Advertisement

ಕೇಂದ್ರ ಬಜೆಟ್‌ ವಿರೋಧಿಸಿ ಪ್ರತಿಭಟನೆ

03:03 PM Feb 05, 2022 | Team Udayavani |

ತುಮಕೂರು: ಜನತೆಯ ಸಂಕಟಗಳಿಗೆ ಕೇಂದ್ರದ ಬಜೆಟ್‌ ಸ್ಪಂದಿಸಿಲ್ಲ ಎಂದು ಸಿಐಟಿಯು ರಾಜ್ಯಾ ಧ್ಯಕ್ಷರಾದ ಎಸ್‌. ವರಲಕ್ಷ್ಮೀ ಆರೋಪಿಸಿದರು.

Advertisement

ಸಿಐಟಿಯು ರಾಜ್ಯ ಸಮಿತಿ ಕರೆಯಂತೆ ಕೆಂದ್ರ ಸರ್ಕಾರದ ಜನ ವಿರೋಧಿ ಬಜೆಟ್‌ ವಿರೋಧಿಸಿ, ನಗರದ ಚರ್ಚ್‌ ಚೌಕದಲ್ಲಿ ಸಿಐಟಿಯು ಆಯೋಜಿಸಿದ್ದಪ್ರತಿಭಟನೆಯಲ್ಲಿ ಮಾತನಾಡಿದ ಅವರು, ಕೋವಿಡ್‌ಸಂಕಷ್ಟದಲ್ಲಿರುವ ಜನತೆಗೆ ಯಾವುದೇ ಪರಿಹಾರ ನೀಡದೆ ಈ ಬಜೆಟ್‌ ಜನತೆಗೆ ಮೋಸ ಮಾಡಿದೆ ಎಂದರು.

ಕಾರ್ಪೋರೇಟ್‌ ಧಣಿಗಳಿಗೆ ವಿನಾಯಿತಿ: ಸಿಐಟಿಯು ಜಿಲ್ಲಾಧಕ್ಷ ಸೈಯದ್‌ ಮುಜೀಬ್‌ ಮಾತನಾಡಿ, ಆಹಾರ, ರಸಗೊಬ್ಬರ, ಪೆಟ್ರೋಲಿಯಂಉತ್ಪನ್ನಗಳ ಸಹಾಯಧನವನ್ನು ಕಡಿತ ಮಾಡಿರುವುದರಿಂದ ಬೆಲೆ ಏರಿಕೆ ಮತ್ತಷ್ಟು ಆಗಲಿದೆ. ಜನತೆ ಗಳಿಕೆಯ ಅವಕಾಶ ಕಳೆದುಕೊಂಡಿರುವಾಗ ಹಳ್ಳಿಗಳಿಗೆ ಸೇರಿದಕೂಲಿ ಕಾರ್ಮಿಕರಿಗೆ ಉದ್ಯೋಗ ಖಾತರಿ ಯೋಜ  ನೆಗೆ, ಕೃಷಿ ಉತ್ಪನ್ನ ಭತ್ತ, ಗೋಧಿ ಕೊಳ್ಳುವಿಕೆಗೆ ಇದ್ದ ಸಹಾಯಧನಗಳ ಕಡಿತ ಮಾಡಿ ಎಲ್ಲರನ್ನು ಮತ್ತಷ್ಟು ಕಷ್ಟಗಳಿಗೆ ದೂಡಲಿದೆ. ಜನತೆಯ ಕಲ್ಯಾಣಕ್ಕೆ ಅನು ದಾನ ನೀಡಲು ತಯಾರಿಲ್ಲದ ಸರ್ಕಾರ. ಕಾರ್ಪೋರೇಟ್‌ ಧಣಿಗಳಿಗೆ 72, 041 ಕೋಟಿ ವಿನಾಯ್ತಿನೀಡದ್ದು ಏಕೆ ಎಂದು ಪ್ರಶ್ನಿಸಿದರು.

ಉದ್ಯೋಗ ಸೃಷ್ಟಿ ಇಲ್ಲ: ಸಿಐಟಿಯು ತಾಲೂಕು ಪ್ರಧಾನ ಕಾರ್ಯದರ್ಶಿ ರಂಗಧಾಮಯ್ಯ ಮಾತನಾಡಿ, ನೀರುದ್ಯೋಗ ಹೆಚ್ಚಿರುವ ಸಮಯದಲ್ಲಿ ಉದ್ಯೋಗ ಸೃಷ್ಟಿಗೆ ಏನು ಮಾಡಿಲ್ಲ ಎಂದರು.

ಸಿಐಟಿಯು ತಾಲೂಕು ಅಧ್ಯಕ್ಷ ಷಣ್ಮಖಪ್ಪ ಮಾತನಾಡಿ, ದೇಶದ ಆಸ್ತಿ ಮೂರು ಕಾಸಿಗೆ ಮಾರುತ್ತಿದ್ದಾರೆ ಎಂದು ಆರೋಪಿಸಿದರು. ಪೀಟ್‌ವೇಲ್‌ ಟೂಲ್ಸ್‌ ಆ್ಯಂಡ್‌ ಪೋಜಿಂಗ್‌ ಪೈ.ಲಿ. ಕಾರ್ಮಿಕರ ಸಂಘದ ಪ್ರಧಾನ ಕಾರ್ಯದರ್ಶಿ ಸುಜಿತ್‌ ನಾಯಕ್‌ ಮಾತನಾಡಿ, ರೈತ ಕಾರ್ಮಿಕರ ಸಖ್ಯತೆ ಹೋರಾಟ ಅಗತ್ಯ ಎಂದರು.

Advertisement

ತುಮಕೂರು ಪೌರ ಕಾರ್ಮಿಕರ ಸಂಘ ನಾಗರಾಜು, ಕಸದ ಆಟೋ ಚಾಲಕರ ಸಂಘ ಪ್ರಧಾನ ಕಾರ್ಯದರ್ಶಿ ಶಿವರಾಜು, ಶಿವಕುಮಾರ್‌ ಸ್ವಾಮಿ, ರಾಘವೇಂದ್ರ, ಕಟ್ಟಡ ಕಾರ್ಮಿಕರ ಸಂಘ ಕಲೀಲ್‌, ಸಿಐಟಿಯು ಜಿಲ್ಲಾ ಕಾರ್ಯದರ್ಶಿ ಎನ್‌.ಕೆ. ಸುಬ್ರಮಣ್ಯ, ಸಿಐಟಿಯು ಖಜಾಂಚಿ ಎ. ಲೊಕೇಶ್‌ ಮಾತನಾಡಿದರು. ಸಿಐಟಿಯುಜಿಲ್ಲಾ ಪ್ರಧಾನ ಕಾರ್ಯದರ್ಶಿ ಜಿ. ಕಮಲಾ, ಅಂಗನವಾಡಿ ನೌಕರ ಸಂಘ ಜಿಲ್ಲಾ ಪ್ರಧಾನ ಕಾರ್ಯದರ್ಶಿ ಗುಲ್ಜಾರ್‌ಬಾನು, ಗೌರಮ್ಮ, ಜಬಿನಾ, ಪುಟ್‌ಪಾತ್‌ ವ್ಯಾಪಾರಿಸಂಘದ ವಸಿಂ, ಮುತ್ತುರಾಜ್‌, ಸಿದ್ದಿ ವಿನಾಯಕ ಮಾರು ಕಟ್ಟೆ ಸಂಘದ ಶ್ರೀಧರ್‌, ರವಿ ಹಾಗೂ ಇತರರು ಇದ್ದರು

ದುಡಿಯುವ ಜನರ ನಿರ್ಲಕ್ಷ್ಯ: ಪ್ರತಿಭಟನಾಕಾರರ ಆರೋಪ :ಎಲ್ಲರಿಗೂ ಸಾರ್ವತ್ರಿಕವಾಗಿ ಸಾಮಾಜಿಕ ಭದ್ರತೆಯ ಪರಿಹಾರ ಮತ್ತು ವಿಸ್ತರಣೆಯ ಬೇಡಿಕೆಗಳ ಹೊರತಾಗಿಯೂ, ರಾಷ್ಟ್ರಕ್ಕೆ ಸಂಪತ್ತನ್ನು ಸೃಷ್ಟಿಸುವ ದುಡಿಯುವ ಜನರನ್ನು ಬಜೆಟ್‌ ಸಂಪೂರ್ಣವಾಗಿ ನಿರ್ಲಕ್ಷಿಸಿದೆ. ಆಹಾರ ಸಬ್ಸಿಡಿಗಳಲ್ಲಿ ತೀವ್ರ ಕಡಿತದ ಜೊತೆಗೆ ಇಂಧನ ಬೆಲೆಗಳು ಸೇರಿದಂತೆ ಎಲ್ಲ ಅಗತ್ಯ ವಸ್ತುಗಳವ್ಯವಸ್ಥಿತ ಬೆಲೆ ಏರಿಕೆಯ ಜೊತೆಗೆ ಪರೋಕ್ಷ ತೆರಿಗೆಗಳ ಹೆಚ್ಚುತ್ತಿರುವ ಹೊರೆಯ ಮೂಲಕ ಶ್ರಮವಹಿಸುವ ಜನರನ್ನು ಸರ್ಕಾರವು ಮತ್ತಷ್ಟು ಸಂಕಷ್ಟಕ್ಕೆ ದೂಡುತ್ತಿದೆ ಎಂದು ಪ್ರತಿಭಟನಾಕಾರರು ಆರೋಪಿಸಿದರು.

Advertisement

Udayavani is now on Telegram. Click here to join our channel and stay updated with the latest news.

Next