Advertisement

ಅಗತ್ಯ ವಸ್ತುಗಳ ಮೇಲೆ ಜಿಎಸ್‌ಟಿ: ಪ್ರತಿಭಟನೆ

03:36 PM Jul 20, 2022 | Team Udayavani |

ಚಾಮರಾಜನಗರ: ಅಗತ್ಯ ವಸ್ತುಗಳ ಮೇಲೆ ಕೇಂದ್ರ ಸರ್ಕಾರ ವಿಧಿಸಿರುವ ಶೇ.5 ಜಿಎಸ್‌ಟಿ ಅನ್ನುಕೂಡಲೇ ರದ್ದು ಪಡಿಸಬೇಕೆಂದು ಒತ್ತಾಯಿಸಿಕರ್ನಾಟಕ ಸೇನಾ ಪಡೆ ನಗರದಲ್ಲಿ ಪ್ರತಿಭಟಿಸಿತು.ನಗರದ ಭುವನೇಶ್ವರಿ ವೃತ್ತದಲ್ಲಿ ಕೆಲಕಾಲ ರಸ್ತೆತಡೆನಡೆಸಿ ಪ್ರತಿಭಟನೆ ನಡೆಸಿ, ಜಿಎಸ್‌ಟಿ ಎಂದು ಬರೆದಿದ್ದ ಫ್ಲೆಕ್ಸ್‌ ಸುಟ್ಟು ಕೇಂದ್ರ ಸರ್ಕಾರದ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದರು.

Advertisement

ಈ ವೇಳೆ ಹೋರಾಟಗಾರ ಚಾ.ರಂ.ಶ್ರೀನಿವಾಸ ಗೌಡ ಮಾತನಾಡಿ, ಕೇಂದ್ರ ಸರ್ಕಾರವು ಜೂ.28,29ರಂದು ಜಿಎಸ್‌ಟಿ ಮಂಡಳಿ ಸಭೆ ನಡೆಸಿ, ಅಗತ್ಯ ವಸ್ತುಗಳ ಮೇಲೆ ಶೇ.5 ತೆರಿಗೆ ವಿಧಿಸಿದೆ. ದೇಶಾದ್ಯಂತಜು.1ರಂದು ಈ ತೆರಿಗೆ ಜಾರಿಗೆ ಬಂದಿರುವುದರಿಂದ ರೈತರು, ಸಾರ್ವಜನಿಕರಿಗೆ ತೊಂದರೆ ಆಗುತ್ತದೆ.ಆಹಾರ ಪದಾರ್ಥಗಳ ಮೇಲೆ ವಿಧಿಸಿರುವ ಶೇ.5 ತೆರಿಗೆ ಕೂಡಲೇ ರದ್ದು ಪಡಿಸಬೇಕು ಎಂದು ಆಗ್ರಹಿಸಿದರು.

ಅಕ್ಕಿ, ಜೋಳ, ರಾಗಿ ಇನ್ನಿತರ ಆಹಾರ ಧಾನ್ಯಗಳಮೇಲೆ ಶೇ.5 ತೆರಿಗೆಯನ್ನು ಕೇಂದ್ರ ಸರಕಾರವಿಧಿಸಿದೆ. ಜಿಎಸ್‌ಟಿ ಹೇರಿಕೆಯಿಂದ ರೈತರಿಗೆ,ಉದ್ದಿಮೆದಾರರಿಗೆ, ಕಾರ್ಮಿಕರು, ಬಡವರು,ಮಧ್ಯಮ ವರ್ಗದವರಿಗೆ ಜೀವನ ನಡೆಸುವುದಕಷ್ಟವಾಗುತ್ತದೆ. ಕೂಡಲೇ ಆಹಾರ ಪದಾರ್ಥಗಳಮೇಲೆ ವಿಧಿಸಿರುವ ತೆರಿಗೆ ರದ್ದು ಪಡಿಸಬೇಕೆಂದು ಒತ್ತಾಯಿಸಿದರು.

ಪ್ರತಿಭಟನೆಯಲ್ಲಿ ಕನ್ನಡ ಸಂಘಟನೆಗಳ ಮುಖಂಡರಾದ ಶಾ.ಮುರಳಿ, ಕಂಡಕ್ಟರ್‌‌ ಚಾ.ಸಿ.ಸೋಮನಾಯಕ, ಪಣ್ಯದಹುಂಡಿ ರಾಜು, ಗು.ಪುರುಷೋತ್ತಮ್, ಚಾ.ರಾ.ಕುಮಾರ್‌, ರವಿಚಂದ್ರ ಪ್ರಸಾದ್‌ ಕಹಳೆ, ವೀರಭದ್ರ, ತಾಂಡವಮೂರ್ತಿ, ಇತರರು ಭಾಗವಹಿಸಿದ್ದರು.

Advertisement

Udayavani is now on Telegram. Click here to join our channel and stay updated with the latest news.

Next