Advertisement
ಬಹುಸಂಖ್ಯಾಕರ ಭಾವನೆಗೆ ಘಾಸಿ: ನಳಿನ್ಟಿಪ್ಪು ಮತಾಂಧ ಎಂಬ ಭಾವನೆ ಜನರಲ್ಲಿದೆ. ಟಿಪ್ಪು ಜಯಂತಿ ಬಹುಸಂಖ್ಯಾಕ ಮಂದಿಯ ನಂಬಿಕೆಗೆ ಧಕ್ಕೆ ತರುತ್ತದೆ. ರಾಜ್ಯ ಸರಕಾರ ಟಿಪ್ಪು ಜಯಂತಿ ಆಚರಣೆ ಮಾಡುವ ಮೂಲಕ ಹಿಂದೂ, ಮುಸ್ಲಿಂ, ಕ್ರೆçಸ್ತರ ಭಾವನೆಗೆ ಘಾಸಿ ಮಾಡುತ್ತಿದೆ ಎಂದು ಸಂಸದ ನಳಿನ್ ಕುಮಾರ್ ಕಟೀಲು ಮಂಗಳೂರಿನಲ್ಲಿ ಹೇಳಿದರು.
“ಸಿಎಂ ಕುಮಾರಸ್ವಾಮಿ ಟಿಪ್ಪು ಸುಲ್ತಾನ್ ಜಯಂತಿ ಆಚರಿಸುವ ರೀತಿಯಲ್ಲಿ ಸಿದ್ದರಾಮಯ್ಯನವರ ಜಯಂತಿಯನ್ನೂ ಆಚರಿಸಲಿ. ಟಿಪ್ಪು ಜಯಂತಿಯನ್ನು ಮಾಜಿ ಸಿಎಂ ಸಿದ್ದರಾಮಯ್ಯನವರು 2015ರಲ್ಲಿ ಆಚರಿಸುವ ಮೂಲಕ ಟಿಪ್ಪುವಿಗಿಂತ ದೊಡ್ಡ ಮತಾಂಧ ಎಂಬುದನ್ನು ತೋರಿಸಿದ್ದಾರೆ’ ಎಂದು ಲೇವಡಿ ಮಾಡಿದರು. ಸಿಎಂ ವಿರುದ್ಧ ಅವಹೇಳನಕಾರಿ ಪದ
“ಟಿಪ್ಪು ಜಯಂತಿ ಆಮಂತ್ರಣ ಪತ್ರದಲ್ಲಿ ಸಿಎಂ ಕುಮಾರಸ್ವಾಮಿ ತನ್ನ ಹೆಸರನ್ನೇ ನಮೂದಿಸದೆ ಸಂಶಯಕ್ಕೆ ಎಡೆ ಮಾಡಿದ್ದಾರೆ’ ಎನ್ನುವ ಮೂಲಕ ನಳಿನ್ ಅವರು ಮುಖ್ಯಮಂತ್ರಿ ವಿರುದ್ಧ ಅವಹೇಳನಕಾರಿ ಪದ ಬಳಕೆ ಮಾಡಿದ್ದಾರೆ.
Related Articles
ಮಂಗಳೂರು: ಸರಕಾರಿ ಕಾರ್ಯಕ್ರಮವಾಗಿರುವ ಟಿಪ್ಪು ಜಯಂತಿಗೆ ವ್ಯಾಪಕ ವಿರೋಧ ವ್ಯಕ್ತವಾಗಿರುವ ಹಿನ್ನೆಲೆಯಲ್ಲಿ ಅಹಿತಕರ ಘಟನೆಗಳು ಸಂಭವಿಸದಂತೆ ಮುನ್ನೆಚ್ಚರಿಕೆ ಕ್ರಮವಾಗಿ ದಕ್ಷಿಣ ಕನ್ನಡ ಜಿಲ್ಲೆಯಾದ್ಯಂತ ಶುಕ್ರವಾರ ಸಂಜೆ 6 ಗಂಟೆಯಿಂದ ರವಿವಾರ ಮಧ್ಯರಾತ್ರಿ 12 ಗಂಟೆಯವರೆಗೆ ಸಿಆರ್‌ಪಿಸಿ ಸೆಕ್ಷನ್ 144ರ ಅನ್ವಯ ನಿಷೇಧಾಜ್ಞೆ ವಿಧಿಸಿ ಜಿಲ್ಲಾಧಿಕಾರಿ ಹಾಗೂ ಜಿಲ್ಲಾ ದಂಡಾಧಿಕಾರಿ ಎಸ್. ಶಶಿಕಾಂತ ಸೆಂಥಿಲ್ ಆದೇಶಿಸಿದ್ದಾರೆ.
Advertisement
ಮಂಗಳೂರು ಪೊಲೀಸ್ ಕಮಿಷನರ್ ಟಿ.ಆರ್. ಸುರೇಶ್ ಮತ್ತು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಡಾ| ರವಿಕಾಂತೇ ಗೌಡ ಅವರ ವರದಿಗಳನ್ನು ಆಧರಿಸಿ ಈ ಕ್ರಮ ಕೈಗೊಳ್ಳಲಾಗಿದೆ. ಈ ಸಂದರ್ಭ ಯಾವುದೇ ಸಾರ್ವಜನಿಕ, ರಾಜ ಕೀಯ ಮುಂತಾದ ಬಹಿರಂಗ ಸಭೆ, ಸಮಾರಂಭ, ಜಾಥಾ, ಮೆರವಣಿಗೆ ನಡೆಸುವುದನ್ನು; ಯಾವುದೇ ವ್ಯಕ್ತಿ, ಸಂಘಟನೆಯ ಸದಸ್ಯರು ಪ್ರತಿಭಟನ ಮೆರವಣಿಗೆ, ಬ್ಯಾನರ್, ಬಂಟಿಂಗ್ಸ್, ಬಾವುಟ, ಧ್ವನಿವರ್ಧಕ ಅಳವಡಿಸಿ ಘೋಷಣೆ ಕೂಗುವುದನ್ನು ಹಾಗೂ ಗುಂಪು ಗುಂಪಾಗಿ ಸೇರಿ ಪ್ರತಿಭಟನೆ ನಡೆಸುವುದನ್ನು ನಿಷೇಧಿಸಲಾಗಿದೆ ಎಂದು ಜಿಲ್ಲಾಧಿಕಾರಿಗಳು ತಿಳಿಸಿದ್ದಾರೆ.
ಎರಡು ಪ್ಲಟೂನ್ ಕೆಎಸ್ಆರ್ಪಿಟಿಪ್ಪು ಜಯಂತಿಗೆ ಸಂಬಂಧಿಸಿ ನಗರದಲ್ಲಿ ಒಂದು ಒಳಾಂಗಣ (ಇಂಡೋರ್) ಸಭೆಯನ್ನು ಮಾತ್ರ ನಡೆಸಲು ಅವಕಾಶವಿದೆ. ಹಾಲಿ ಇರುವ ಪೊಲೀಸರ ಹೊರತಾಗಿ 2 ಪ್ಲಟೂನ್ ಕೆಎಸ್‌ಆರ್‌ಪಿ ಸಿಬಂದಿಯನ್ನು ನಿಯೋಜಿಸಲಾಗಿದೆ ಎಂದು ಪೊಲೀಸ್ ಕಮಿಷನರ್ ಟಿ.ಆರ್. ಸುರೇಶ್ ತಿಳಿಸಿದ್ದಾರೆ. ಟಿಪ್ಪು ಪರಿಣಾಮ !
ಟಿಪ್ಪುವಿನ ಖಡ್ಗವನ್ನು ದೇಶಕ್ಕೆ ತಂದ ಉದ್ಯಮಿ ವಿಜಯ ಮಲ್ಯ ಅವರಿಗೆ ಭಾರತ ಬಿಟ್ಟು ವಿದೇಶದಲ್ಲಿ ಕದ್ದು ಬದುಕುವ ಪರಿಸ್ಥಿತಿ ಬಂದಿದೆ. ಅದೇ ರೀತಿ ಮೊದಲ ಬಾರಿಗೆ ಟಿಪ್ಪು ಜಯಂತಿ ಆಚರಿಸಿದ ಮಾಜಿ ಸಿಎಂ ಸಿದ್ದರಾಮಯ್ಯ ಅವರು ಮುಖ್ಯಮಂತ್ರಿ ಸ್ಥಾನ ಕಳೆದುಕೊಂಡರು. ಇದೀಗ ಕುಮಾರಸ್ವಾಮಿ ಅವರು ಕೂಡ ಈ ಆಚರಣೆಯನ್ನು ಮುಂದುವರಿಸುತ್ತಿದ್ದು, ಮುಂದಿನ ಒಂದು ತಿಂಗಳಿನಲ್ಲಿ ಅವರಿಗೂ ಅದೇ ಗತಿ ಬರಬಹುದು ಎಂದು ನಳಿನ್ ಕುಮಾರ್ ಹೇಳಿದರು. ಬಿಜೆಪಿ ಗೆದ್ದರೆ ಟಿಪ್ಪು ಜಯಂತಿ ರದ್ದು : ಕೋಟ
ರಾಜ್ಯದಲ್ಲಿ ಬಿಜೆಪಿ ಸರಕಾರ ಅಧಿಕಾರಕ್ಕೆ ಬಂದ ತತ್‌ಕ್ಷಣವೇ ವಿವಾದಿತ ಟಿಪ್ಪು ಜಯಂತಿಯನ್ನು ರದ್ದು ಗೊಳಿಸಲಾಗುವುದು ಎಂದು ವಿಪಕ್ಷ ನಾಯಕ ಕೋಟ ಶ್ರೀನಿವಾಸ ಪೂಜಾರಿ ಉಡುಪಿಯಲ್ಲಿ ಹೇಳಿದರು. “ಟಿಪ್ಪು ಜಯಂತಿಗೂ ಹಿಟ್ಲರ್ ಜಯಂತಿಗೂ ವ್ಯತ್ಯಾಸವಿಲ್ಲ. ಕುಮಾರ ಸ್ವಾಮಿ ಅವರಿಗೆ ಪ್ರಾಮಾಣಿಕತೆ ಇದ್ದರೆ ಅವರು ಶನಿವಾರ ವಿಧಾನಸೌಧದ ಬ್ಯಾಂಕ್ವೆಟ್‌ಹಾಲ್‌ನಲ್ಲಿ ಜರಗಲಿರುವ ಟಿಪ್ಪು ಜಯಂತಿಯನ್ನು ಉದ್ಘಾಟನೆ ಮಾಡಬಾರದು’ ಎಂದವರು ಆಗ್ರಹಿಸಿದರು.