Advertisement

ಅಕ್ರಮ ಭೂ ಮಂಜೂರು ವಿರುದ್ಧ ಪ್ರತಿಭಟನೆ

07:41 AM Mar 11, 2019 | |

ಕೋಲಾರ: ಜಿಲ್ಲೆಯ ಕಂದಾಯ ಮತ್ತು ಸರ್ವೇ ಇಲಾಖೆಯಲ್ಲಿ ನಡೆದಿರುವ ಅಕ್ರಮ ಭೂ ಮಂಜೂರಾತಿ ಪ್ರಕರಣಗಳ ವಿರುದ್ಧ ಹಾಗೂ ಸರ್ವೇಯರ್‌ ಸುರೇಶ್‌ಬಾಬು ವಿರುದ್ಧ ಪ್ರತಿಭಟನೆ ನಡೆಸಲು ಕರವೇ ಜಿಲ್ಲಾ ಪದಾ ಧಿಕಾರಿಗಳ ಸಭೆಯಲ್ಲಿ ನಿರ್ಧರಿಸಲಾಯಿತು.

Advertisement

ಅನಧಿಕೃತ ದಾಖಲೆಗಳ ಸೃಷ್ಟಿ, ತಿದ್ದುಪಡಿ, ಕಡತಗಳ ನಾಪತ್ತೆ, ಸರ್ವೇ ಇಲಾಖೆಗೆ ಸಂಬಂಧಿಸಿದಂತೆ ಟಿಪ್ಪಣಿ, ಆಕಾರ ಬಂದ್‌, ಅಟ್ಲಾಸ್‌ ಇದಕ್ಕೆ ಸಂಬಂಧಿಸಿದ ದಾಖಲೆಗಳನ್ನು ನಾಪತ್ತೆ ಮಾಡುವ ಜತೆಗೆ ಅಕ್ರಮ ಭೂ ಮಂಜೂರಾತಿ, ಅನಧೀಕೃತ ರೆವಿನ್ಯೂ ನಕ್ಷೆಗಳನ್ನು ಸರ್ವೇಯರ್‌ ಮೂಲಕ ಮಾಡಿಸಿ ಅದೇ ಸರ್ವೇಯರ್‌ಗಳನ್ನು ಬ್ಲಾಕ್‌ವೆುàಲ್‌ ಮಾಡಿಸಿರುವ ಭೂಮಾಪಕ ಸುರೇಶ್‌ಬಾಬು ಸರ್ಕಾರಿ ಜಮೀನು ಪರಬಾರೆ ಆಗಲು ಸಹಕರಿಸಿದ್ದಾರೆ ಎಂದು ದೂರಿದರು. 

ಇದಕ್ಕಾಗಿ ನಿವೃತ್ತ ತಹಶೀಲ್ದಾರ್‌, ಮೃತಪಟ್ಟಿರುವ, ವರ್ಗಾ ಆಗಿರುವ ಅ ಧಿಕಾರಿಗಳ ಮತ್ತು ಸರ್ವೇಯರ್‌ಗಳ ಸಹಿಯನ್ನು ಮಾಡಿಸಲಾಗಿದ್ದು, ಎಲ್ಲಿಯೂ ಬಾಬು ಸಹಿ ಇಲ್ಲದಿರುವುದು ವಂಚನೆಯ ಪ್ರಮುಖ ಅಂಶವಾಗಿದೆ ಎಂದು ಇಲ್ಲಿನ ಪತ್ರಕರ್ತರ ಭವನದಲ್ಲಿ ನಡೆದ ಸಭೆಯಲ್ಲಿ ಕರವೇ ಜಿಲ್ಲಾಧ್ಯಕ್ಷ ಮೇಡಿಹಾಳ ಎಂ.ಕೆ.ರಾಘವೇಂದ್ರ ಆರೋಪಿಸಿದರು.

ಜಿಲ್ಲಾ ಮಹಿಳಾ ಘಟಕದ ಅಧ್ಯಕ್ಷೆ ಲತಾಬಾಯಿ ಮಾಡಿಕ್‌, ಮುಖಂಡರಾದ ವಿ.ಮುನಿರಾಜು, ಶೇಖರ್‌, ಕೋದಂಡರಾಮಯ್ಯ, ಗಾಯತ್ರಿ ಪ್ರಕಾಶ್‌, ಪ್ರಭಾಕರ್‌, ಮುರಳಿ, ಲೋಕೇಶ್‌, ಮಂಜುನಾಥ್‌, ಮುಳಬಾಗಲು ನಾಗೇಶ್‌ಬಾಬು ಉಪಸ್ಥಿತರಿದ್ದರು.

Advertisement

Udayavani is now on Telegram. Click here to join our channel and stay updated with the latest news.

Next