ಉಡುಪಿ: ಟಿಪ್ಪು ಜಯಂತಿ ಆಚರಣೆಯನ್ನು ಸರಕಾರ ರದ್ದುಪಡಿಸದಿದ್ದರೆ ರಾಜ್ಯಾದ್ಯಂತ ಹೋರಾಟ ನಡೆಸಲಾಗುವುದು ಎಂದು ವಿಧಾನ ಪರಿಷತ್ ವಿಪಕ್ಷ ನಾಯಕ ಕೋಟ ಶ್ರೀನಿವಾಸ ಪೂಜಾರಿ ಎಚ್ಚರಿಕೆ ನೀಡಿದ್ದಾರೆ. ಇತಿಹಾಸದುದ್ದಕ್ಕೂ ಮನುಕುಲದ ಮೇಲೆ ಕ್ರೌರ್ಯ ನಡೆಸಿ ಕರಾವಳಿ ಜಿಲ್ಲೆಯ ನೆತ್ತರುಕೆರೆಯಲ್ಲಿ ರಕ್ತದೋಕುಳಿ ಹರಿಸಿದ, ಮಂಗಳೂರಿನ ಹಲವಾರು ಚರ್ಚ್‌ಗಳನ್ನು ಧರೆಗುರುಳಿಸಿದ ಟಿಪ್ಪುವನ್ನು ಕರ್ನಾಟಕ ಸರಕಾರ ವೈಭವೀಕರಿಸುತ್ತಿರುವುದು ದುರದೃಷ್ಟಕರ. ಟಿಪ್ಪು ಜಯಂತಿ ಆಚರಿಸಲು ಹೆಜ್ಜೆ ಇಟ್ಟಿರುವ ಸರಕಾರ ಶಾಂತಿಭಂಗಕ್ಕೆ ಯತ್ನಿಸುತ್ತಿದೆ ಎಂದು ಹೇಳಿದ್ದಾರೆ.
ಸಿಎಂಗೆ ಪತ್ರ
“ಟಿಪ್ಪು ಆಡಳಿತವು ಕೊಡಗಿನಲ್ಲಿ ಮಾರಣಹೋಮ ಮಾಡಿತ್ತು. ಟಿಪ್ಪು ಆಚರಣೆ ವೈಭವೀಕರಿಸುವ ನೆಪದಲ್ಲಿ ರಾಜ್ಯ ಸರಕಾರ ಹಿಂದುತ್ವವನ್ನು ವಿರೋಧಿಸುತ್ತಿದೆ.ಕನ್ನಡಿಗರ ಮೇಲೆ ದೌರ್ಜನ್ಯ ಎಸಗುತ್ತಿದೆ. ಟಿಪ್ಪು ಜಯಂತಿ ಆಹ್ವಾನ ಪತ್ರಿಕೆಯಲ್ಲಿ ಯಾವುದೇ ಕಾರಣಕ್ಕೂ ನನ್ನ ಹೆಸರನ್ನು ಮುದ್ರಿಸಬಾರದು ಎಂಬುದಾಗಿ ಮುಖ್ಯಮಂತ್ರಿ ಮತ್ತು ರಾಜ್ಯ ಮುಖ್ಯ ಕಾರ್ಯದರ್ಶಿಯವರಿಗೆ ಪತ್ರಬರೆದಿದ್ದೇನೆ’ ಎಂದು ಶ್ರೀನಿವಾಸ ಪೂಜಾರಿ ಪ್ರಕಟನೆಯಲ್ಲಿ ತಿಳಿಸಿದ್ದಾರೆ.