Advertisement

ರಾಯಣ್ಣ ಮೂರ್ತಿಗೆ ಅವಮಾನ: ಕುಳಗೇರಿ ಕ್ರಾಸ್ ನಲ್ಲಿ ಮುಂದುವರೆದ ಪ್ರತಿಭಟನೆ

04:53 PM Dec 19, 2021 | Team Udayavani |

ಬಾಗಲಕೋಟೆ (ಕುಳಗೇರಿ ಕ್ರಾಸ್) : ಕರ್ನಾಟಕ ನವ ನಿರ್ಮಾಣ ವೇದಿಕೆ ಹಾಗೂ ಕರ್ನಾಟಕ ರಕ್ಷಣಾ ಪಡೆಯ ಕಾರ್ಯಕರ್ತರು ಗ್ರಾಮದ ಸಂಗೊಳ್ಳಿ ರಾಯಣ್ಣ ವೃತ್ತದಲ್ಲಿ ಪ್ರತಿಭಟನೆ ನಡೆಸಿದರು.

Advertisement

ಬೆಳಗಾವಿಯಲ್ಲಿ ಎಂಇಎಸ್ ನಡೆಸಿದ ಪುಂಡಾಟಿಕೆ ವಿರುದ್ಧ ಗ್ರಾಮದ ರಾಷ್ಟ್ರೀಯ ಹೆದ್ದಾರಿ ತಡೆದು ಪ್ರತಿಭಟನೆಗಿಳಿದ ವಿವಿಧ ಸಂಘಟನೆ ಕಾರ್ಯಕರ್ತರು ಟೈಯರ್ ಗೆ ಬೆಂಕಿ ಹಚ್ಚಿ ಆಕ್ರೋಶ ಹೊರ ಹಾಕಿದರು.

ಬೆಳಗಾವಿಯಲ್ಲಿ ಮರಾಠಿಗರು ರಾತ್ರಿ ಹೊತ್ತು ನಕ್ಷಲರಂತೆ ರಾಯಣ್ಣನ ಮೂರ್ತಿಗೆ ಅಪಮಾನ ಮಾಡಿ ಶಾಂತಿ ಕದಡುವ ಕೆಲಸ ಮಾಡಿದ್ದಾರೆ.   ಕನ್ನಡಿಗರ ತಾಳ್ಮೆ ಪರೀಕ್ಷೆ ಮಾಡಿ  ಶೌರ್ಯ ಪ್ರದರ್ಶನ ಮಾಡುತ್ತಿರುವ  ಎಂಇಎಸ್ ನವರ ಗುಂಡಾಗಿರಿಯನ್ನ ಸರಕಾರ ಹತ್ತಿಕ್ಕಬೇಕು. ಇಲ್ಲದಿದ್ದರೆ ನಮ್ಮ ಪ್ರಾಣ ಹೋದರು ಚಿಂತೆಯಿಲ್ಲ ಪ್ರತಿ ಗ್ರಾಮದಿಂದ ಪ್ರತಿಭಟನೆ ಮಾಡುವ ಮೂಲಕ ಬೆಳಗಾವಿ ಪ್ರವೇಶ ಮಾಡಿ ಬ್ರಿಟಿಷರಂತೆ ಮರಾಠಿಗರನ್ನು ಮಹಾರಾಷ್ಟ್ರಕ್ಕೆ ಓಡಿಸಬೇಕಾಗುತ್ತದೆ ಎಂದು ಗ್ರಾಪಂ ಸದಸ್ಯ ಹನುಮಂತ ನರಗುಂದ ಮರಾಠರ ವಿರುದ್ಧ ಹರಿಹಾಯ್ದರು.

ಸದ್ಯ ಬರಿ ಶಾಂತಿ ಪಾಲನೆಯಲ್ಲಿ ಮುನ್ನಡೆದ ನಮ್ಮ ಸರಕಾರ ಸೂಕ್ತ ನಿರ್ಧಾರ ತೆಗೆದುಕೊಂಡು ಪುಂಡಾಟಿಕೆ ನಡೆಸಿದವರನ್ನ ಕರ್ನಾಟಕ ದಿಂದ ಹೊರಹಾಕಿ  ಎಂದು ಆಗ್ರಹಿಸಿದರು.

ನವಿಲುತಿರ್ಥ ಜಲಾಶಯ ಕಾಡಾ ನಿರ್ದೇಶಕ ನಾಗಪ್ಪ ಅಡಪಟ್ಟಿ ಮಾತನಾಡಿ ಬೆಳಗಾವಿ ನಮ್ದೈತಿ ನಿಮ್ಮಪ್ಪಗೂ ಬಿಟ್ಟುಕೊಡಲ್ಲ, ನಿವೆನಾದ್ರು ಬಾಲ ಬಿಚ್ಚಿದ್ದ ಕರೆಆದ್ದ ಕರೆಆದ್ರ, ನೀವು ನಮ್ಮ ದ್ವಜ ಸುಟ್ಟ ಅಪಮಾನ ಮಾಡಿರಿ ನಾವು ನಿಮ್ಮನ್ನ ಸುಡ್ತೇವಿ ಹುಷಾರ್ ಎಂದು ಎಚ್ಚರಿ ನೀಡಿದರು.

Advertisement

ದೇಶಕ್ಕಾಗಿ ಪ್ರಾಣ ತ್ಯಾಗ ಮಾಡಿದ ರಾಯಣ್ಣ-ಶಿವಾಜಿ ಒಂದೆ ಎಂದುಕೊಂಡು ಪೂಜಿಸುತ್ತಿದ್ದ  ಕನ್ನಡಿಗರ ಮನಸ್ಸನ್ನ ಚಿದ್ರ ಮಾಡಿ ನಮ್ಮ ದೇಶಭಕ್ತರನ್ನ  ಬೇರೆ ಬೇರೆ ಮಾಡುತ್ತಿದ್ದಿರಿ ಈ ವಿಷಯವನ್ನು ಮಹಾರಾಷ್ಟ್ರ ಸರಕಾರ ಗಂಭೀರವಾಗಿ ತೆಗೆದುಕೊಳ್ಳಬೇಕು, ಉದ್ದಟತನ ನಿಲ್ಲಿಸಿ ಇಂಥವರಿಗೆ ಕಾನೂನು ಕ್ರಮ ಜರುಗಿಸಿ ಬುದ್ದಿ ಕಲಿಸಬೇಕು, ಇಲ್ಲದಿದ್ದಲ್ಲಿ  ಬಾರಿ ತೊಂದರೆ ಅನುಭವಿಸಬೇಕಾಗುತ್ತೆ ಎಂದು ಎಚ್ಚರಿಕೆ ನೀಡಿದರು.

ಕರ್ನಾಟಕ ನವ ನಿರ್ಮಾಣ ವೇದಿಕೆ ಜಿಲ್ಲಾಧ್ಯಕ್ಷ ಬಸಪ್ಪ ಧರೆಗೌಡ್ರ, ತಾಲೂಕಾಧ್ಯಕ್ಷ ಬೀರಪ್ಪ ಕರಡಿಗುಡ್ಡ,  ಕರ್ನಾಟಕ ರಕ್ಷಣಾ ಪಡೆ ತಾಲೂಕು ಅಧ್ಯಕ್ಷ ಮೋದಿನ ನರಗುಂದ, ಉಪಾಧ್ಯಕ್ಷ ಬಾಲಪ್ಪ ಎತ್ತಿನಮನಿ ಮಾತನಾಡಿ ನಮ್ಮ ರಾಜ್ಯದಲ್ಲಿದ್ದು ನಮ್ಮ ತಾಯಿಗೆ, ದೇಶ ಭಕ್ತರಿಗೆ, ಕನ್ನಡಿಗರಿಗೆ ದ್ರೋಹ ಮಾಡುತ್ತಿದ್ದರೆ ನೋಡಿಕೊಂಡು ಸುಮ್ಮನಿರುವ ಸರ್ಕಾರಕ್ಕೆ ಎನೆಂದು ಹೇಳಬೇಕು. ಇಷ್ಟು ತಾಳ್ಮೆ, ಸಹನೆ, ಶಾಂತಿ ತೆಗೆದುಕೊಳ್ಳುತ್ತಿರುವುದು ಏತಕ್ಕಾಗಿ ಎಂದು ಸರ್ಕಾರವನ್ನು ಪ್ರಶ್ನಿಸಿದ ಸಂಘಟನೆಯವರು  ಬೆಳಗಾವಿ ವಿಷಯದಲ್ಲಿ ಸರ್ಕಾರ ಪಕ್ಷಾತೀತವಾಗಿ ಕೆಲಸ ಮಾಡಬೇಕು. ಇಲ್ಲದಿದ್ದರೆ ರಾಜ್ಯದ ಎಲ್ಲ ಸಂಘಟನೆಗಳು ಒಂದಾಗಿ ಎಲ್ಲರಿಗೂ ಪಾಠ ಕಲಿಸಬೇಕಾಗುತ್ತೆ ಎಂದು ಸರಕಾರಕ್ಕೆ ಎಚ್ಚರಿಕೆ ನೀಡಿದರು.

ಸೇರಿದಂತೆ ಸುತ್ತ ಗ್ರಾಮಸ್ಥರು, ವಿವಿಧ ಸಂಘಟನೆ ಕಾರ್ಯಕರ್ತರು ಇದ್ದರು.

Advertisement

Udayavani is now on Telegram. Click here to join our channel and stay updated with the latest news.

Next