Advertisement

ಪೌರತ್ವ ಕಾಯ್ದೆ ವಿರೋಧಿಸಿ ಪ್ರತಿಭಟನೆ

10:40 AM Jan 21, 2020 | Suhan S |

ಕಲಬುರಗಿ: ಕೇಂದ್ರ ಸರ್ಕಾರದ ಪೌರತ್ವ ತಿದ್ದುಪಡಿ ಕಾಯ್ದೆ ವಿರೋಧಿಸಿ ಕರ್ನಾಟಕ ರಾಜ್ಯ ದಲಿತ ಸಂಘರ್ಷ ಸಮಿತಿ ವತಿಯಿಂದ ನಗರದ ವಿಧಾನಸೌಧ ಎದುರು ಪ್ರತಿಭಟನೆ ನಡೆಸಲಾಯಿತು.

Advertisement

ಆರ್ಥಿಕ ಹಿಂಜರಿಕೆ, ನೋಟು ಅಮಾನ್ಯೀಕರಣ, ಬೆಲೆ ಏರಿಕೆ, ನಿರುದ್ಯೋಗ ಸಮಸ್ಯೆ ಹಾಗೂ ಮಹಿಳೆಯರ ಮೇಲಿನ ಅತ್ಯಾಚಾರ ಸೇರಿದಂತೆ ದೇಶದ ಜ್ವಲಂತ ಸಮಸ್ಯೆಗಳಿಂದ ಜನರ ಗಮನವನ್ನು ಬೇರೆಣೆ ಸೆಳೆಯಲು ನರೇಂದ್ರ ಮೋದಿ ನೇತೃತ್ವದ ಬಿಜೆಪಿ ಸರ್ಕಾರ ಪೌರತ್ವ ತಿದ್ದುಪಡಿ ಕಾಯ್ದೆ ಜಾರಿಗೆ ತರಲು ಹೊರಟಿದೆ ಎಂದು ಪ್ರತಿಭಟನಾಕಾರರು ದೂರಿದರು.

ಒಂದು ಜಾತಿ, ಧರ್ಮವನ್ನು ಹೊರಗಿಟ್ಟು ಕಾನೂನು ರೂಪಿಸುವ ಅವಶ್ಯಕತೆಯಿಲ್ಲ. ದೇಶದಲ್ಲಿ ಎಲ್ಲ ಧರ್ಮದವರಿಗೆ ಸಮಾನ ಅವಕಾಶವನ್ನು ಡಾ| ಬಿ.ಆರ್‌.ಅಂಡೇಡ್ಕರ್‌ ರಚಿಸಿದ ಸಂವಿಧಾನದಲ್ಲಿ ನೀಡಲಾಗಿದೆ. ಸರ್ಕಾರ ನಡೆಸುವವರು ಸಮಾಜದಎಲ್ಲರಿಗೂ ಒಳಿತಾಗುವ ಯೋಜನೆಗಳನ್ನುರೂಪಿಸಿ ಜಾರಿಗೊಳಿಸಬೇಕು. ಆದರೆ, ಒಂದು ಧರ್ಮವನ್ನು ಗುರಿಯಾಗಿ ಪೌರತ್ವ ಕಾಯ್ದೆ ಜಾರಿಗೆ ತರುವುದು ಖಂಡನೀಯ ಎಂದರು. ಸಂವಿಧಾನ ಆಶಯಗಳಿಗೆ ವಿರುದ್ಧವಾದ ಕಾಯ್ದೆಗಳನ್ನು ಹಿಂಪಡೆಯಬೇಕೆಂದು ಜಿಲ್ಲಾಧಿಕಾರಿ ಮೂಲಕ ರಾಷ್ಟ್ರಪತಿಗೆ ಮನವಿ ಸಲ್ಲಿಸಲಾಯಿತು.

ಮುಖಂಡರಾದ ಸುರೇಶ ಹಾದಿಮನಿ, ಕೃಷ್ಣಪ್ಪ ಕರಣಿಕ್‌, ಉಮೇಶ ನರೋಣ, ರೇವಣಸಿದ್ದ ಜಾಲಿ, ಮಲ್ಲಣ್ಣ ಕೊಡಚಿ,ಬಿ.ಸಿ.ವಾಲಿ, ಸಿದ್ಧಣ್ಣ ಹಾಲಭಾವಿ, ಅಂಬಣ್ಣ ಜೀವಣಗಿ ಪ್ರತಿಭಟನೆಯಲ್ಲಿ ಪಾಲ್ಗೊಂಡಿದ್ದರು.

Advertisement

Udayavani is now on Telegram. Click here to join our channel and stay updated with the latest news.

Next