ಶ್ರೀರಂಗಪಟ್ಟಣ: ತಾಲೂಕಿನ ಪಾಲಹಳ್ಳಿ ಗ್ರಾಪಂ ಪಿಡಿಒ ಸುವರ್ಣ ಪಂಚಾಯಿತಿಯಲ್ಲಿ ಅಪಾರ ಭ್ರಷ್ಟಾಚಾರ ನಡೆಸುತ್ತಿದ್ದಾರೆ ಎಂದು ಆರೋಪಿಸಿ ಪಂಚಾಯಿತಿ ಸದಸ್ಯರು ಹಾಗೂ ಗ್ರಾಮಸ್ಥರು ಪ್ರತಿಭಟನೆ ನಡೆಸಿದರು.
ಗ್ರಾಪಂ ಮುಂಭಾಗದಲ್ಲಿ ಸದಸ್ಯರು ಹಾಗೂ ಗ್ರಾಮಸ್ಥರು ಪಿಡಿಒ ವಿರುದ್ಧ ಘೋಷಣೆ ಕೂಗಿ ಆಕ್ರೋಶ ವ್ಯಕ್ತಪಡಿಸಿದರು. ಸದಸ್ಯರ ಗಮನಕ್ಕೆ ತರದೇ ಇಷ್ಟಬಂದಂತೆ ಅಧಿಕಾರ ನಡೆಸುತ್ತಿದ್ದಾರೆಂದು ಆರೋಪಿಸಿದರು.
ಹಲವು ಅನುದಾನಗಳನ್ನು ಸದಸ್ಯರ ಗಮನಕ್ಕೂ ತರದೇ ಹಾಗೂ ಪಂಚಾಯತಿ ಸಭೆ ನಡೆಸದೆ ದುರ್ಬಳಕೆ ಮಾಡಿರುವ ಬಗ್ಗೆ ಹಲವು ಸಾಕ್ಷಿಗಳಿದ್ದು, ಈ ಬಗ್ಗೆ ತಾಪಂ ಇಒ ಹಾಗೂ ಜಿಪಂ ಸಿಇಒಗೂ ದಾಖಲೆ ನೀಡಿ ದೂರು ಸಲ್ಲಿಸಲಾಗಿದೆ.
ಈ ಬಗ್ಗೆ ಸಿಇಒ ಕೂಡ ಅವರನ್ನು ಅಮಾನತಿನಲ್ಲಿಡಲು ತಾಪಂ ಇಒಗೆ ಪತ್ರ ಬರೆದಿದ್ದಾರೆ. ದಾಖಲೆಗಳ ಪರಿಶೀಲನೆ ತನಿಖೆ ನಡೆಯುವ ಬದಲು ಅಮಾನತಿನಲ್ಲಿ ರಬೇಕಾದವರು ಒತ್ತಡ ತಂದು ಮತ್ತೆ ಸೇವೆಗೆ ಹಾಜರಾಗಿರುವುದು ಖಂಡನೀಯ ಎಂದು ಗ್ರಾಪಂ ಸದಸ್ಯ ಟೆಂಪೋ ಪ್ರಕಾಶ್ ಅಸಮಾಧಾನ ವ್ಯಕ್ತಪಡಿಸಿದರು.
ಸದಸ್ಯರು ಆಕೊ›àಶ ವ್ಯಕ್ತಪಡಿಸಿ ತಾಪಂ ಇಒ ಸ್ಥಳಕ್ಕೆ ಭೇಟಿ ನೀಡುವಂತೆ ಒತ್ತಾಸಿದರು. ಸ್ಥಳಕ್ಕೆ ಬಂದ ಇಒ ಬೈರಪ್ಪ, ಈ ಸಂಬಂಧ ಜಿಪಂ ಸಿಇಒಗೆ ಪತ್ರ ಬರೆಯುವುದಾಗಿ ತಿಳಿಸಿ ಸಮಜಾಯಿಷಿ ನೀಡಿ ಪ್ರತಿಭಟನಾಕಾರರನ್ನು ಶಾಂತಗೊಳಿಸಿದರು.
ಜೆಡಿಎಸ್ ಅಧ್ಯಕ್ಷ ಮುಕುಂದ, ಎಪಿಎಂಸಿ ಮಾಜಿ ಅಧ್ಯಕ್ಷ ಶಂಕರೇಗೌಡ, ಟಿಎಪಿಸಿಎಂಎಸ್ ಮಾಜಿ ಅಧ್ಯಕ್ಷ ಪ್ರಭಾಕರ್, ಗ್ರಾಪಂ ಸದಸ್ಯರಾದ ದಿನೇಶ್, ರಾಮಕೃಷ್ಣ, ರೇಖಾ, ರಾಜೇಶ್ವರಿ, ಯಜಮಾನ್ ಶ್ರೀಧರ್, ಗ್ರಾಮದ ಜೆಡಿಎಸ್ ಮುಖಂಡ ನಾರಾಯಣಪ್ಪ ಸೇರಿದಂತೆ ಇತರ ಗ್ರಾಮಸ್ಥರು, ಸದಸ್ಯರಿದ್ದರು.