ನಗರದಲ್ಲಿ ಸೋಮವಾರ ಪ್ರತಿಭಟನೆ ನಡೆಸಿ, ಜಿಲ್ಲಾಡಳಿತಕ್ಕೆ ಮನವಿ ಸಲ್ಲಿಸಿದರು.
Advertisement
ಪ್ರತಿಭಟನೆಯ ನೇತೃತ್ವ ವಹಿಸಿದ್ದ ಹೋರಾಟ ಸಮಿತಿಯ ಜಿಲ್ಲಾಧ್ಯಕ್ಷ ಸಿರಿಗೇರಿ ಪನ್ನರಾಜ್ ಮಾತನಾಡಿ, ಹೈದ್ರಾಬಾದ್ ಕರ್ನಾಟಕ ಪ್ರದೇಶಕ್ಕೆ ಬಳ್ಳಾರಿ ಜಿಲ್ಲೆಯನ್ನು ಸೇರಿಸಲು ಎಲ್ಲ ಪಕ್ಷಗಳ ವಿರೋಧದ ನಡುವೆ ಕಾಂಗ್ರೆಸ್ ಅಧಿನಾಯಕಿ ಸೋನಿಯಾ ಗಾಂಧಿ ಬಳ್ಳಾರಿಯನ್ನು ಸೇರ್ಪಡೆ ಮಾಡಿದ್ದಾರೆ. ಇದಕ್ಕಾಗಿ ನಾವು ಕೃತಜ್ಞತೆ ಸಲ್ಲಿಸುತ್ತೇವೆ. ಆದರೆ, ಹೈ.ಕ ಜನರಿಗೆ ಸಿಗಬೇಕಾದ ಸೌಲಭ್ಯಗಳು ಸಿಗುತ್ತಿಲ್ಲ. ಪ್ರಮುಖವಾಗಿ ಹಗರಿ ಸಂಶೋಧನಾ ಕೇಂದ್ರದಲ್ಲಿ ಕೃಷಿ ಕಾಲೇಜು ಬೇಡಿಕೆ ಇಡಲಾಗಿತ್ತು. ಜಿಲ್ಲೆಯ ಜನಪ್ರತಿನಿಧಿಗಳ ನಿರ್ಲಕ್ಷದಿಂದ ಕಾಲೇಜು ಬಳ್ಳಾರಿಗೆ ನೀಡಲಿಲ್ಲ. ಚಾಮರಾಜನಗರಕ್ಕೆ ಕಾಲೇಜು ನೀಡಿದ ಮುಖ್ಯಮಂತ್ರಿಗಳು ಬಳ್ಳಾರಿಗೆ ಅನ್ಯಾಯ ಮಾಡಿದ್ದಾರೆ. ಈ ಮೂಲಕ ಜಿಲ್ಲಾ ಉಸ್ತುವಾರಿ ಸಚಿವರ ಸಮ್ಮುಖದಲ್ಲಿ ನೀಡಿದ ಮಾತನ್ನು ತಪ್ಪಿದ್ದಾರೆಎಂದು ದೂರಿದರು.
ಇದ್ದರೂ 2017ರಲ್ಲಿ ಹೈಕದ 4760 ಪದವೀಧರ ಪ್ರಾಥಮಿಕ ಶಾಲಾ ಶಿಕ್ಷಕರ ನೇಮಕಾತಿಯಲ್ಲಿ ಟಿಇಟಿ ಪಾಸಾದರೂ ಅನಗತ್ಯ ನೇಮಕಾತಿ ನಿಯಮ ರಚಿಸಿ ಹುದ್ದೆಗಳನ್ನು ಖಾಲಿ ಉಳಿಸುವ ಸಂಚು ಮಾಡಲಾಗಿದೆ. ಹೈ.ಕ ಪ್ರದೇಶದ ನೌಕರರ ಬಡ್ತಿಯಲ್ಲಿ ಬಹುತೇಕ ಇಲಾಖೆಗಳು 371(ಜೆ) ಕಾನೂನು ಜಾರಿಯ ನೆಪದಲ್ಲಿ ಬಡ್ತಿಯನ್ನು ತಡೆದು ರಾಜ್ಯದ ಇತರೆ ಪ್ರದೇಶದ ನೌಕರರಿಗೆ ಮಾತ್ರ ಬಡ್ತಿಯನ್ನು ನೀಡಿ, ಈ ಭಾಗದವರಿಗೆ ಅನ್ಯಾಯ ಮಾಡುತ್ತಿದ್ದಾರೆ. ಹೈ.ಕದ
ಅಭ್ಯರ್ಥಿಗಳಿಗೆ ರಾಜ್ಯದ ಎಲ್ಲ ಜಿಲ್ಲೆಗಳಲ್ಲಿ ಶೇ.0.8 ರಷ್ಟು ಮೀಸಲಾತಿ ನೀಡಬೇಕು. ಆದರೆ, ಸಂವಿಧಾನದ 371(ಜೆ) ಕಲಂನಲ್ಲಿರುವ
ಲೋಪದೋಷ ಸರಿಪಡಿಸದೆ ಅನ್ಯಾಯ ಎಸಗಲಾಗುತ್ತಿದೆ. 2014ರಲ್ಲಿ ಕಲಬುರಗಿಯಲ್ಲಿ ಜರುಗಿದ ಸಚಿವ ಸಂಪುಟ ಸಭೆಯ ನಿರ್ಣಯದಂತೆ ಈ ಭಾಗದಲ್ಲಿ ಖಾಲಿ ಇರುವ ಎಲ್ಲ ಹುದ್ದೆಗಳನ್ನು ಭರ್ತಿ ಮಾಡುವುದಾಗಿ ಹೇಳಿ 70 ಸಾವಿರ ಹುದ್ದೆಗಳಲ್ಲಿ ಬರೀ
20 ಸಾವಿರ ಹುದ್ದೆಗಳನ್ನು ಮಾತ್ರ ಭರ್ತಿ ಮಾಡುವ ತಯಾರಿ ನಡೆಸಿದ್ದಾರೆ ಎಂದು ಆರೋಪಿಸಿದರು.
Related Articles
ಕಾಯ್ದೆಯಿಂದ ಜಿಲ್ಲೆಯ ಜನರಿಗಾಗಬೇಕಾದ ಅನುಕೂಲಗಳ ಬಗ್ಗೆ ಚಿಂತನೆ ಮಾಡುತ್ತಿಲ್ಲ ಎಂದು ದೂರಿದರಲ್ಲದೆ, ಹೈದ್ರಾಬಾದ್ ಕರ್ನಾಟಕದ ಸಮಗ್ರ ಅಭಿವೃದ್ಧಿ ದೃಷ್ಟಿಯಿಂದ ಎಚ್.ಕೆ.ಪಾಟೀಲ್ ಅವರ ನೇತೃತ್ವದಲ್ಲಿ ಸಚಿವ ಸಂಪುಟದ ಉಪ ಸಮಿತಿ 25
ಶಿಫಾರಸ್ಸುಗಳನ್ನು ಮಾಡಿದ್ದು, ಈ ಪೈಕಿ ಯಾವುದೇ ಶಿಫಾರಸ್ಸು ಅನುಷ್ಟಾನಗೊಳಿಸಿಲ್ಲ ಎಂದು ತಿಳಿಸಿದರು.
Advertisement
ರಾಜ್ಯ ಸರ್ಕಾರ ಧೋರಣೆ ಖಂಡಿಸಿ ಹೈದ್ರಾಬಾದ್ ಕರ್ನಾಟಕದಲ್ಲಿ ಹೋರಾಟ ತೀವ್ರಗೊಳಿಸಲಾಗುವುದು. ಈ ಭಾಗಕ್ಕೆ ಆಗುತ್ತಿರುವಅನ್ಯಾಯವನ್ನು ಸರಿಪಡಿಸುವವರೆಗೆ ಹೋರಾಟ ಮುಂದುವರಿಸುವ ನಿರ್ಧಾರ ಕೈಗೊಳ್ಳಲಾಗಿದ್ದು, ಶೀಘ್ರವೇ ತೀವ್ರ ಹೋರಾಟದ ನಿಲುವು ತೆಗೆದುಕೊಳ್ಳಲಾಗುವುದು ಎಂದು ಎಚ್ಚರಿಕೆ ನೀಡಿದರು. ಮುಖಂಡರಾದ ರಾಜಶೇಖರ ಶಾನವಾಸಪುರ, ಕೇಣಿ ಬಸವರಾಜ್, ದರೂರು ಶಾಂತನಗೌಡ, ಕೇಣಿ ಬಸವರಾಜ್, ಮೀನಳ್ಳಿ ಚಂದ್ರಶೇಖರ್ ಪ್ರತಿಭಟನೆಯಲ್ಲಿ ಭಾಗವಹಿಸಿದ್ದರು.