Advertisement
ಪಟ್ಟಣದ ಸಾರ್ವಜನಿಕ ಆಸ್ಪತ್ರೆ ಆರಣದಲ್ಲಿ ಜಮಾವಣೆಗೊಂಡ ಸಮಿತಿಯ ಕಾರ್ಯಕರ್ತರು ಹಾಗೂ ಮುಖಂಡರು ತಾಲೂಕು ಕೇಂದ್ರದಲ್ಲಿ 100 ಹಾಸಿಗೆಯುಳ್ಳ ದೊಡ್ಡಾಸ್ಪತ್ರೆಯಾಗಿರುವ ಸಾರ್ವಜನಿಕ ಆಸ್ಪತ್ರೆಯಲ್ಲಿ ಆಡಳಿತ ವೈಫಲ್ಯತೆಯಿಂದ ಅಕ್ರಮ ಹಾಗೂ ಅವ್ಯವಹಾರ ನಡೆಯುತ್ತಿರುವುದರಿಂದ ಸರ್ಕಾರಿ ವೈದ್ಯಕೀಯ ಚಿಕಿತ್ಸೆ ಜನರಿಗೆ ಮರಿಚೀಕೆಯಾಗಿದೆ ಎಂದು ದೂರಿದರು.
Related Articles
Advertisement
ಹಣ ಕೊಡದೇ ಹೋದರೆ ಮೈಸೂರಿನ ಕೆ.ಆರ್ ಆಸ್ಪತ್ರೆಗೆ ಕಳಿಸುತ್ತೆವೆಂದು ಬೆದರಿಸುತ್ತಾರೆ ಎಂದು ದೂರಿದರು. ಪರಿಸ್ಥಿತಿ ಕುರಿತು ಆಡಳಿತ ವೈದ್ಯಾಧಿಕಾರಿಗಳಿಗೆ ದೂರು ನೀಡಿದರೆ ಹಾರಿಕೆ ಉತ್ತರ ನೀಡಿ ಅಸಹಾಯಕತೆ ತೋರುತ್ತಾರೆ ಎಂದು ರಾಜಶೇಖರಮೂರ್ತಿ ಆರೋಪಿಸಿದರು.
ವೈದ್ಯರ ಗೈರು: ತಾಲೂಕು ಸಂಚಾಲಕ ಬನ್ನಹಳ್ಳಿ ಸೋಮಣ್ಣ ಮಾತನಾಡಿ, ತಾಲೂಕು ಕೇಂದ್ರದ ಸಾರ್ವಜನಿಕ ಆಸ್ಪತ್ರೆಯಲ್ಲಿನ ವೈದ್ಯಾಧಿಕಾರಿಗಳಿಗೆ ವಸತಿ ಗೃಹ ವ್ಯವಸ್ಥೆ ಮಾಡಿದ್ದರೂ ಸಹ ನಿಯಮಗಳನ್ನು ಗಾಳಿಗೆ ತೂರಿ ಯಾವೊಬ್ಬ ವೈದ್ಯರೂ ವಾಸ್ತವ್ಯವಿಲ್ಲ. ಇದರಿಂದಾಗಿ ರಾತ್ರಿ ವೇಳೆ ತುರ್ತು ಸಂದರ್ಭಗಳಲ್ಲಿ ಬರುವಂತಹ ರೋಗಿಗಳಿಗೆ ಸೂಕ್ತ ಚಿಕಿತ್ಸೆ ಇಲ್ಲದೆ ಸಾವನಪ್ಪುವಂತಹ ಪರಿಸ್ಥಿತಿ ಬಂದೊದಗಿದೆ.
ನಿಗದಿತ ಸಮಯಕ್ಕೆ ವೈದ್ಯರು ಹಾಜರಾಗದಿರುವುದೇ ಘಟನೆಗೆ ಕಾರಣ ಎಂದು ದೂರಿದರು. ಜನೌಷಧ ಕೇಂದ್ರವಿದ್ದರೂ ರೋಗಿಗಳು ಖಾಸಗಿ ಅಂಗಡಿಗಳಿಗೆ ಚೀಟಿ ಹಿಡಿದು ಅಲೆಯುವುದು ತಪ್ಪಿಲ್ಲ. ಹೆರಿಗೆ ಕೊಠಡಿ ಸೇರಿದಂತೆ ಮಹಿಳೆ ಮತ್ತು ಪುರುಷರ ವಾರ್ಡುಗಳ ಕೊಠಡಿಗಳು ಹಾಗೂ ಶೌಚಾಲಯಗಳಿಗೆ ನೀರಿನ ಸೌಲಭ್ಯವಿಲ್ಲದೆ ಅಶುಚಿತ್ವದ ತಾಣವಾಗಿವೆ ಎಂದು ದೂರಿದರು.
ಪ್ರತಿಭಟನಾ ಸ್ಥಳಕ್ಕಾಗಮಿಸಿದ ತಹಶೀಲ್ದಾರ್ ರಾಜು ಹಾಗೂ ಸಾರ್ವಜನಿಕ ಆಸ್ಪತ್ರೆ ಆಡಳಿತ ವೈದ್ಯಾಧಿಕಾರಿ ಡಾ.ಗೋವಿಂದರಾಜು ಅವರಿಗೆ ಮನವಿ ಪತ್ರ ಸಲ್ಲಿಸಲಾಯಿತು. ತಾಲೂಕು ಸಂಚಾಲಕ ಕೆಬ್ಬೆಹುಂಡಿ ನಿಂಗರಾಜು, ಸಂಘಟನಾ ಸಂಚಾಲಕರಾದ ಬನ್ನಹಳ್ಳಿ ಬಸವರಾಜು, ಮಾವಿನಹಳ್ಳಿ ರವಿ, ಮಾದಿಗಹಳ್ಳಿ ಮುದ್ದುರಾಜು,
ಕರೋಹಟ್ಟಿ ಮಹೇಂದ್ರ, ಹೆಳವರಹುಂಡಿ ರವಿ, ಹೊಸಕೋಟೆ ಕುಮಾರ್, ಮುಖಂಡರಾದ ಮಹದೇವಪ್ರಸಾದ್, ಕೃಷ್ಣ, ದೊಳ್ಳಯ್ಯ, ಚನ್ನಮಲ್ಲಯ್ಯ, ಮಹದೇವ, ಲೋಕೇಶ್, ಸೋಸಲೆ ಗಂಗಾಧರ್, ಚಂದ್ರು, ತೇಜು, ಮಹದೇವಸ್ವಾಮಿ, ದೀನೇಶ, ಸುಮಂತ್, ವಿಶ್ವ, ನಿಂಗರಾಜು, ಮದನ್, ಸುರೇಶ್ ಇನ್ನಿತರು ಪ್ರತಿಭಟನೆಯಲ್ಲಿ ಭಾಗವಹಿದ್ದರು.