ಚನ್ನಪಟ್ಟಣ: ಭೂಹಳ್ಳಿ ಗ್ರಾಮ ಪಂಚಾಯಿತಿ ಅಧ್ಯಕ್ಷ ಹಾಗೂ ಪಂಚಾಯಿತಿ ಅಭಿವೃದ್ಧಿ ಅಧಿಕಾರಿ(ಪಿಡಿಒ), ಸರ್ಕಾರದ ನೀತಿ ನಿಯಮ ಗಾಳಿಗೆ ತೂರಿ ಪಂಚಾಯ್ತಿಯಲ್ಲಿ ಅಕ್ರಮವೆಸಗಿದ್ದಾರೆ ಎಂದು ಆರೋಪಿಸಿ, ಭೂಹಳ್ಳಿ, ಮೆಣಸಿಗನಹಳ್ಳಿ, ಲಂಬಾಣಿ ತಾಂಡಾ ಗ್ರಾಮಸ್ಥರು ಸೋಮವಾರ ತಾಪಂ ಎದುರು ಪ್ರತಿಭಟನೆ ನಡೆಸಿದರು.
ಗ್ರಾಪಂ ಅಧ್ಯಕ್ಷ, ಪಿಡಿಒ ವಿರುದ್ಧ ಆರೋಪ: ಗ್ರಾಪಂ ಅಧ್ಯಕ್ಷ ಹಾಗೂ ಪಿಡಿಒ ಸೇರಿ ಉಜ್ಜನಹಳ್ಳಿ ಗ್ರಾಮದ ನೀರುಗಂಟಿ ಆಯ್ಕೆ ಮಾಡುವಾಗ ಅಧ್ಯಕ್ಷರ ಸಹೋದರಿ ಮಗನನ್ನು ನೇಮಕ ಮಾಡಿ ಕೊಂಡು ಪಂಚಾಯಿತಿ ಅಧಿಕಾರ ದುರ್ಬಳಕೆಮಾಡಿಕೊಂಡಿದ್ದಾರೆ ಎಂದು ಆಕ್ರೋಶ ವ್ಯಕ್ತಪಡಿಸಿದರು. ಭೂಹಳ್ಳಿ ಗ್ರಾಪಂ ವ್ಯಾಪ್ತಿ ಭೂಹಳ್ಳಿ ಹಾಗೂ ಉಜ್ಜನಹಳ್ಳಿ ಗ್ರಾಮಗಳಲ್ಲಿ ನೀರು ಗಂಟಿ (ವಾಟರ್ ಮನ್)ಯಾಗಿ ಕರ್ತವ್ಯ ನಿರ್ವಹಿಸುತ್ತಿದ್ದ, ಇಬ್ಬರು ನೌಕರರು ನಿವೃತ್ತಿ ಹೊಂದಿದ್ದು ಎರಡು ಹುದ್ದೆ ತೆರವಾಗಿದವು.
ಅಕ್ರಮವಾಗಿ ನೀರು ಗಂಟಿ ನೇಮಕ: ಗ್ರಾಪಂ ಚುನಾಯಿತ ಪ್ರತಿನಿಧಿಗಳ ಸಭೆಯಲ್ಲಿ ಭೂಹಳ್ಳಿ ಹಾಗೂ ಉಜ್ಜನಹಳ್ಳಿ ಗ್ರಾಮಗಳಲ್ಲಿ ತೆರವಾಗಿದ್ದು,= ನೀರು ಗಂಟಿ ಹುದ್ದೆ ನೇಮಕಾತಿಗೆ ಜಿಪಂ ಸಿಇಒಗೆ ಮನವಿ ಸಲ್ಲಿಸಿದ ಆಧಾರ ಮೇಲೆ ತಮ್ಮ ಅಧಿಕಾರವನ್ನು ದುರುಪಯೋಗ ಪಡಿಸಿಕೊಂಡಿದ್ದಾರೆ. ಗ್ರಾಪಂ ಸಭೆಗಳಲ್ಲಿ ನೀರುಗಂಟಿ ನೇಮಕದ ವಿಚಾರ ಮಂಡಿಸದೇ, ಯಾರಿಗೂ ಗೊತ್ತಿಲ್ಲದಂತೆ ನಿಯಮಗಳನ್ನು ಗಾಳಿ ತೂರಿದ್ದಾರೆ. ಸೀಮಿತ ಪತ್ರಿಕೆಗಳಲ್ಲಿ ಪ್ರಕಟಣೆ ಹೊರಡಿಸಿ, ಯಾರಿಗೂ ಗೊತ್ತಿಲ್ಲದಂತೆ ಅಧ್ಯಕ್ಷರ ಸಹೋದರಿ ಪುತ್ರ ಪ್ರಮೋದ್‌ಕುಮಾರ್ ಎಂಬಾತತನ್ನು ಅಕ್ರಮವಾಗಿ ನೇಮಕ ಮಾಡಿ ಕೊಂಡಿದ್ದಾರೆ. ಇದರಲ್ಲಿ ಭಾಗಿಯಾಗಿರುವವರ ವಿರುದ್ಧ ಕ್ರಮಕೈಗೊಳ್ಳಬೇಕು ಎಂದು ಆಗ್ರಹಿಸಿದರು.
ಪ್ರತಿಭಟನೆ ಸ್ಥಳಕ್ಕೆ ಬಂದ ತಾಲೂಕು ಪಂಚಾಯಿತಿ ಕಾರ್ಯ ನಿರ್ವಹಣಾಧಿಕಾರಿ ಚಂದ್ರು, ಪ್ರತಿಭಟನಕಾರರ ಮನವಿ ಸ್ವೀಕರಿಸಿ ಮಾಡಿ, ಸಂಬಂಧಿಸಿದ ಮನವಿ ಪರಿಶೀಲನೆ ನಡೆಸಿ, ಜಿಪಂ ಸಿಇಒ ಗಮನಕ್ಕೆ ತರಲಾಗುವುದು ಎಂದು ಭರವಸೆ ನೀಡಿದರು.
ಭೂಹಳ್ಳಿ ಗ್ರಾಮ ಪಂಚಾಯಿತಿ ಮಾಜಿ ಅಧ್ಯಕ್ಷ ಹಾಗೂ ಸದಸ್ಯ ನಿಂಗೇಗೌಡ, ಸದಸ್ಯರಾದ ವೆಂಕಟೇಶ್, ಬೈರಪ್ಪ, ಮುಖಂಡರಾದ ಹನುಮಂತು, ಶ್ರೀನಿವಾಸ್, ಉಜ್ಜನಹಳ್ಳಿ ಕೃಷ್ಣ, ಲಕ್ಷ್ಮಣ, ಸಂಪತ್, ಪ್ರವೀಣ್, ಮೆಣಸಿಗನಹಳ್ಳಿ ಬಾಬು, ಲಂಬಾಣಿ ತಾಂಡಾದ ಚಂದ್ರನಾಯ್ಕ, ಭೀಮನಾಯ್ಕ, ರಾಜು ಹಾಗೂ ಹಲವಾರು ಮಂದಿ ಹಾಜರಿದ್ದರು.