ಮಾಗಡಿ: ಪೌರತ್ವ ತಿದ್ದುಪಡಿ ಕಾನೂನು ವಿರೋಧಿಸಿ ಡಿ.27 ರ ಶುಕ್ರವಾರ ಮಾಗಡಿಯಲ್ಲಿ ಬೃತಹ್ ಪ್ರತಿಭಟನಾ ರ್ಯಾಲಿ ಹಮ್ಮಿಕೊಳ್ಳವುದಾಗಿ ಮಾಜಿ ಶಾಸಕ ಎಚ್.ಸಿ.ಬಾಲಕೃಷ್ಣ ತಿಳಿಸಿದರು.
ಪಟ್ಟಣದ ಪ್ರವಾಸಿ ಮಂದಿರದಲ್ಲಿ ಏರ್ಪಡಿಸಿದ್ದ ಸುದ್ದಿಗೋಷ್ಠಿಯಲ್ಲಿ ಮಾತ ನಾಡಿದ ಅವರು, ಪೌರತ್ವ ತಿದ್ದುಪಡಿ ಕಾಯ್ದೆ ಇದು ಜನವಿರೋಧಿ ನೀತಿ ಯಾಗಿದೆ. ಇದರ ವಿರುದ್ಧ ಮಾಗಡಿ ಪಟ್ಟಣದ ಕಲ್ಯಾಗೇಟ್ ವೃತ್ತದಿಂದ ಬೃಹತ್ ಪ್ರತಿಭಟನಾ ಜಾಥಾ ಹಮ್ಮಿ ಕೊಂಡಿದ್ದು, ರಾಜಕುಮಾರ್ ರಸ್ತೆ, ಅರಳೇಪೇಟೆ, ಡೂಂ ಲೈಟ್ ವೃತ್ತ ಕೆಂಪೇಗೌಡ ವೃತ್ತದ ಮಾರ್ಗವಾಗಿ ತಹಶೀಲ್ದಾರ್ ಕಚೇರಿಗೆ ತೆರಳಿ ಮನವಿ ಸಲ್ಲಿಸಲಾಗುವುದು ಎಂದರು.
ಈ ಬೃತಹ್ ಪ್ರತಿಭಟನಾ ರ್ಯಾಲಿಯಲ್ಲಿ ಸಂಸದ ಡಿ.ಕೆ.ಸುರೇಶ್, ಎಂಎಲ್ಸಿಗಳಾದ ಎಚ್.ಎಂ.ರೇವಣ್ಣ, ಎಸ್.ರವಿ, ಪುಟ್ಟಣ್ಣ, ಜಿಪಂ ಸದಸ್ಯರು, ತಾಪಂ ಸದಸ್ಯರು, ರೈತಪರ ಜನಪರ ಸಂಘಟನೆಗಳು ಸೇರಿದಂತೆ ಕಾಂಗ್ರೆಸ್ ಮುಖಂಡರು, ಕಾರ್ಯಕರ್ತರು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಲಿದ್ದಾರೆ.
ಕೇಂದ್ರ ಬಿಜೆಪಿ ಸರ್ಕಾರ ದೇಶವನ್ನು ವಿಭಜನೆ ಮಾಡುವ ಕೆಲಸ ಮಾಡುತ್ತಿದೆ. ದೇಶದಲ್ಲಿ ಭಯದಿಂದ ಬದುಕುವ ವಾತಾವರಣ ನಿರ್ಮಾಣವಾಗಿದೆ. ಹೋರಾಟಗಳು, ಪ್ರತಿಭಟನೆಗಳು ಸಂವಿಧಾನತ್ಮಕವಾದ ನಾಗರಿಕರ ಹಕ್ಕಾಗಿದ್ದು, ತಮ್ಮ ಹಕ್ಕನ್ನು ಕೇಳಲು ಹೋದ ಪ್ರತಿಭಟನಾಕಾರರ ಮೇಲೆ ಸರ್ಕಾರ ಗೋಲಿ ಬಾರ್ ಮಾಡಿಸಿದೆ ಎಂದು ಕೇಂದ್ರ ಮತ್ತು ರಾಜ್ಯ ಸರ್ಕಾರದ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದರು.
ತಾಪಂ ಸ್ಥಾಯಿ ಸಮಿತಿ ಅಧ್ಯಕ್ಷ ಧನಂಜಯ ನಾಯಕ್, ಟಿಎಪಿಸಿಎಂಎಸ್ ಅಧ್ಯಕ್ಷ ರವೀಂದ್ರಜಿಪಂ ದಿಶಾ ಕಮಿಟಿ ನಿರ್ದೇಶಕ ಜೆ.ಪಿ.ಚಂದ್ರೇಗೌಡ, ಜಿಪಂ ಮಾಜಿ ಅಧ್ಯಕ್ಷ ಎಂ.ಕೆ.ಧನಂಜಯ, ಪುರಸಭಾ ಸದಸ್ಯರಾದ ರಂಗಹನುಮಯ್ಯ, ಎಚ್.ಜೆ.ಪುರು ಶೋತ್ತಮ್, ಪ್ರವೀಣ್,ಶಿವಕುಮಾರ್, ರಹಮತ್, ಕೋರಮಂಗಲ ಶ್ರೀನಿವಾಸ್ ಕೆ.ಎಚ್. ಶಿವರಾಜು, ರಂಗಸ್ವಾಮಿ, ಇಲಿಯಾಜ್, ರಂಗನಾಥ್, ಕಿರಣ್, ಸಿ.ರಾಜಣ್ಣ , ಶಿವಣ್ಣ ಇತರರು ಇದ್ದರು.