ಮಂಜುನಾಥ್, ಬಸವರಾಜ್, ದುರ್ವಾಸ್, ಜನಾರ್ದನ ನಾಯಕ, ವೆಂಕಟೇಶ್, ವೀರಾಂಜನೇಯ, ಟಿ. ಈಶ್ವರ್, ಲೋಕೇಶ್, ಗಣೇಶ್, ಹುಸೇನಪ್ಪ, ಕಿಶೋರ್, ಬಾಲು, ಬಿ. ರುದ್ರಪ್ಪ ಸೇರಿದಂತೆ ಹಲವರಿದ್ದರು.