ಕೋಟ: ಸಾಸ್ತಾನ ಟೋಲ್ ನಲ್ಲಿ ಜಿ.ಪಂ. ಕೋಟ ಕ್ಷೇತ್ರ ವ್ಯಾಪ್ತಿಯ ಸ್ಥಳೀಯರಿಗೆ ನೀಡಲಾಗುತ್ತಿರುವ ಟೋಲ್ ವಿನಾಯಿತಿ ಮುಂದುವರಿಸಬೇಕು ಎಂದು ಆಗ್ರಹಿಸಿ ಸೋಮವಾರ ಹೆದ್ದಾರಿ ಜಾಗೃತಿ ಸಮಿತಿ ನೇತೃತ್ವದಲ್ಲಿ ಕರೆ ನೀಡಲಾದ ಜಿ.ಪಂ. ಕೋಟ ವ್ಯಾಪ್ತಿಯ ಬಂದ್ ಯಶಸ್ವಿಯಾಗಿದೆ.
ಜಿ.ಪಂ. ವ್ಯಾಪ್ತಿಯ ಮಾಬುಕಳ, ಹಂಗಾರಕಟ್ಟೆ, ಪಾಂಡೇಶ್ವರ, ಐರೋಡಿ, ಸಾಸ್ತಾನ, ಸಾಲಿಗ್ರಾಮ, ಕೋಟ, ಬನ್ನಾಡಿ ಮುಂತಾದ ಕಡೆಗಳಲ್ಲಿ ಎಲ್ಲಾ ಅಂಗಡಿ ಮುಂಗಟ್ಟುಗಳು ಮುಚ್ಚಿದ್ದವು. ಸ್ಥಳೀಯ ವಾಹನ ಸಂಚಾರ ಕೂಡ ಸ್ಥಗಿತಗೊಂಡಿತ್ತು.
ಬೃಹತ್ ಪ್ರತಿಭಟನೆ ಸಭೆ
ಈ ಸಂದರ್ಭದಲ್ಲಿ ಸಾಸ್ತಾನ ಟೋಲ್ ಪ್ಲಾಜಾ ಸಮೀಪ ಸುಮಾರು 4 ಸಾವಿರಕ್ಕೂ ಹೆಚ್ವು ಮಂದಿ ಪ್ರತಿಭಟನೆ ಸಭೆ ನಡೆಸಿದರು. ಸಭೆಯಲ್ಲಿ ಟೋಲ್ ವಸೂಲಿ ವಿರುದ್ಧ ವಿರೋಧ ಹಾಗೂ 12 ವರ್ಷಗಳಾದರೂ ಮುಗಿಯದ ಪ್ಲೈ ಓವರ್ ಗಳು, ಪ್ರಮುಖ ಊರುಗಳಲ್ಲಿ ಇನ್ನೂ ನಿರ್ಮಿಸದ ಸರ್ವಿಸ್ ರಸ್ತೆಗಳು,ಅವೈಜಾನಿಕ ರಸ್ತೆ ವಿಭಜಕ ಮತ್ತು ಅಂಡರ್ ಪಾಸ್ ಗಳು, ಬೀದಿ ದೀಪಗಳಿಲ್ಲದ ರಸ್ತೆ, ಇಡೀ ರಾಜ್ಯದಲ್ಲಿ ಅತೀ ಹೆಚ್ಚು ಆಕ್ಸಿಡೆಂಟ್ ನಿಂದಾಗಿ ಕಪ್ಪು ಪಟ್ಟಿಯಲ್ಲಿ ಗುರುತಿಸಲ್ಪಟ್ಟಿರುವ ಅಫಘಾತ ವಲಯಗಳ ವಿರುದ್ಧ ಸಭೆಯಲ್ಲಿ ಆಕ್ರೋಶ ವ್ಯಕ್ತವಾಯಿತು.
ಇದನ್ನೂ ಓದಿ:ಉತ್ತರ ಪ್ರದೇಶ ಸರಕಾರದ ಜತೆ ಒಪ್ಪಂದ; ಎಂಟಿಎಲ್‌ನಿಂದ ಗ್ರಾಮೀಣ ಭಾಗಕ್ಕೆ ಬ್ಯಾಂಕಿಂಗ್ ಸೇವೆ
ಪ್ರತಿಭಟನಾ ಸ್ಥಳಕ್ಕೆ ಸಚಿವ ಕೋಟ ಶ್ರೀನಿವಾಸ ಪೂಜಾರಿ, ಬ್ರಹ್ಮಾವರ ತಹಶಿಲ್ದಾರ್ ಕಿರಣ್ ಗೋರಯ್ಯ ಭೇಟಿ ನೀಡಿ ಮಾತುಕತೆ ನಡೆಸಿದರು. ಜಿಲ್ಲಾ ಮಟ್ಟದ ದಿಶಾ ಸಭೆಗೆ ಮೊದಲು ಜಾಗೃತಿ ಸಮಿತಿಯವರನ್ನು ಕರೆದು ಮಾತುಕತೆ ನಡೆಸಲಾಗುತ್ತದೆ. ಸ್ಥಳೀಯರ ಪರವಾಗಿ ನಿರ್ಣಯ ಕೈಗೊಳ್ಳಲಾಗುವುದು ಎಂದು ಭರವಸೆ ನೀಡಿದರು.
ಇದನ್ನೂ ಓದಿ: ತಲಪಾಡಿಯಲ್ಲಿ ಕೋವಿಡ್ ಚೆಕ್ ಪೋಸ್ಟ್: ಗಡಿನಾಡ ಕನ್ನಡಿಗರಿಂದ ರಸ್ತೆ ತಡೆದು ಪ್ರತಿಭಟನೆ
ನಿರ್ಣಯ ಕೈಗೊಳ್ಳದಿದ್ದರೆ ಉಗ್ರ ಹೋರಾಟ: ಶುಲ್ಕ ವಿನಾಯಿತಿ ಕುರಿತು ಸ್ಪಷ್ಟ ನಿರ್ಣಯ ಕೈಗೊಳ್ಳುವ ತನಕ ಹೋರಾಟ ಮೊಟಕುಗೊಳಿಸುವುದಿಲ್ಲ ಬದಲಾಗಿ ಉಗ್ರ ಹೋರಾಟ ನಡೆಸಲಾಗುತ್ತದೆ ಎಂದು ಪ್ರತಿಭಟನಾಕಾರರು ಎಚ್ಚರಿಕೆ ನೀಡಿದರು.