Advertisement

ದಲಿತರ ಮೇಲಿನ ದೌರ್ಜನ್ಯ ತಡೆಗೆ ಪ್ರತಿಭಟನೆ

05:36 PM Sep 27, 2019 | Suhan S |

ರಾಮನಗರ: ದಲಿತರು ಹೆಚ್ಚು ವಾಸಿಸುವ ಗ್ರಾಮಗಳು, ಬಡಾವಣೆಗಳು, ವಾರ್ಡುಗಳಲ್ಲಿ ಮೂಲ ಸೌಕರ್ಯ ಕಲ್ಪಿಸುವುದರಲ್ಲಿ ಮತ್ತು ದಲಿತರ ಮೇಲೆ ದೌರ್ಜನ್ಯವನ್ನು ತಡೆಗಟ್ಟು ವಿಚಾರದಲ್ಲಿ ಜಿಲ್ಲಾಡಳಿತ ಮತ್ತು ಸರ್ಕಾರ ವಿಫ‌ಲವಾಗಿದೆ ಎಂದು ಆರೋಪಿಸಿ ಕರ್ನಾಟಕ ದಲಿತ ಸಂಘರ್ಷ ಸಮಿತಿ ಜಿಲ್ಲಾ ಸಮಿತಿ ಕಾರ್ಯಕರ್ತರು ನಗರದಲ್ಲಿ ಪ್ರತಿಭಟನೆ ನಡೆಸಿದರು.

Advertisement

ನಗರದ ಕಂದಾಯಭವನ ಬಳಿ ಜಮಾಯಿಸಿದ ಕಾರ್ಯಕರ್ತರು ಜಿಲ್ಲಾ ಸರ್ಕಾರಿ ಕಚೇರಿಗಳ ಸಂಕಿರ್ಣದವರೆಗೂ ಪ್ರತಿಭಟನಾ ಮೆರವಣಿಗೆ ನಡೆಸಿದರು. ಮೆರವಣಿಗೆಯಲ್ಲಿ ಸರ್ಕಾರ ಮತ್ತು ಜಿಲ್ಲಾಡಳಿತದ ವಿರುದ್ಧ ಘೋಷಣೆಗಳನ್ನು ಕೂಗಿದರು.

ಜಿಲ್ಲೆಯಲ್ಲಿ ದಲಿತರ ಮೇಲಿನ ದೌರ್ಜನ್ಯ ನಿಂತಿಲ್ಲ. ಕೆಲವೆಡೆ ದಲಿತರು ಭಯದಿಂದಲೇ ಜೀವನ ಸಾಗಿಸಬೇಕಾದ ಪರಿಸ್ತಿತಿ ಇದೆ. ಜೀತ ಪದ್ಧತಿ, ಬಾಲ ಕಾರ್ಮಿಕ ಪದ್ಧತಿಗೆ ಮುಕ್ತಿ ದೊರಕಿಲ್ಲ ಎಂದು ಆರೋಪಿಸಿದರು.

ಹಲವಾರು ದಶಕಗಳಿಂದ ಉಳುಮೆ ಮಾಡಿಕೊಂಡು ಬರುತ್ತಿರುವ ಭೂಮಿಗೆ ಹಕ್ಕುಪತ್ರ ನೀಡಲು ಸಹ ಅಧಿಕಾರಿಗಳು ವಿಳಂಬ ಧೋರಣೆ ತಳೆದಿದ್ದಾರೆ. ಸರ್ಕಾರ ಅನುಮತಿ ಕೊಟ್ಟಿದ್ದರೂ, ಸ್ಥಳೀಯವಾಗಿ ಅಧಿಕಾರಿಗಳು ತಮಗೆ ಹಕ್ಕು ಪತ್ರ ಕೊಡದಿರುವ ಬಗ್ಗೆ ಪ್ರತಿಭಟನಾಕಾರರು ಆಕ್ರೋಶ ವ್ಯಕ್ತಪಡಿಸಿದರು. ಚನ್ನಪಟ್ಟಣದಲ್ಲಿ ಕಳೆದ 6-7 ವರ್ಷಗಳಿಂದ ಅಂಬೇಡ್ಕರ್‌ ಭವನ ಉದ್ಘಾಟಿಸಿಲ್ಲ, ಇಂದಿಗೂ ಜಿಲ್ಲೆಯ ಹಲವಾರು ಗ್ರಾಮಗಳಲ್ಲಿ ದಲಿತರಿಗಾಗಿ ಸ್ಮಶಾನಕ್ಕೆ ಸ್ಥಳ ಗುರುತಿಸಿಲ್ಲ ಎಂದು ಪ್ರತಿಭಟನಾಕಾರರು ಅಸಮಾಧಾನ ವ್ಯಕ್ತಪಡಿಸಿದರು.

ಜಿಲ್ಲೆಯ ಕೆಲವು ಸರ್ಕಾರಿ ಇಲಾಖೆಗಳಲ್ಲಿ ಕೆಲವು ಅಧಿಕಾರಿಗಳು ಠಿಕಾಣಿ ಹೂಡಿದ್ದಾರೆ. 10 ವರ್ಷಗಳದಾರು ವರ್ಗಾವಣೆ ಆಗಲಿಲ್ಲ. ಹೀಗಾಗಿ ಕೆಲವು ಕಚೇರಿಗಳಲ್ಲಿ ತಾರತಮ್ಯ ಹೆಚ್ಚಾಗುತ್ತಿದೆ ಎಂದು ಆರೋಪಿಸಿದರು. ದಲಿತರು ಮತ್ತು ಹಿಂದುಳಿದ ವರ್ಗದವರಿಗೆ ಮನೆ ವಿತರಿಸುವ ಕಾರ್ಯದಲ್ಲಿ ವಿಳಂಬ ನೀತಿ ಅನುಸರಿಸಲಾಗುತ್ತಿದೆ. ಮೈತ್ರಿ ಸರ್ಕಾರದಲ್ಲಿ ಕನಕಪುರ ತಾಲೂಕಿನಿಂದ ಬೇರ್ಪಡಿಸಿ ಹಾರೋಹಳ್ಳಿ ತಾಲೂಕು ರಚನೆಗೆ ಘೋಷಣೆಯಾಗಿತ್ತು. ತಕ್ಷಣ ತಾಲೂಕು ರಚನೆ ಕಾರ್ಯಗತವಾಗಬೇಕು ಎಂದರು.

Advertisement

ಸಮಿತಿ ರಾಜ್ಯಾಧ್ಯಕ್ಷ ಡಾ.ಸಿ. ಎಸ್‌ .ರಘು, ಜಿಲ್ಲಾಧ್ಯಕ್ಷ ಗುರು ಪ್ರಕಾಶ್‌, ಉಪಾದ್ಯಕ್ಷ ಪ್ರಭು, ಮುಖಂಡರಾದ ಅನಿಲ್‌, ಬೀರೇಶ್‌, ಚಿಕ್ಕ ಮಾಗಡಯ್ಯ, ರಾಮಪ್ರಸಾದ, ವಿನೋದ್‌ , ಸುರೇಶ್‌ ,ಕಾ ಡಣ್ಣ ಮತ್ತಿತರರು ಭಾಗವಹಿಸಿದ್ದರು. ಮನವಿಯನ್ನು ಜಿಲ್ಲಾಧಿಕಾರಿಗಳ ಕಚೇರಿಯ ಅಧಿಕಾರಿಗಳು ಸ್ವೀಕರಿಸಿದರು.

Advertisement

Udayavani is now on Telegram. Click here to join our channel and stay updated with the latest news.

Next