Advertisement
ಬಿಡದಿ ಪುರಸಭೆಯಲ್ಲಿ ಅನುದಾನ ತಾರತಮ್ಯ ಮಾಡಲಾಗಿದೆ ಎಂದು ಆರೋಪಿಸಿ ಅಧಿಕಾರಿಗಳು ಮತ್ತು ಶಾಸಕರ ವರ್ತನೆ ವಿರೋಧಿಸಿ ಕಾಂಗ್ರೆಸ್ ನಿಂದ ನಡೆದ ಪ್ರತಿಭಟನೆಯಲ್ಲಿ ಮಾತನಾಡಿ, ಯಾವುದೇ ಶಾಸಕ ಅಥವಾ ಪ್ರತಿನಿಧಿ ಅಭಿವೃದ್ಧಿ ಕಾರ್ಯಕ್ರಮ ಹಮ್ಮಿಕೊಂಡರೆ ಅದು ಅವರ ಸ್ವಂತದ್ದಲ್ಲ, ಸರ್ಕಾರದ ಹಣ. ಜನರು ಕಟ್ಟಿದ ತೆರಿಗೆಯಿಂದ ಬಂದ ಹಣವೇ ಆಗಿದೆ. ಆದರೂ, ಸರ್ಕಾರದಲ್ಲಿ ದುಡ್ಡಿಲ್ಲ, ಕೇವಲ ಬಾಯಿ ಮಾತಿಗೆ ಅಭಿವೃದ್ಧಿ ಮಂತ್ರ ಜಪಿಸುತ್ತಿದ್ದಾರೆ. ಹೊಸ ಯೋ ಜನೆಗಳೇನಾದರೂ ಇದ್ದರೆ ಹೇಳಲಿ, ಜೊತೆಗೆ 3 ಕೋಟಿ ಅನುದಾನ ಅವರೇನು ವಿಶೇಷವಾಗಿ ತಂದಿಲ್ಲ. ಎಲ್ಲಾ ಶಾಸಕರಿಗೆ ನೀಡಿದಂತೆ ಅವರಿಗೂ ನೀಡಿದ್ದಾರೆ. ಆದ್ದರಿಂದ ಎ. ಮಂಜುನಾಥ್ ಸುಳ್ಳು ಹೇಳುವುದನ್ನ ನಿಲ್ಲಿಸಬೇಕು ಎಂದರು.
Related Articles
Advertisement
ನಾವು ಎಲ್ಲದಕ್ಕೂ ಸಿದ್ಧ: ಮಾಜಿ ಶಾಸಕ ಎಚ್.ಸಿ. ಬಾಲಕೃಷ್ಣ ಮಾತನಾಡಿ, ಬಿಡದಿ ಪುರಸಭೆಗೆ ಬರುವ ಹಣ ಸರ್ಕಾರದ್ದು. ಶಾಸಕರ ಸ್ವಂತ ಹಣವಲ್ಲ. ಅವರು ಎಲ್ಲೋ ಕುಳಿತು ತೀರ್ಮಾನ ಮಾಡಲು ಬರಲ್ಲ. ಆದರೆ, ಅದನ್ನು ಮುಂದು ವರಿಸಿ, ಮತ್ತಷ್ಟು ಅವಾಂತರ ಸೃಷ್ಟಿಸಿದ್ದಾರೆ. ಶಾಸಕರೇ ನಾನು ನಿಮಗಿಂತ ಮೊದಲೇ ಎರಡು ಭಾರಿ ಜೆಡಿಎಸ್‌ನಲ್ಲೇ ಶಾಸಕನಾಗಿದ್ದೇನೆ. ನೀವು ಕ್ಷೇತ್ರದ ಪ್ರತಿಯೊಬ್ಬರಿಗೂ ಶಾಸಕರಾಗಿರಬೇಕು. ಕಾಂಗ್ರೆಸ್ ಪುರಸಭಾ ಸದಸ್ಯರು ಇರುವ ವಾರ್ಡ್ ನ ನ ಜನರು ನಿಮಗೆ ಮತ ನೀಡಿಲ್ಲವೆ?. ಶಾಸಕ ಮಂಜುನಾಥ್ ಉತ್ತರ ಕುಮಾರ ಇದ್ದಹಾಗೆ. ತಾಕತ್ತಿನ ಬಗ್ಗೆ ಮಾತನಾಡಿದ್ದಾರೆ. ಅವರು ಅಭಿವೃದ್ಧಿ ವಿಚಾರಗಳ ಚರ್ಚೆಗೆ ಬರಲ್ಲ. ಅವರದ್ದು ಪಲಾಯನವಾದ. ಅಂತಹ ತಾಕತ್ತನ್ನು ನಾವು ಕಂಡಿದ್ದೇವೆ. ವೇದಿಕೆಗೆ ಬನ್ನಿ ನಾವು ಎಲ್ಲದಕ್ಕೂ ಸಿದ್ಧರಿದ್ದೇವೆ ಎಂದು ಹೇಳಿದರು.
ಕ್ರಮ ಕೈಗೊಳ್ಳುವ ಭರವಸೆ: ಬಿಡದಿ ಪುರಸಭೆ ಬಳಿ ಜಮಾಯಿಸಿದ್ದ ಕಾಂಗ್ರೆಸ್ ಕಾರ್ಯಕರ್ತರ ಒತ್ತಾಯಕ್ಕೆ ಉತ್ತರಿಸುವಲ್ಲಿ ಚೀಫ್ ಆಫೀಸರ್ ಗೊಂದಲದ ಹೇಳಿಕೆ ನೀಡಿದ್ದರಿಂದ ಅವರ ವಿರುದ್ಧ ಉಪವಿಭಾಗಾಧಿಕಾರಿಗಳ ಸಮ್ಮುಖದಲ್ಲೇ ಘೋಷಣೆ ಕೂಗಿ ಆಕ್ರೋಶ ವ್ಯಕ್ತಪಡಿಸಿದರು. ನಂತರ ಉಪವಿಭಾಗಾಧಿಕಾರಿ ಮಂಜುನಾಥ್ ಮಾತನಾಡಿ, ಜಿಲ್ಲಾಧಿಕಾರಿಗಳ ಜೊತೆಗೆ ಚರ್ಚಿಸಿ, ಆದಷ್ಟು ಬೇಗ ಸೂಕ್ತ ಕ್ರಮ ಕೈಗೊಂಡು ತಾರತಮ್ಯ ಸರಿಪಡಿಸುವ ನಿಟ್ಟಿನಲ್ಲಿ ಕ್ರಮ ಕೈಗೊಳ್ಳುವುದಾಗಿ ತಿಳಿಸಿದರು. ತಾಪಂ ಮಾಜಿ ಅಧ್ಯಕ್ಷ ಗಾಣಕಲ್ ನಟರಾಜ್, ಮುಖಂಡ ಚಂದ್ರಶೇಖರ್.ಎಲ್ ಸೇರಿದಂತೆ ಬಿಡದಿ ಪುರಸಭೆ ಸದಸ್ಯರು, ಕಾರ್ಯಕರ್ತರು ಹಾಜರಿದ್ದರು.
ಎಲ್ಲರೂ ತೆರಿಗೆ ಕಟ್ಟುತ್ತಾರೆ. ಬಿಡದಿ ಪುರಸಭೆ ವಾರ್ಡ್‌ಗಳಿಗೆ ಸಮಾನ ಹಂಚಿಕೆಯಾಗಬೇಕಿದ್ದ ಹಣ, ಕೇವಲ ಜೆಡಿಎಸ್ ಸದಸ್ಯರು ಪ್ರತಿನಿಧಿಸಿ ಜಯ ಗಳಿಸಿರುವ ವಾರ್ಡ್‌ಗಳಿಗೆ ಮಾತ್ರ ನೀಡಿದ್ದು, ಅಕ್ಷಮ್ಯವಾಗಿದೆ. ಕೂಡಲೇ ಸರಿಪಡಿಸಬೇಕು. ಇಲ್ಲವಾದರೆ ಕೈ ಕಾರ್ಯಕರ್ತರು ಯಾವುದೇ ಕಾರಣಕ್ಕೂ ಕಾಮಗಾರಿ ನಡೆಯಲು ಬಿಡಲ್ಲ. – ಸಿ.ಎಂ.ಲಿಂಗಪ್ಪ, ವಿಧಾನ ಪರಿಷತ್ ಸದಸ್ಯ
ಸರ್ಕಾರದ ಅನುದಾನ ಹಂಚಿಕೆ ಯಲ್ಲಿ ಶಾಸಕರ ಒತ್ತಡಕ್ಕೆ ಅಧಿಕಾರಿ ಗಳು ಮಣಿದಿದ್ದಾರೆ. ಕೂಡಲೇ ವ್ಯತ್ಯಾಸ ಸರಿಪಡಿಸಬೇಕು. ಇಲ್ಲವಾದರೆ ಪ್ರತಿಭ ಟನೆ ತೀವ್ರಸ್ವರೂಪ ಪಡೆಯುತ್ತದೆ. ಅಲ್ಲದೆ, ಯಾವ ವಾರ್ಡ್‌ಗೆ ಅನುದಾನ ನೀಡಿಲ್ಲ, ಅಂತಹ ವಾರ್ಡ್‌ಗಳ ಜನ ತೆರೆಗೆ ಕಟ್ಟದಂತೆ ಮಾಡಿ ಹೋರಾಟ ಮಾಡುತ್ತೇವೆ. – ಎಚ್.ಸಿ.ಬಾಲಕೃಷ್ಣ, ಮಾಜಿ ಶಾಸಕ