Advertisement
ಕಾರ್ನಾಡು ಸದಾಶಿವ ರಾವ್ ನಗರದ ನಿವಾಸಿಗಳಿಗೆ ಕೆಲವು ದಿನಗಳಿಂದ ವಾರಕ್ಕೊಮ್ಮೆ ಕೇವಲ 500 ಲೀಟರ್ ನೀರನ್ನು ನೀಡಲಾಗುತ್ತಿದೆ ಎಂದು ಆರೋಪಿಸಿ, ಗುರುವಾರ ನಡೆದ ಪ್ರತಿಭಟನ ಸಭೆಯಲ್ಲಿ ಅವರು ಮಾತನಾಡಿದರು. ಸರಕಾರ ಕೋಟ್ಯಂತರ ರೂ. ಅನುದಾನವನ್ನು ನ.ಪಂ.ಗೆ ನೀಡುತ್ತಿದ್ದರೂ ನೀರಿನ ಬವಣೆಯನ್ನು ನೀಗಿಸುವಲ್ಲಿ ನಗರ ಪಂಚಾಯತ್ ವಿಫಲವಾಗಿದೆ ಎಂದು ಸದಸ್ಯ ಯೋಗೀಶ್ ಕೋಟ್ಯಾನ್ ಹೇಳಿದರು.
ಮಾಜಿ ಅಧ್ಯಕ್ಷ ಹಾಗೂ ಸದಸ್ಯ ಬಿ.ಎಂ. ಆಸೀಫ್ ಮಾತನಾಡಿ, ನೀರಿನ ಸಮಸ್ಯೆಯನ್ನು ಎದುರಿಸುವ ನಿಟ್ಟಿನಲ್ಲಿ ಮುನ್ನೆಚ್ಚರಿಕೆ ತೆಗೆದುಕೊಳ್ಳುವಂತೆ ಮಾಸಿಕ ಸಭೆಯಲ್ಲಿ ನಾನು ಎಚ್ಚರಿಸಿದ್ದರೂ, ಆಡಳಿತದ ನಿರ್ಲಕ್ಷ್ಯ ದಿಂದ ಈಗಲೇ ಸದಾಶಿವ ರಾವ್ ನಗರದಲ್ಲಿ ನೀರಿನ ಸಮಸ್ಯೆ ಎದುರಾಗಿದೆ. ನಿರ್ಲಕ್ಷ್ಯ ಇದೇ ರೀತಿ ಮುಂದುವರಿದರೆ ಮುಂದಿನ ದಿನಗಳಲ್ಲಿ ದೊಡ್ಡ ಮಟ್ಟದ ಪ್ರತಿಭಟನೆ ಮಾಡಬೇಕಾದೀತು ಎಂದು ಎಚ್ಚರಿಸಿದರು. ಪ್ರತಿ ತಿಂಗಳು ಬಿಲ್ ಕೊಡಿ
ಸ್ಥಳೀಯ ಮುಖಂಡ ಮಾಂತಯ್ಯ ಸ್ವಾಮಿ ಮಾತನಾಡಿ, ಪ್ರತಿದಿನವೂ ನೀರು ನೀಡಬೇಕು ಹಾಗೂ ಅದರ ಬಿಲ್ ಅನ್ನು ಪ್ರತಿ ತಿಂಗಳು ನೀಡಬೇಕು. ಈಗ ವರ್ಷಕ್ಕೊಮ್ಮೆ ನೀಡುತ್ತಿರುವುದರಿಂದ ಪಾವತಿಸುವುದು ಕಷ್ಟವಾಗುತ್ತಿದೆ ಎಂದರು. ನ.ಪಂ. ಸದಸ್ಯರಾದ ಕಲಾವತಿ ಯಾನೆ ಕಲ್ಲವ್ವ, ಅಶೋಕ್ ಪೂಜಾರ್, ಮಾಜಿ ಸದಸ್ಯ ಗೊಲ್ಲಾಲಪ್ಪ, ಭೀಮಾಶಂಕರ್, ಮಂಜುನಾಥ ಕಂಬಾರ, ಎ.ಎಚ್. ಶಮೀರ್, ಮುಸ್ತಫಾ, ವೀರಯ್ಯ ಹಿರೇಮಠ ಮತ್ತಿತರರಿದ್ದರು.
Related Articles
ಮನವಿ ಸ್ವೀಕರಿಸಿದ ಮುಖ್ಯಾಧಿಕಾರಿ ಇಂದೂ ಎಂ., ನೀರಿನ ಸಮಸ್ಯೆ ಪರಿಹರಿಸಲು ಪ್ರಥಮ ಆದ್ಯತೆ ನೀಡಿ ಶ್ರಮಿಸಲಾಗುತ್ತಿದೆ. ಈಗಾಗಲೇ ಆರಂಭಿಸಿರುವ ಬೋರ್ ವೆಲ್ ಮತ್ತು ಹಳೆ ಬೋರ್‌ವೆಲ್ ದುರಸ್ತಿ ಕೆಲಸ ಎರಡು ದಿನಗಳೊಳಗೆ ಪೂರ್ಣಗೊಳ್ಳಲಿದ್ದು, ನೀರಿನ ಸಮಸ್ಯೆಗೆ ಪರಿಹಾರ ನಿರೀಕ್ಷಿಸಲಾಗಿದೆ ಎಂದರು.
Advertisement