ಘಟಪ್ರಭಾ : ಸರ್ಕಾರದ ರೈತ ವಿರೋಧಿ ನೀತಿಯನ್ನು ಖಂಡಿಸಿ ಪಟ್ಟಣದ ಮೃತ್ಯುಂಜಯ ವೃತ್ತದಲ್ಲಿ ಇಂದು (ಮಂಗಳವಾರ, ಆಗಸ್ಟ್ 10) ಕರ್ನಾಟಕ ರಾಜ್ಯ ರೈತ ಸಂಘ ಮತ್ತು ಹಸಿರು ಸೇನೆ ಕಾರ್ಯಕರ್ತರು ರಸ್ತೆತಡೆ ನಡೆಸಿ ಸರ್ಕಾರದ ನೀತಿಯನ್ನು ಖಂಡಿಸಿ ಮಾತನಾಡಿದರಲ್ಲಿದೆ, ಕೂಡಲೇ ಈ ನೀತಿಯನ್ನು ಕೈಬಿಡಬೇಕೆಂದು ಪ.ಪಂ. ಮುಖ್ಯಾಧಿಕಾರಿಗಳ ಮೂಲಕ ಮುಖ್ಯಮಂತ್ರಿಗಳಿಗೆ ಮನವಿ ಸಲ್ಲಿಸಿದರು.
ಈ ಸಂದರ್ಭದಲ್ಲಿ ಕರ್ನಾಟಕ ರಾಜ್ಯ ರೈತ ಸಂಘದ ರಾಜ್ಯಾಧ್ಯಕ್ಷರಾದ ಚೂನಪ್ಪ ಪೂಜೇರಿ ಮಾತನಾಡುತ್ತ, ಹಿಂದಿನ ಸರ್ಕಾರಗಳು ರೈತರ ಬೆನ್ನು ಮೇಲೆ ಹೊಡೆಯುತ್ತಿದ್ದವು, ಆದರೆ ಈಗಿನ ಸರ್ಕಾರ ರೈತರ ಹೊಟ್ಟೆ ಮೇಲೆ ಹೊಡೆಯುತ್ತಿದೆ ಎಂದು ಹೇಳಿದರು.
ಇದನ್ನೂ ಓದಿ : ಮೇಕೆದಾಟುಗೆ ಒತ್ತಾಯಿಸಿ ಆಗಸ್ಟ್ 18ಕ್ಕೆ ರೈತ ಸಂಘ, ಕನ್ನಡಪರ ಸಂಘಟನೆಗಳಿಂದ ಬೈಕ್ ರ‍್ಯಾಲಿ
ಮುಂದುವರೆದು, ವಿದ್ಯುತ್ ಮಸೂದೆ ತಿದ್ದುಪಡೆ, ಭೂಸುಧಾರಣಾ ಕಾಯ್ದೆ, ಎಪಿಎಮ್‌ಸಿ ಕಾಯ್ದೆ, ಜಾನವಾರು ಹತ್ಯೆ ಕಾಯ್ದೆಗಳಂತಹ ಜನ ವಿರೋಧಿ ತಿದ್ದುಪಡೆಗಳನ್ನು ಸರ್ಕಾರ ಹಿಂಪಡೆಯಬೇಕೆAದು ಸರ್ಕಾರವನ್ನು ಅವರು ಆಗ್ರಹಿಸಿದರು.
ಸುಮಾರು ಅರ್ಧ ಗಂಟೆಯವಗೆರೆ ನಡೆದ ರಸ್ತೆತಡೆಯಿಂದ ವಾಹನ ಸಂಚಾರ ಅಸ್ಥವ್ಯಸ್ಥವಾಗಿತ್ತು, ಯಾವುದೇ ಅಹಿತಕರ ಘಟನೆ ನಡೆಯದಂತೆ ಸೂಕ್ತ ಪೊಲೀಸ್ ಬಂದೋಬಸ್ತ ಏರ್ಪಡಿಸಲಾಗಿತ್ತು.
ಈ ಸಂದರ್ಭದಲ್ಲಿ ಜಿಲ್ಲಾ ಉಪಾಧ್ಯಕ್ಷ ಗೋಪಾಲ ಕೂಕನೂರ, ತಾಲೂಕಾಧ್ಯಕ್ಷ ಮಂಜುನಾಥ ಪೂಜೇರಿ, ಯಲ್ಲಪ್ಪ ತಿಗಡಿ, ಪ್ರಕಾಶ ಭೋವಿ, ಮಾರುತಿ ನಾಯ್ಕ, ಭರಮು ಖೇಮಲಾಪುರೆ ಸೇರಿದಂತೆ ಇನ್ನು ಅನೇಕ ರೈತ ಸಂಘದ ಸದಸ್ಯರು ಹಾಜರಿದ್ದರು.
ಇದನ್ನೂ ಓದಿ : |UDAYAVANI NEWS BULLETIN|10-08-2021