Advertisement
ಈಗಾಗಲೇ ಭೋಪಾಲ್ನಿಂದ 12 ಟನ್ಗಳಲ್ಲಿ ಸುಮಾರು 337 ಟನ್ನಷ್ಟು ಯೂನಿಯನ್ ಕಾರ್ಬೈಡ್ನ ತ್ಯಾಜ್ಯವನ್ನು ಪೀಥಂಪುರಕ್ಕೆ ತರಲಾಗಿದೆ.
ಕಾರ್ಖಾನೆಯಲ್ಲಿ ದಶಕಗಳಿಂದ ಸಂಗ್ರ ಹವಾದ ತ್ಯಾಜ್ಯ ನಿಧಾನಗತಿಯಲ್ಲಿ ಭೋಪಾಲ್ ಪರಿಸರದಲ್ಲಿ ಬೆರೆಯುತ್ತಿದ್ದು, ಅಂತರ್ಜಲ ಹಾಗೂ ಮಣ್ಣು ವಿಷಕಾರಿಯಾಗುತ್ತಿದೆ ಎಂದು ಅಲ್ಲಿನ ಪರಿಸರವಾದಿ ಗಳು ಕಾನೂನು ಹೋರಾಟ ಆರಂಭಿಸಿದರು. ಬಳಿಕ ಹೈಕೋರ್ಟ್ ಕಳೆದ ಡಿ.3 ರಂದು 4 ವಾರಗಳೊಳಗೆ ತ್ಯಾಜ್ಯ ವಿಲೇವಾರಿ ಮಾಡ ಬೇಕೆಂದು ಸರಕಾರಕ್ಕೆ ಸೂಚಿಸಿತ್ತು. ರಾಜ್ಯದಲ್ಲಿ ಕೈಗಾರಿಕ ತ್ಯಾಜ್ಯಗಳ ವಿಲೇವಾರಿಯ ಅತ್ಯಾಧುನಿಕ ಘಟಕ ಇರುವುದು ಪೀಥಂಪುರದಲ್ಲಿ ಮಾತ್ರ. ಹಾಗಾಗಿ ತ್ಯಾಜ್ಯ ವಿಲೇವಾರಿಗೆ ಈ ಸ್ಥಳ ಆಯ್ಕೆ ಮಾಡಲಾಯಿತು.