Advertisement

ಪುರಸಭೆ ಮುಖ್ಯಾಧಿಕಾರಿಗೆ ಘೇರಾವ್‌

02:27 PM May 28, 2019 | Team Udayavani |

ಅಫಜಲಪುರ: ಪಟ್ಟಣದ ವಾರ್ಡ್‌ ನಂ. 16 ಹೂಗಾರ ಪ್ಲಾಟ್‌ಗೆ ಹಗಲು ಹೊತ್ತಿನಲ್ಲಿ ನೀರು ಬಿಡುವಂತೆ ಒತ್ತಾಯಿಸಿ ಮಹಿಳೆಯರು ಪುರಸಭೆ ಮುಖ್ಯಾಧಿಕಾರಿಗೆ ಘೇರಾವ್‌ ಹಾಕಿದರು.

Advertisement

ಪಟ್ಟಣದ ಎಲ್ಲ ವಾರ್ಡ್‌ಗಳಿಗೆ ಹಗಲೊತ್ತಿನಲ್ಲಿ ನೀರು ಪೂರೈಸಲಾಗುತ್ತಿದೆ. ಆದರೆ ಹೂಗಾರ್‌ ಪ್ಲಾಟ್‌ಗೆ(ಲಿಂಬಿತೋಟ) ಮಾತ್ರ ರಾತ್ರಿ ವೇಳೆಯಲ್ಲಿ ನೀರು ಬಿಡಲಾಗುತ್ತಿದೆ. ಇದರಿಂದ ನಮ್ಮ ನಿದ್ದೆಗೆ ತೊಂದರೆಯಾಗುತ್ತಿದೆ. ನೀರಿನ ಟ್ಯಾಂಕ್‌ನಿಂದ ರಾತ್ರಿ ವೇಳೆಯಲ್ಲಿ ನೀರು ಬಿಡಬೇಡಿ ಎಂದು ಹೇಳೕದಾಗ ವಿದ್ಯುತ್‌ ಸಂಪರ್ಕ ಕಡಿತಗೊಳಿಸಿ ಪುರಸಭೆ ಸಿಬ್ಬಂದಿ ಕಲ್ಲೆಸೆದಿದ್ದಾರೆ. ಇದರಿಂದ ರಾಜಶ್ರೀ ಮಾಳಗೆ ಎಂಬ ಮಹಿಳೆ ತಲೆ ಒಡೆದಿದ್ದು, ಸೊಲ್ಲಾಪುರ ಖಾಸಗಿ ಆಸ್ಪತ್ರೆಗೆ ದಾಖಲಿಸಲಾದ ಹಿನ್ನೆಲೆಯಲ್ಲಿ ರೊಚ್ಚಿಗೆದ್ದ ಮಹಿಳೆಯರು ಪುರಸಭೆಗೆ ಮುತ್ತಿಗೆ ಹಾಕಿದರು. ಅಲ್ಲದೇ ಪ್ರತಿಭಟನೆ ನಡೆಸಿ ಪುರಸಭೆ ಕಚೇರಿಗೆ ಬೀಗ ಹಾಕಿ ಮುಖ್ಯಾಧಿಕಾರಿ ಖೈಸರ್‌ ಹುಸೇನ್‌ ಅವರಿಗೆ ತರಾಟೆಗೆ ತೆಗೆದುಕೊಂಡರು.

ಎಲ್ಲ ವಾರ್ಡ್‌ಗೆ ಹಗಲಿನಲ್ಲಿ ನೀರು ಬಿಡಲಾಗುತ್ತಿದೆ. ನಮ್ಮ ವಾರ್ಡ್‌ಗೇಕೆ ರಾತ್ರಿ ಬಿಡುತ್ತಿರಿ? ಹಗಲಿನಲ್ಲಿ ನೀರು ಬಿಡಿ. ನೀರಲ್ಲಿ ಬ್ಲೀಚಿಂಗ್‌ ಪೌಡರ್‌ ಬಳಸಿ ಸಮರ್ಪಕವಾಗಿ ಪೂರೈಸಿ ಎಂದು ಎಷ್ಟು ಬಾರಿ ಮನವಿ ಮಾಡಿದರೂ ಹಾರಿಕೆ ಉತ್ತರ ನೀಡುತ್ತಿದ್ದಾರೆ. ಇದರ ಬಗ್ಗೆ ಕ್ರಮ ಕೈಗೊಳ್ಳದಿದ್ದರೆ ಇನ್ನಷ್ಟು ಉಗ್ರ ಹೋರಾಟ ಮಾಡಬೇಕಾಗುತ್ತದೆ ಎಂದು ಎಚ್ಚರಿಸಿದರು. ಸಮಸ್ಯೆ ಕುರಿತು ತಹಶೀಲ್ದಾರ್‌ ಮೂಲಕ ಜಿಲ್ಲಾಧಿಕಾರಿಗಳಿಗೆ ಮನವಿ ಸಲ್ಲಿಸಿದರು.

ವಾರ್ಡ್‌ ಮಹಿಳೆಯರಾದ ಅನ್ನಪೂರ್ಣ ಮ್ಯಾಳೇಶಿ, ಗುರುಬಾಯಿ ಹಡಲಗಿ, ಸರೋಜ ಪ್ರಧಾನಿ, ವಿಜಯಲಕ್ಷ್ಮೀ ಸಾಸನೇಕರ, ನಿರ್ಮಲಾ ಹಿರೇಮಠ, ಅನಿತಾ ಅಪ್ಪಾರಾವ, ರತಾಬಾಯಿ ಹೂಗಾರ, ಶಿವಲೀಲಾ ಮ್ಯಾಳೇಸಿ, ಸಿದ್ದಮ್ಮ ಅತನೂರ, ಭೀಮಬಾಯಿ ಹುಕ್ಕೇರಿ, ಚಿದಾನಂದ ಮಠ, ಶೇಖಪ್ಪ ಹಂಗರಗಿ, ಶ್ರೀಮಂತ ಬಿರಾದಾರ, ಬಸವರಾಜ ಇದ್ದರು.

Advertisement

Udayavani is now on Telegram. Click here to join our channel and stay updated with the latest news.

Next