ಮೂಡಲಗಿ: ಪೆಟ್ರೋಲ್, ಡೀಸೆಲ್, ಅಡುಗೆ ಅನಿಲ, ರಸಗೊಬ್ಬರ, ಸಿಮೆಂಟ್ ಹಾಗೂ ಕಬ್ಬಿಣ ಮತ್ತು ದಿನಸಿ ವಸ್ತುಗಳು ಸೇರಿದಂತೆ ಅಗತ್ಯ ವಸ್ತುಗಳ ಬೆಲೆ ಏರಿಕೆ ತಡೆಗಟ್ಟುವಂತೆ ಆಗ್ರಹಿಸಿ ಅರಭಾಂವಿ ಮತಕ್ಷೇತ್ರದಜೆಡಿಎಸ್ ಕಾರ್ಯಕರ್ತರು ಪಟ್ಟಣದ ಕಲ್ಮೇಶ್ವರ ವೃತ್ತದಲ್ಲಿ ತಲೆ ಮೇಲೆ ಗ್ಯಾಸ್ ಸಿಲಿಂಡರ್ ಹೊತ್ತು ಪ್ರತಿಭಟಿಸಿಮೂಡಲಗಿ ತಹಶೀಲ್ದಾರ ಡಿ.ಜಿ.ಮಹಾತ ಮೂಲಕ ಕೇಂದ್ರ ಮತ್ತು ರಾಜ್ಯ ಸರಕಾರಕ್ಕೆ ಸೋಮವಾರ ಮನವಿಸಲ್ಲಿಸಿದರು.
ಪ್ರತಿಭಟನೆಯಲ್ಲಿ ಜೆ.ಡಿಎಸ್ ಜಿಲ್ಲಾಧ್ಯಕ್ಷ ಶಂಕರ ಮಾಡಲಗಿ ಮಾತನಾಡಿ, ಬೆಲೆ ಏರಿಕೆ ನಿಯಂತ್ರಣ ಮಾಡುವಲ್ಲಿ ಕೇಂದ್ರ ಮತ್ತು ರಾಜ್ಯ ಸರಕಾರವಿಫಲಾಗಿವೆ. ಕೇಂದ್ರ ಸರಕಾರ ಗ್ಯಾಸ್ ನೀಡಿ ಕಟ್ಟಿಗೆಉಪಯೋಗಿಸುವ ಒಲೆ ಕಿತ್ತುಹಾಕುವಂತೆ ಮಾಡಿ,ಗ್ಯಾಸ ಸಿಲಿಂಡರ ಬೆಲೆಯನ್ನು ಏರಿಸುತ್ತಿದ್ದು ಬಡಜನರು ಬದುಕುವುದಕ್ಕೆ ಆಗುತ್ತಿಲ್ಲ, ಶೀಘ್ರವಾಗಿ ಬೆಲೆ ಕಡಿಮೆ ಮಾಡದೇ ಹೋದರೆ ಬಿಜೆಪಿ ಸರಕಾರಕ್ಕೆ ಜನ ತಕ್ಕ ಪಾಠ ಕಲಿಸುತ್ತಾರೆ ಎಂದರು.
ಗೋಕಾಕದ ಅಶೋಕ ಪೂಜಾರಿ, ಸಮಾಜ ಸೇವಾ ಕಾರ್ಯಕರ್ತ ಹಾಗೂ ಜೆಡಿಎಸ್ ಮುಖಂಡ ಭೀಮಪ್ಪ ಗಡಾದ, ಚನ್ನಪ್ಪ ಅಥಣಿ ಮಾತನಾಡಿ, ಜನಸಾಮಾನ್ಯರು ಬಳಸುವಂತ ವಸ್ತುಗಳ ಬೆಲೆ ಗಗನಕ್ಕೆ ಏರಿವೆ. ಕೇಂದ್ರಮತ್ತು ರಾಜ್ಯ ಸರಕಾರ ಜನ ಸಮಾನ್ಯರ ಪರವಾಗಿನಿಂತು ಕೂಡಲೇ ದಿನನಿತ್ಯ ಬಳಕೆಯಾಗುವ ವಸ್ತುಗಳ ಬೆಲೆ ಕಡಿಮೆ ಮಾಡಬೇಕು. ಇಲ್ಲದಿದ್ದರೆ ಹೋರಾಟ ಅನಿವಾರ್ಯ ಎಂದು ಸರಕಾರಕ್ಕೆ ಎಚ್ಚರಿಸಿದರು.
ಗುರು ಗಂಗಣ್ಣವರ, ಮಲ್ಲಪ್ಪ ಮದಗುಣಕಿ, ಶ್ರೀಕಾಂತ ಪರುಶೆಟ್ಟಿ, ಗಂಗಾಧರ ಮಠಪತಿ, ಚಿದಾನಂದ ಶೆಟ್ಟರ, ರಾಚಪ್ಪ ಅಂಗಡಿ, ಮಾರುತಿ ಸುಂಕದ, ಸಂಗಪ್ಪಕಳ್ಳಿಗುದ್ದಿ, ಐ.ಎಸ್.ಕೊಣ್ಣುರ ಮತ್ತಿತರರು ಮಾತನಾಡಿಬೆಲೆ ಏರಿಕೆ ಖಂಡಿಸಿ ಸರಕಾರದ ವಿರುದ್ಧ ಆಕ್ರೋಶವ್ಯಕ್ತಪಡಿಸಿದರು. ಪ್ರತಿಭಟನೆಯಲ್ಲಿ ಮಹಿಳೆಯರುತಲೆ ಮೇಲೆ ಗ್ಯಾಸ್ ಹೊತ್ತು ಪಾಲ್ಗೊಂಡಿದ್ದರು.
ಆದಮ್ ತಾಂಬೋಳಿ, ಪರಪ್ಪ ಮುನ್ಯಾಳ, ಶಿವುಸಣ್ಣಕ್ಕಿ, ಬಸವರಾಜ ಗುಲಗಾಜಂಬಗಿ, ಸೂರಜ ಸೋನವಾಲ್ಕರ, ಶಿವಲಿಂಗ ಹಾದಿಮನಿ, ಪಾರೀಸ್ ಉಪ್ಪಿನ, ದರೇಪ್ಪ ಖಾನಗೌಡರ, ಮಲ್ಲಿಕಾರ್ಜುನಅರಭಾವಿ, ಸುರೇಶ ಗೊಂದಿ ಮತ್ತು ಮಹಿಳೆಯರು ಹಾಗೂ ವಿವಿಧ ಗ್ರಾಮಗಳ ಜೆಡಿಎಸ್ ಕಾರ್ಯಕರ್ತರುಭಾಗವಹಿಸಿದ್ದರು.