Advertisement

ಎನ್‌ಆರ್‌ಸಿ, ಸಿಎಎ ವಿರುದ್ಧ ಪ್ರತಿಭಟನೆ

03:39 PM Dec 25, 2019 | Team Udayavani |

ಮುಳಬಾಗಿಲು: ನಗರದ ಡಾ.ಬಿ.ಅರ್‌.ಅಂಬೇಡ್ಕರ್‌ ವೃತ್ತದಲ್ಲಿ ಜಾಮೀಯ ಮಸ್ಜಿದ್‌ ಹೈದರಿ ನೇತೃತ್ವದಲ್ಲಿ ಸಿಎಎ, ಎನ್‌ಆರ್‌ಸಿ ಕಾಯ್ದೆ ವಿರೋಧಿಸಿ ಬೃಹತ್‌ ಪ್ರತಿಭಟನೆ ನಡೆಸಲಾಯಿತು.

Advertisement

ಪ್ರತಿಭಟನೆಯಲ್ಲಿ ಮುಸ್ಲಿಂ ಸಂಘಟನೆಗಳ ಜೊತೆ ಕಾಂಗ್ರೆಸ್‌, ಜೆಡಿಎಸ್‌, ದಲಿತಪರ, ಸಿಪಿಎಂ ಮತ್ತಿತರ ಮುಖಂಡರು ಭಾಗವಹಿಸಿ ಕಾಯ್ದೆ ವಿರೋಧಿಸಿದರು. ಈ ವೇಳೆ ಜೆಡಿಎಸ್‌ ರಾಜ್ಯ ಮುಖಂಡ ಸಮೃದ್ಧಿ ಮಂಜುನಾಥ್‌ ಮಾತನಾಡಿ, ಧರ್ಮದ ಆಧಾರದ ಮೇಲೆ ಪೌರತ್ವ ತಿದ್ದುಪಡಿ ಕಾನೂನು ಜಾರಿಗೆ ಮುಂದಾಗಿರುವುದು ಸರಿಯಲ್ಲ ಎಂದು ಪ್ರಧಾನಿ ಮೋದಿ, ಕೇಂದ್ರ ಗೃಹ ಸಚಿವ ಅಮಿತ್‌ ಶಾ ವಿರುದ್ಧ ಕಿಡಿಕಾರಿದರು.

ಎಲ್ಲರೂ ಭಾಗಿ: ಎಸ್‌ಎಫ್ಐ ರಾಜ್ಯ ಉಪಾಧ್ಯಕ್ಷ ವಾಸುದೇವರೆಡ್ಡಿ ಮಾತನಾಡಿ, ಭಾರತ 130 ಕೋಟಿ ಜನರ ಸ್ವತ್ತು. ಧರ್ಮ, ಜಾತಿ ನೋಡದೆ ಸ್ವಾತಂತ್ರ್ಯ ಸಂಗ್ರಾಮದಲ್ಲಿ ಎಲ್ಲರೂ ಭಾಗವಹಿಸಿದ್ದರು. ಡಾ.ಬಿ.ಆರ್‌.ಅಂಬೇಡ್ಕರ್‌ ಸಂವಿಧಾನ ರಚಿಸಿ ದೇಶದ ಹಿತ ಕಾಯುವ ಕೆಲಸವನ್ನು ಮಾಡಿದ್ದರು. ಇದರಿಂದ ಸರ್ವರು ಶಾಂತಿ ನೆಮ್ಮದಿಯಿಂದ ಬದುಕಲು ಸಾಧ್ಯವಾಗಿದೆ ಎಂದು ಹೇಳಿದರು.

ಸಂವಿಧಾನ ವಿರೋಧಿ ಕಾಯ್ದೆ: ಇಂತಹ ದೇಶದಲ್ಲಿ 70 ವರ್ಷಗಳಿಂದ ಅಭಿವೃದ್ಧಿಯಾಗಿಲ್ಲ, ನಾವು ಮಾಡುತ್ತೇವೆ ಎಂದು ಜನರಿಂದ ಮತ ಪಡೆದು ಆರ್ಥಿಕತೆ ಕುಸಿತ ಗೊಳಿಸಿ ಜನರ ಮೇಲೆ ತೆರಿಗೆ ಹೇರಿದ್ದಲ್ಲದೆ, ನಾವು ಮಾಡಿದ್ದೇ ಶಾಸನವೆಂಬಂತೆ ಜನರ ಭಾವನೆಗಳಿಗೆ ಅವಕಾಶ ಕಲ್ಪಿಸದೆ, ನಿಗೂಢ ರೀತಿಯಲ್ಲಿ ಸಂವಿಧಾನದ ವಿರುದ್ಧ ಕಾಯ್ದೆಗಳನ್ನು ರೂಪಿಸಿ, ಅನುಷ್ಠಾನ ಮಾಡಲು ಹೊರಟಿರುವುದು ಸರಿಯಲ್ಲಯೆಂದು ದೂರಿದರು.

ಅಫ್ಘಾನಿಸ್ತಾನ್‌, ಬಾಂಗ್ಲಾ, ಪಾಕಿಸ್ತಾನದಲ್ಲಿ ಅಲ್ಪ ಸಂಖ್ಯಾತರಿಗೆ ರಕ್ಷಣೆ ಇಲ್ಲ. ಅವರಿಗೆ ನಮ್ಮ ದೇಶದ ಪೌರತ್ವ ನೀಡಿ ರಕ್ಷಣೆ ನೀಡಬೇಕು ಎನ್ನುತ್ತಾರೆ. ಆದರೆ, ದೇಶದಲ್ಲಿನ ಅಲ್ಪಸಂಖ್ಯತರ, ದಲಿತರ ಮೇಲೆ ಇತ್ತೀಚೆಗೆ ನಡೆಯುತ್ತಿರುವ ದಬ್ಟಾಳಿಕೆ, ದೌರ್ಜನ್ಯ ತಡೆದು ನಂತರ ಪಕ್ಕದ ದೇಶಗಳಲ್ಲಿನ ಅಲ್ಪಸಂಖ್ಯಾತರ ರಕ್ಷಣೆಗೆ ಒತ್ತಾಯಿಸಿದರು.

Advertisement

ಜೆಡಿಎಸ್‌ ತಾಲೂಕು ಅಧ್ಯಕ್ಷ ಕಾಡೇನಹಳ್ಳಿ ನಾಗರಾಜ್‌, ಕಾಂಗ್ರೆಸ್‌ ಮುಖಂಡ ರಾಮಲಿಂಗಾರೆಡ್ಡಿ, ಉತ್ತನೂರು ಶ್ರೀನಿವಾಸ್‌, ವಕೀಲ ಬಷೀರ್‌ಆಹ್ಮದ್‌, ಸಿಪಿಎಂನ ಪುಣ್ಯಹಳ್ಳಿ ಶಂಕರ್‌, ಎಸ್‌ಡಿಪಿಐ ಜುಬೇರ್‌, ದಲಿತ ಸಂಘಟನೆಗಳ ಕೀಲುಹೊಳಲಿ ಸತೀಶ್‌, ಸಂಗಸಂದ್ರ ವಿಜಯಕುಮಾರ್‌ ಮತ್ತಿತರರು ಮಾತನಾಡಿದರು. ಎಸ್ಪಿ ಕಾರ್ತೀಕ್‌ ರೆಡ್ಡಿ ನಗರದಲ್ಲಿಯೇ ಮೊಕ್ಕಾಂ ಹೂಡಿದ್ದರು. ಎಎಸ್ಪಿ ಜಾಹ್ನವಿ ನೇತೃತ್ವದಲ್ಲಿ 300ಕ್ಕೂ ಹೆಚ್ಚು ಪೊಲೀಸ್‌ ಅಧಿಕಾರಿಗಳು ಮತ್ತು ಸಿಬ್ಬಂದಿಯನ್ನು ಬಂದೋಬಸ್ತ್ಗೆ ನಿಯೋಜಿಸಲಾಗಿತ್ತು.

ಟಿಎಪಿಸಿಎಂಎಸ್‌ ಅಧ್ಯಕ್ಷ ಅಲಂಗೂರು ಶಿವಣ್ಣ, ತೇಜೋರಮಣ, ವಜಾಹತ್‌ವುಲ್ಲಾಖಾನ್‌, ಎಂ.ಪಿ. ವಾಜೀದ್‌, ಜಿಪಂ ಸದಸ್ಯ ಅರವಿಂದ್‌, ಮಾಜಿ ಸದಸ್ಯ ಬಿ.ವಿ.ಶಾಮೇಗೌಡ, ಕಿಸಾನ್‌ಖೇತ್‌ ಸುಭಾಶ್‌ಗೌಡ, ಕಸವು ವೆಂಕಟರಾಮಪ್ಪ, ಮೋಹನ್‌, ಬೀಡಿ ಅಮಾನುಲ್ಲಾ, ನಗರಸಭಾ ಸದಸ್ಯರಾದ ಮಹ್ಮದ್‌ಜಬೀವುಲ್ಲಾ, ಚಾಂದ್‌ಪಾಷ, ಶಾಹೀನ್‌ಪಾಷ, ಅಕ್ಮಲ್‌ ಬೇಗ್‌, ಸೈಯದ್‌ ವಜೀರ್‌, ಆಯೂಬ್‌ ಪಾಷ, ಇಮ್ರಾನ್‌ ಪಾಷ, ತಾಲೂಕಿನ ಎಲ್ಲಾ ಮಸೀದಿಗಳ ಮುತ್ತುವಲ್ಲಿಗಳು ಪಾಲ್ಗೊಂಡಿದ್ದರು.

Advertisement

Udayavani is now on Telegram. Click here to join our channel and stay updated with the latest news.

Next