Advertisement

ಮದ್ಯದಂಗಡಿ ತೆರವಿಗೆ ಮತ್ತೆ  ಧರಣಿ

08:15 AM Aug 30, 2017 | Team Udayavani |

ಬೆಳ್ಮಣ್‌: ಮುಂಡ್ಕೂರು ಗ್ರಾ.ಪಂ. ವ್ಯಾಪ್ತಿಯ ಮುಲ್ಲಡ್ಕ ಅರದಾಳುವಿಗೆ ಸ್ಥಳಾಂತರಗೊಂಡಿರುವ‌ ಮದ್ಯದಂಗಡಿ ಯನ್ನು ತೆರವುಗೊಳಿಸಬೇಕೆಂದು ಒತ್ತಾಯಿಸಿ ಸೋಮವಾರ ಮತ್ತೆ ಅರದಾಳು ಪರಿಸರದ ಸಂತ್ರಸ್ತ ಕೊರಗ ಕುಟುಂಬಗಳು ಮುಂಡ್ಕೂರು ಪಂಚಾಯತ್‌ ಎದುರು ಧರಣಿ ಸತ್ಯಾಗ್ರಹ ನಡೆಸಿದರು. ಪ್ರತಿಭಟನೆಯ ಕಾವು ಏರುವ ಸೂಚನೆಯಿಂದ ಕಾರ್ಕಳ ಪೊಲೀಸ್‌ ಅಧಿಕಾರಿಗಳು ಮದ್ಯದಂಗಡಿಗೆ ಬೀಗ ಹಾಕುವಂತೆ ಸೂಚಿಸಿದ್ದಾರೆ.

Advertisement

ಮುಲ್ಲಡ್ಕ ಅರದಾಳು ಪರಿಸರ ಜನವಸತಿ ಪ್ರದೇಶವಾಗಿದ್ದು ಮದ್ಯದಂಗಡಿ ಪಕ್ಕದಲ್ಲೇ ಕೊರಗ ಸಮುದಾಯದ ಜನ ವಾಸಿಸುತ್ತಿದ್ದಾರೆ. ಇದರಿಂದಾಗಿ ಕೊರಗ ಸಮುದಾಯದ ಜನರಿಗೆ ತೊಂದರೆಯಾಗುತ್ತಿದೆ. ಕೂಡಲೇ ಈ ಮದ್ಯದಂಗಡಿಯನ್ನು ಮುಚ್ಚಬೇಕೆಂದು ಪ್ರತಿಭಟನಕಾರರು ಒತ್ತಾಯಿಸಿದರು.

ಈ ಹಿಂದೆಯೂ ಪ್ರತಿಭಟನೆ
ಕಳೆದ ಆಗಸ್ಟ್‌ 7ರಂದು ಮದ್ಯದಂಗಡಿ ಯನ್ನು ತೆರವುಗೊಳಿಸುವಂತೆ ಒತ್ತಾಯಿಸಿ ಪಂಚಾಯತ್‌ ಎದುರು ಪ್ರತಿಭಟನೆ ನಡೆದಾಗ ಸ್ಥಳಕ್ಕೆ ಆಗಮಿಸಿದ ಕಾರ್ಕಳ ತಹಶೀಲ್ದಾರರು 15 ದಿನದ ಒಳಗೆ ಸೂಕ್ತ ಕ್ರಮ ಕೈಗೊಳ್ಳುತ್ತೇವೆ ಎಂದು ಭರವಸೆ ನೀಡಿದ್ದ‌ರೂ ಇಲ್ಲಿಯ ವರೆಗೆ ಯಾವುದೇ ಬೆಳವಣಿಗೆ ನಡೆದಿಲ್ಲ. ಹಾಗಾಗಿ ನಾವು ಮತ್ತೆ ಧರಣಿ ನಡೆಸುತ್ತಿದ್ದೇವೆ. ಮದ್ಯದಂಗಡಿ ತೆರವು ಆಗುವ ವರೆಗೂ ನಾವು ಧರಣಿ ಕೈ ಬಿಡುವುದಿಲ್ಲ ಎಂದು ಪ್ರತಿಭಟನಕಾರರು ತಿಳಿಸಿದರು.

ಅಹೋರಾತ್ರಿ ಧರಣಿಯ ಬೆದರಿಕೆಗೆ ಬಗ್ಗಿದ ಪೊಲೀಸ್‌ ಇಲಾಖೆ ಮದ್ಯಂದಂಗಡಿಯಿಂದ ಈ ಭಾಗದ ಜನರಿಗೆ ಹೆಚ್ಚಿನ ತೊಂದರೆಯಾಗುತ್ತಿದ್ದು ಕೂಡಲೇ ಮದ್ಯದಂಗಡಿಯನ್ನು ತೆರವು ಮಾಡಬೇಕು ಇಲ್ಲವಾದಲ್ಲಿ ಆಹೋ ರಾತ್ರಿ ಧರಣಿ ಸತ್ಯಾಗ್ರಹವನ್ನು ಮಾಡುತ್ತೇವೆ ಎಂದು ಎಚ್ಚರಿಕೆಯನ್ನು ನೀಡಿದ್ದರಿಂದ ಸ್ಥಳಕ್ಕೆ ಆಗಮಿಸಿದ ಪೊಲೀಸ್‌ ಅಧಿ ಕಾರಿಗಳು ಮದ್ಯ ದಂಗಡಿಯನ್ನು ಮುಚ್ಚುವಂತೆ ಹೇಳಿದ್ದು ಸೋಮವಾರ ಸಂಜೆ ಮದ್ಯ ದಂಗಡಿಗೆ ಬಾಗಿಲು ಹಾಕಿದ ಬಳಿಕ ಕೊರಗ ಕುಟುಂಬ ಗಳು ಪ್ರತಿಭಟನೆಯನ್ನು ಕೈ ಬಿಟ್ಟರು.

ಈತನ್ಮಧ್ಯೆ ಅಬಕಾರಿ ಇಲಾಖೆ ಹಾಗೂ ಮದ್ಯದಂಗಡಿ ಮಾಲಕರು ಈ ಅಂಗಡಿಯನ್ನು ಕಾನೂನು ಬದ್ಧವಾಗಿಯೇ ಪ್ರಾರಂಭಿಸಲಾಗಿದೆಯೆಂದಿದ್ದಾರೆ.

Advertisement

ಪ್ರತಿಭಟನಾ ಸ್ಥಳಕ್ಕೆ ಕಾರ್ಕಳ ಗ್ರಾಮಾಂತರ ಠಾಣಾ ಪೊಲೀಸ್‌ ಅ ಕಾರಿಗಳು ಭೇಟಿ ನೀಡಿದ್ದು ಗ್ರಾ.ಪಂ. ಅಧ್ಯಕ್ಷೆ ಶುಭಾ ಪಿ ಶೆಟ್ಟಿ, ಪಿಡಿಒ ಶಂಕರ್‌ ಉಪಸ್ಥಿತರಿದ್ದರು.

Advertisement

Udayavani is now on Telegram. Click here to join our channel and stay updated with the latest news.

Next