ತುಮಕೂರು: ಶಿರಾ ಉಪಚುನಾವಣೆ ಮತದಾರನ ಕೈ ಇಂಕು ಆರುವ ಮುನ್ನವೇ ಕರ್ನಾಟಕ ಭೂ ಸುಧಾರಣೆಗಳ 2ನೇ ತಿದ್ದುಪಡಿ ಆದೇಶ ಜಾರಿ ಮತ್ತು ವಿದ್ಯುತ್ ದರ ಹೆಚ್ಚಳ ಮಾಡುವ ಮೂಲಕ ರೈತ ಮತ್ತು ಗ್ರಾಹಕರಿಗೆ ತಾನು ನೀಡಿದ ಆಶ್ವಾಸನೆಯನ್ನು ಗಾಳಿಗೆ ತೂರಿ ರಾಜ್ಯದ ಮುಖ್ಯಮಂತ್ರಿಗಳು ಇಡೀನಾಡಿಗೆ ದ್ರೋಹ ಬಗೆದಿದ್ದಾರೆ ಎಂದು ರೈತರು ಕಿಡಿಕಾರಿದರು.
ಅಖೀಲಭಾರತರೈತಸಂಘರ್ಷಸಮನ್ವಯ ಸಮಿತಿ ಜಿಲ್ಲಾ ಘಟಕದ ವತಿಯಿಂದ ನಗರದಗುಬ್ಬಿ ಗೇಟ್ ರಿಂಗ್ ರಸ್ತೆ ಜಂಕ್ಷನ್‌ನಲ್ಲಿ ಪ್ರತಿಭಟನೆ ನಡೆಸಿ ಆಕ್ರೋಶ ವ್ಯಕ್ತಪಡಿಸಿದರು. ಬಂಧನ, ಬಿಡುಗಡೆ:ಪ್ರತಿಭಟನೆ ವೇಳೆ ರಾಜ್ಯಸರ್ಕಾರದ2ನೇ ಸುಗ್ರೀವಾಜ್ಞೆ ಆದೇಶದ ಪ್ರತಿ ಸುಡುವ ಮೂಲಕ ಹೆದ್ದಾರಿ ತಡೆ ನಡೆಸಲು ಮುಂದಾದ ರೈತರನ್ನು ಪೊಲೀಸರು ಬಂಧಿಸಿ ಬಿಡುಗಡೆ ಮಾಡಿದರು.
ಎಐಕೆಎಸ್‌ಸಿಸಿ ಸಂಚಾಲಕ ಸಿ.ಯತಿರಾಜ ಮಾತನಾಡಿ, ಕೇಂದ್ರ-ರಾಜ್ಯ ಸರ್ಕಾರಗಳು ರೈತರ ಹೆಸರು ಹೇಳಿ ಕಾರ್ಪೋರೇಟ್ ಪರ ಆಡಳಿತ ನಡೆಸುತ್ತಿರುವುದನ್ನು ಖಂಡಿಸಿದರು. ಕೋವಿಡ್ ಸೋಂಕಿನ ಸಂದರ್ಭದಲ್ಲಿ ಜನರ ಆತಂಕ ಲೆಕ್ಕಿಸದೆ ರಕ್ಷಿಸದೆ ಗುತ್ತಿಗೆ ಕೃಷಿ ಕಾಯ್ದೆ, ಕೃಷಿ ದಾಸ್ತಾನು ಸಂಗ್ರಹಿಸುವ ಸ್ವಾತಂತ್ರ್ಯ ಕಾಯ್ದೆ, ಅಗತ್ಯ ವಸ್ತುಗಳ ಕಾಯ್ದೆ, ಎಪಿಎಂಸಿ ಬೈಪಾಸ್ ಕಾಯ್ದೆ ಜಾರಿ ಮಾಡುತ್ತಿರುವುದರಿಂದ ತಿಳಿಯುತ್ತದೆ. ಹಾಲಿ ಕಾಯ್ದಗಳಿಂದ ಅಲ್ಪ-ಸ್ವಲ್ಪ ರೈತರು ಮತ್ತು ಗ್ರಾಹಕರಿಗೆ ಇದ್ದ ರಕ್ಷಣೆಯನ್ನು ಗಾಳಿಗೆ ತೂರಿ ಕೃಷಿಅಸ್ತಿತ್ವಕೆ ಧಕ್ಕೆ ತಂದು ರೈತರಿಗೆ ಮರಣ ಶಾಸನ ಬರೆಯುತ್ತಿದ್ದಾರೆ. ಸರ್ಕಾರದ ವಿರುದ್ಧ ರೈತರ ಹೋರಾಟ ನಿರ್ಣಾಯಕವಾಗಬೇಕೆಂದರು.
ರಾಜ್ಯ ರೈತ ಸಂಘದ ಜಿಲ್ಲಾಧ್ಯಕ್ಷ ಎ. ಗೋವಿಂದರಾಜು ಮಾತನಾಡಿ, ಕೇಂದ್ರ- ರಾಜ್ಯ ಸರ್ಕಾರಗಳು ಲೋಕಸಭೆ ಮತ್ತು ವಿಧಾನ ಸಭೆಯಲ್ಲಿಚರ್ಚಿಸದೇ ಸಾರ್ವಜನಿಕವಾಗಿಉತ್ತರಿಸದೇಜಾರಿಮಾಡುತ್ತಿರುವುದನ್ನು ವಿರೋಧಿಸಿ 3 ತಿಂಗಳಿಂದ ಅನೇಕ ಹೋರಾಟ ಮಾಡಿದ್ದಲ್ಲದೇ ಕರ್ನಾಟಕ ಬಂದ್ ನಡೆಸಲಾಗಿತ್ತು. ನಿರಂತರ ಹೋರಾಟದ ಭಾಗವಾಗಿ ಹೆದ್ದಾರಿ ತಡೆ ಸಹ ನಡೆಸುತ್ತಿದೆ ಎಂದರು. ಪ್ರಾಂತ ರೈತ ಸಂಘದ ಸಂಚಾಲಕ ಅಜ್ಜಪ್ಪ, ರೈತರ ಕಷ್ಟ ಕೇಳದ ಸರ್ಕಾರಗಳು ಅಧಿಕಾರದಲ್ಲಿ ಹೆಚ್ಚು ದಿನ ಉಳಿಯುದಿಲ್ಲವೆಂದು ಇತಿಹಾಸ ತಿಳಿಸಿದೆ ಎಂದರು.
ಸಂಕಷ್ಟದಲ್ಲಿ ರೈತರು:ರೈತ ಕೃಷಿ ಕಾರ್ಮಿಕ ಸಂಘಟನೆ ಮುಖಂಡ ಎಸ್.ಎನ್.ಸ್ವಾಮಿ ಮಾತನಾಡಿ, ಕೇಂದ್ರ-ರಾಜ್ಯ ಸರ್ಕಾರದ ನೀತಿಗಳು ರೈತ ವಿರೋಧಿಯಷ್ಟೇ ಅಲ್ಲ. ಜನ ವಿರೋಧಿಗಳಾಗಿದ್ದುಜನರಕಷ್ಟಪರಿಹರಿಸುವ ಬದಲು ಹೆಚ್ಚಿನ ಸಂಕಷ್ಟಕ್ಕೆ ದೂಡುತ್ತಿವೆ. ಇದನ್ನು ಪ್ರತಿರೋಧಿಸಿ ನಿಲ್ಲಲೇಬೇಕಾದ ಸಂದರ್ಭ ಬಂದಿದೆ ಎಂದರು.
ಎಐಕೆಎಸ್‌ನಕಂಬೇಗೌಡ,ಕೃಷಿ ವಸ್ತುಗಳ ಬೆಲೆ ಕುಸಿಯುತ್ತಿದ್ದು, ರೈತರ ಬದುಕು ದುಸ್ಥಿ ತಿಗೆ ತಳ್ಳಿದೆ. ಚುನಾವಣೆಗಳಲ್ಲಿ ಆಡಳಿತ ಪಕ್ಷದ ಮುಖಂಡರುಕಮಲಅರಳಿಸುವಷ್ಟೇ ಆದ್ಯತೆಯಾಗಿ ಉತ್ತರ ಕರ್ನಾಟಕದ ನೆರೆಯಲ್ಲಿ ಕೊಚ್ಚಿ ಹೋಗುತ್ತಿರುವ ಜನರ ಬದುಕನ್ನು ಉಳಿಸಲು ಮುಂದಾಗಬೇಕು. ವಿದ್ಯುತ್ ದರ ಪೆಟ್ರೋಲ್-ಡೀಸಲ್ ದರ ಅಗತ್ಯ ವಸ್ತುಗಳ ದರ ಏರಿಕೆ ಹೆಚ್ಚಿದಂತೆ ಜನರಿಗೆ ಕೂಲಿ, ರೈತರ ಬೆಳೆಗೆ ಬೆಲೆ ಹೆಚ್ಚಳ ಮಾಡಲು ಸರ್ಕಾರ ಮುಂದಾಗಬೇಕೆಂದರು. ನೇತೃತ್ವವನ್ನು ರಾಜ್ಯ ರೈತ ಸಂಘದ ಕಾರ್ಯದರ್ಶಿ ಶಂಕರಪ್ಪ, ವೆಂಕಟೇಗೌಡ, ರಂಗಸ್ವಾಮಿ, ಜಯ ರಾಮಯ್ಯ, ಪ್ರಾಂತ ರೈತ ಸಂಘದ ಜಯಣ್ಣ, ಶಂಕರಪ್ಪ ಆರ್.ಕೆ.ಎಸ್‌ನ ಕಲ್ಯಾಣಿ ಅಶ್ವಿನಿ ಮುಂತಾದವರು ವಹಿಸಿದ್ದರು.
ಕೇಂದ್ರ-ರಾಜ್ಯ ಸರ್ಕಾರಗಳು ರೈತ ವಿರೋಧಿ ಕಾಯ್ದೆ ಹಿಂಪಡೆಯಲು ಒತ್ತಾಯಿಸಿ ನ. 26 ರಂದು ಪಾರ್ಲಿಮೆಂಟ್ ಚಲೋಹಮ್ಮಿಕೊಳ್ಳಲಾಗಿದೆ. ನಮ್ಮ ಬೇಡಿಕೆ ಈಡೇರುವ ವರೆಗೆ ನಿರಂತರ ನಡೆಯುತ್ತಿರುತ್ತದೆ. ನಮ್ಮ ಅಸ್ತಿತ್ವ ಉಳಿಯುವವರೆಗೂ ಹೋರಾಟ ಮುಂದುವರಿಸಬೇಕು.
–ಎ.ಗೋವಿಂದರಾಜ್, ರಾಜ್ಯ ರೈತ ಸಂಘದ ಜಿಲ್ಲಾ ಅಧ್ಯಕ್ಷ