ಯಾದಗಿರಿ: ಬಳ್ಳಾರಿಯಲ್ಲಿ ನಡೆಯುವ ಎಸ್ಟಿ ಸಮಾವೇಶದ ಪೂರ್ವಭಾವಿ ಸಭೆಗೆ ಅಗಮಿಸಿದ ಸಾರಿಗೆ ಸಚಿವ ಶ್ರೀರಾಮಲು ಅವರಿಗೆ ಪ್ರತಿಭಟನೆ ಬಿಸಿ ತಗುಲಿತು.
ಒಂದ್ ಕೈಯಲ್ಲಿ ಹಾಲು ಕೊಡಿರಿ, ಮತ್ತೊಂದು ಕೈಯಲ್ಲಿ ವಿಷ ಕೊಡ್ತಿರೇನ್ರಿ ಎಂದು ನಾಯಕ ಸಮಾಜದ ಪ್ರಮುಖರು ಆಕ್ರೋಶ ವ್ಯಕ್ತಪಡಿಸಿದರು.
ಎಸ್ಟಿ ಮೀಸಲಾತಿಯ ವಿಚಾರದಲ್ಲಿ ಸರ್ಕಾರ ಗೊಂದಲವುಂಟು ಮಾಡುತ್ತಿದೆ. ಮಿಸಲಾತಿ ಹೆಚ್ಚಳ ಮಾಡಿ ಈಗ ಸಮುದಾಯ ಬಾಂಧವರಲ್ಲಿ ಆತಂಕವನ್ನುಂಟು ಮಾಡುವ ತಳವಾರ ಪರಿವಾರ ಎಸ್ಟಿಗೆ ಸೇರಿಸುವುದಾಗಿ ಮುಖ್ಯಂಮತ್ರಿಗಳು ಹೇಳುತ್ತಿರುವುದು ಸಮಾಜದಲ್ಲಿ ಮತ್ತೆ ಆತಂಕವನ್ನುಂಟು ಮಾಡುವಂತೆ ಮಾಡಿದೆ. ಹಲವು ಸಮುದಾಯಗಳಲ್ಲಿ ತಳವಾರ ವಿದೆ ಇದರಿಂದ ರಾಜ್ಯ ಸರ್ಕಾರ ನಮ್ಮ ಸಮಾಜಕ್ಕೆ ಅನ್ಯಾಯ ಮಾಡಿದಂತಾಗುತ್ತದೆ ಎಂದು ಅಸಮಾಧಾನ ವ್ಯಕ್ತಪಡಿಸಿದರು.
ಇದನ್ನೂ ಓದಿ:ಬಂಟ್ವಾಳ: ಬಾವಿ ಸ್ವಚ್ಛಗೊಳಿಸುವಾಗ ನಿತ್ರಾಣಗೊಂಡ ವ್ಯಕ್ತಿಯನ್ನು ರಕ್ಷಿಸಿದ ಅಗ್ನಿಶಾಮಕ
ನಾಯಕ ಸಮಾಜದ ಗೊಲ್ಲಪಲ್ಲಿ ಶ್ರೀಗಳು ಹಾಗೂ ವಾಲ್ಮೀಜಿ ಸಮಾಜದ ಜಿಲ್ಲಾಧ್ಯಕ್ಷ ಮರೆಪ್ಪ ನಾಯಕ ಮಗದಂಪುರ ಸೇರಿದಂತೆ ಇತರರಿದ್ದರು.