Advertisement
ಪ್ರತಿಭಟನಾ ಸ್ಥಳಕ್ಕೆ ಆಗಮಿಸಿದ ತಹಶೀಲ್ದಾರ್ ಬಸವರಾಜ ಕಡಕಬಾವಿ ಅವರಿಗೆ ಕರ್ನಾಟಕ ರಾಜ್ಯ ರೈತ ಸಂಘ ಹಾಗೂ ಹಸಿರು ಸೇನೆ ಜಿಲ್ಲಾಧ್ಯಕ್ಷ ಚಂದ್ರಗೌಡ ಪಾಟೀಲ ಮನವಿ ಸಲ್ಲಿಸಿದರು. ಪ್ರತಿಭಟನೆ ನೇತೃತ್ವ ವಹಿಸಿದ್ದ ಕರ್ನಾಟಕ ರಾಜ್ಯ ರೈತ ಸಂಘ ಹಾಗೂ ಹಸಿರು ಸೇನೆ ಜಿಲ್ಲಾಧ್ಯಕ್ಷ ಚಂದ್ರಗೌಡ ಪಾಟೀಲ ಮಾತನಾಡಿ, ರೈತರು ಬೆಳೆದ ತೊಗರಿ ಇನ್ನಿತರೆ ಬೆಳೆಗಳಿಗೆ ಬೆಳೆ ಬರುವುದಿಲ್ಲ ಎಂದು ಕಬ್ಬು ಬೆಳೆದರೂ ರೈತನ ಕೈಗೆ ಹಣ ಸೇರುತ್ತಿಲ್ಲ. ಕಬ್ಬು ಕಟಾವುಮಾಡಿ ಸಕ್ಕರೆ ಕಾರ್ಖಾನೆಗೆ ಕಳುಹಿಸಿದರೆ ರೈತರಿಗೆ ಸಕ್ಕರೆ ಕಾರ್ಖಾನೆಯವರು ಹಣ ನೀಡುತ್ತಿಲ್ಲ. ಅದರಲ್ಲಿ ಇಂಡಿ ತಾಲೂಕಿನ ನಾದ ಗ್ರಾಮದಲ್ಲಿನ ಜಮಖಂಡಿ ಶುಗರ್ ಸಕ್ಕರೆ ಕಾರ್ಖಾನೆ ರೈತರ ಪಾಲಿಗೆ ಪಾಷಾಣವಾಗಿದೆ ಎಂದು ಆರೋಪಿಸಿದರು.
ಸತಾಯಿಸುತ್ತಿದ್ದಾರೆ. ಕೂಡಲೇ ಜಿಲ್ಲಾಧಿಕಾರಿಗಳು ಈ ಸಕ್ಕರೆ ಕಾರ್ಖಾನೆ ಮೇಲೆ ಕ್ರಮ ಕೈಗೊಳ್ಳ ಬೇಕು ಎಂದು ಜಿಲ್ಲಾಧಿಕಾರಿಗಳಿಗೆ ಒತ್ತಾಯಿಸಿದರು. ಜಮಖಂಡಿ ಶುಗರ್ ಕಾರ್ಖಾನೆಯವರು ರೈತರಿಂದ ಕಬ್ಬು ಪಡೆಯುವಾಗ ಒಂದು ಮಾತನಾಡುತ್ತಾರೆ. ನಂತರ ಹಣ ಪಡೆಯಲು ಹೋದಾಗ ಅಲ್ಪ ಸ್ವಲ್ಪ ಹಣ ನೀಡಿ ಮೂಗಿಗೆ ತುಪ್ಪ ಹಚ್ಚಿದ ಹಾಗೆ ಮಾಡುತ್ತಾರೆ.
Related Articles
ಶುಗರ್ ಸಕ್ಕರೆ ಕಾರ್ಖಾನೆ ಮುಟ್ಟುಗೊಲು ಹಾಕಿ ರೈತರಿಗೆ ಬಾಕಿ ಹಣ ನೀಡುವಂತೆ ಮಾಲೀಕರಿಗೆ ಹಾಗೂ ವ್ಯವಸ್ಥಾಪಕರಿಗೆ ಸೂಚಿಸಬೇಕು. ಅವರು ಒಪ್ಪದ ಪಕ್ಷದಲ್ಲಿ ಕಾರ್ಖಾನೆ ಆಸ್ತಿ ಮುಟ್ಟುಗೋಲು ಹಾಕುವ ಮೂಲಕ ಹರಾಜು ಮಾಡಿ ರೈತರಿಗೆ ಹಣ ನೀಡುವ ಮೂಲಕ ರೈತರ ಸಂಕಷ್ಟಕ್ಕೆ ಸಹಕಾರಿಯಾಗಬೇಕು. ಇಲ್ಲವೇ ಅವರಿಂದಲೇ ರೈತರಿಗೆ ವಿಷದ ಪೊಟ್ಟಣ ವಿತರಿಸಬೇಕು ಎಂದು ಆಕ್ರೋಶವ್ಯಕ್ತಪಡಿಸಿದರು.
Advertisement
ಕರ್ನಾಟಕ ರಾಜ್ಯ ರೈತ ಸಂಘ ಹಾಗೂ ಹಸಿರು ಸೇನೆ ತಾಲೂಕಾಧ್ಯಕ್ಷ ಮಹೇಶ ಸಾವಳಸಂಗ ಮಾತನಾಡಿ, ಸಿಂದಗಿ ತಾಲೂಕಿನಲ್ಲಿ ಸರಕಾರ ಸಕ್ಕರೆ ಕಾರ್ಖಾನೆ ಪ್ರಾರಂಭಿಸುವ ಮೂಲಕ ಜಮಖಂಡಿ ಶುಗರ್ನಂಥಹ ಸಕ್ಕರೆ ಕಾರ್ಖಾನೆಗೆ ತಕ್ಕ ಪಾಠ ಕಲಿಸಬೇಕು. ರೈತರ ಬಾಕಿ ಹಣ ನೀಡದಂತ ಜಮಖಂಡಿ ಶುಗರ್ ಕಾರ್ಖಾನೆ ಮಾನ್ಯತೆ ರದ್ದು ಮಾಡುವ ಮೂಲಕ ಉಳಿದ ಸಕ್ಕರೆ ಕಾರ್ಖಾನೆಗಳಿಗೂ ಎಚ್ಚರಿಕೆ ನೀಡಬೇಕು ಎಂದು ಒತ್ತಾಯಿಸಿದ್ದಾರೆ.
ಕರ್ನಾಟಕ ರಾಜ್ಯ ರೈತ ಸಂಘ ಹಾಗೂ ಹಸಿರು ಸೇನೆ ಜಿಲ್ಲಾ ಕಾರ್ಯದರ್ಶಿ ಶಂಕರಗೌಡ ಜಿ. ಬಿರಾದಾರ ಆಸಂಗಿಹಾಳ, ತಾಲೂಕು ಪ್ರಧಾನ ಕಾರ್ಯದರ್ಶಿ ಶಿವಲಿಂಗಪ್ಪ ಡಂಬಳ, ಹನುಮಂತ ಬಿಜಾಪುರ, ಈರಯ್ಯ ಮಠಪತಿ, ಇಮಾಮಸಾಬ ಬೈರೋಡಗಿ, ರಾಜು ಮಾಲಗಾರ, ಬಾಪುಗೌಡ ಚೌಧರಿ, ಗೋಲ್ಲಾಳಪ್ಪ ಡಂಬಳ, ನಿಂಗಯ್ಯ ಮಠಪತಿ, ಕೆಂಚಪ್ಪ ತಳವಾರ, ರಾಯಪ್ಪ ಹಳಗೊಂಡ, ಶಂಕ್ರಯ್ಯ ಹಳಗೊಂಡ, ಶಂಕ್ರಯ್ಯ ಹಿರೇಮಠ, ಚಂದ್ರಶೇಖರ ಕೋಟ್ಯಾಳ, ಅಮರಪ್ಪ ಬೆಕಿನಾಳ, ಸಿದ್ದಪ್ಪ ಚೋರಗಸ್ತಿ, ಸಿದ್ದಪ್ಪ ಚೋರಗಸ್ತಿ, ಮಲ್ಲಪ್ಪ ಹವಳಗಿ, ನಿಂಗಪ್ಪ ನಾಗೂರ, ಭೀಮಣ್ಣ ಬನ್ನೆಟ್ಟಿ, ರವೀಂದ್ರ ಚೋರಗಸ್ತಿ, ನಿಂಗಣ್ಣ ಕರಿಶೆಟ್ಟಿ ಸೇರಿಂದತೆ ನೂರಾರು ರೈತರು ಪ್ರತಿಭಟನೆ ನಡೆಸಿದರು.