Advertisement

ಶಿವಸೇನೆ ವಿರುದ್ಧ ಪ್ರತಿಭಟನೆ

12:09 PM Dec 31, 2019 | Suhan S |

ಆಲಮೇಲ: ಮಹಾರಾಷ್ಟ್ರದ ಎಂಇಎಸ್‌ ಹಾಗೂ ಶಿವಸೇನೆಯವರು ಕನ್ನಡ ನಾಡಧ್ವಜ ಸುಟ್ಟು ಅವಮಾನ ಮಾಡಿರುವದನ್ನು ಖಂಡಿಸಿ ಕರ್ನಾಟಕ ರಕ್ಷಣಾ ವೇದಿಕೆ ಕಾರ್ಯಕರ್ತರು ಪ್ರತಿಭಟನೆ ನಡೆಸಿ ಉಪ ತಹಶೀಲ್ದಾರ್‌ಗೆ ಮನವಿ ಸಲ್ಲಿಸಿದರು.

Advertisement

ವೇದಿಕೆ ತಾಲೂಕಾಧ್ಯಕ್ಷ ಶಶಿಧರ ಗಣಿಹಾರ ಮಾತನಾಡಿ, ಎಂಇಎಸ್‌ ಹಾಗೂ ಶಿವಸೇನೆಯವರು ನಾಡವಿರೋಧಿ ಚಟುವಟಿಕೆ ಮಾಡುತ್ತ ಬಂದಿದ್ದು ಕನ್ನಡ ಬಾವುಟ ಸುಟ್ಟು ಪುಂಡಾಟಿಕೆ ಮೆರೆದಿದ್ದಾರೆ. ನಾಡ ವಿರೋಧಿ ಸಂಘಟನೆಗಳಿಗೆ ಕರ್ನಾಟಕ ರಕ್ಷಣಾ ವೇದಿಕೆ ತಕ್ಕ ಉತ್ತರ ನೀಡಲಿದೆ ಎಂದರು.

ರಾಜ್ಯ ಸರ್ಕಾರ ಪ್ರಕರಣವನ್ನು ಗಂಭೀರವಾಗಿ ತೆಗೆದುಕೊಂಡು ಕನ್ನಡ ಧ್ವಜಕ್ಕೆ ಬೆಂಕಿ ಹಂಚಿದ ಕಿಡಗೇಡಿಗಖನ್ನು ಬಂಧಿಸಿ ಗಡಿಪಾರು ಮಾಡಬೇಕು. ಶಿವಸೇನೆ ಮತ್ತು ಎಂಇಎಸ್‌ ಸಂಘಟನೆಗಳನ್ನು ರಾಜ್ಯದಲ್ಲಿ ನಿಷೇಧಿಸಬೇಕು. ಇಲ್ಲದಿದ್ದರೆ ಕರ್ನಾಟಕರ ರಕ್ಷಣಾ ವೇದಿಕೆ ಬೀದಿಗಿಳಿದು ಹೋರಾಟ ಮಾಡಲಿದೆ ಎಂದು ಎಚ್ಚರಿಸಿದರು.

ಕಾರ್ಯಕರ್ತರಾದ ಶಶಿಧರ ಗಣಿಹಾರ, ಚೇತನ ರಜಪೂತ, ಸೈಫನ್‌ ಜಮಾದಾರ, ಗಂಗಾಧರ ಭೋವಿ, ಮಹಾಂತೇಶ ಪರಗೊಂಡ, ಶರಣಯ್ಯ ನಂದಿಕೋಲ, ದಸಗೀರ್‌ ವಡಗೇರಿ, ಸುನೀಲ ತೆಲ್ಲೂರ, ಕಿರಣ ಪಾಟೀಲ, ರಿಯಾಜ್‌ ಬಿಳವಾರ, ನಿಂಗಣ್ಣ ಚಾಂದಕವಟೆ ಇದ್ದರು.

Advertisement

Udayavani is now on Telegram. Click here to join our channel and stay updated with the latest news.

Next