Advertisement

ಡಬ್ಟಾ ಅಂಗಡಿ ತೆರವು ವಿರೋಧಿಸಿ ಪ್ರತಿಭಟನೆ

01:18 PM Apr 25, 2017 | |

ಧಾರವಾಡ: ಮಹಾನಗರ ಪಾಲಿಕೆ ಆಯುಕ್ತರು ದಬ್ಟಾಳಿಕೆ ನಡೆಸಿ ತೆರವು ಕಾರ್ಯಾಚರಣೆ ಮಾಡಿರುವುದನ್ನು ಖಂಡಿಸಿ ಸಮಗಾರ ಹರಳಯ್ಯ ಕ್ಷೇಮಾಭಿವೃದ್ಧಿ ಕಮಿಟಿ ವತಿಯಿಂದ ನಗರದ ಜಿಲ್ಲಾಧಿಧಿಕಾರಿ ಕಚೇರಿ ಎದುರು ಸೋಮವಾರ ಪ್ರತಿಭಟನೆ ನಡೆಸಲಾಯಿತು. 

Advertisement

ಪುಟ್‌ಪಾತ್‌ ಕಾರ್ಯಾಚರಣೆಯಲ್ಲಿ ಆಯುಕ್ತರು ಡಬ್ಟಾ ಅಂಗಡಿಕಾರರ ಅಂಗಡಿಗಳನ್ನು ತೆರವು ಮಾಡುವ ಮೂಲಕ ತಮ್ಮ ಹೊಟ್ಟೆ ಮೇಲೆ ಹೊಡೆದಿದ್ದಾರೆ. ಈ ಮೂಲಕ ದಲಿತ ಕುಟುಂಬಗಳು ಬೀದಿಗೆ ಬಂದಿದ್ದಾರೆ. ಇದನ್ನು ಪ್ರಶ್ನಿಸಿ  ಅವರ ಬಳಿ ಹೋದಾಗ ತಮ್ಮನ್ನು ಅವಮಾನ ಮಾಡುವ ಮೂಲಕ ಸಮಸ್ಯೆಗೆ ಸ್ಪಂದಿಸದಿರುವುದು ವಿಷಾದದ ಸಂಗತಿಯಾಗಿದೆ ಎಂದು ಅಳಲು ತೋಡಿಕೊಂಡಿದ್ದಾರೆ. 

ನಗರದ ನೆಹರು ಮಾರುಕಟ್ಟೆಯಲ್ಲಿರುವ ರೇಗೆ ಗ್ಯಾರೇಜ್‌ ಪಕ್ಕದ ಸಂದಿ ಖುಲ್ಲಾ ಜಾಗೆಯಲ್ಲಿ ಈ ಹಿಂದೆ ನಡೆದ ಪುಟ್‌ಪಾತ್‌ ತೆರವು ವೇಳೆ 6×4 ಅಳತೆಯ ಡಬ್ಟಾ ಅಂಗಡಿಗಳನ್ನು ಇಡಲು 2006ರ ಮೇ 18ರಂದು  ಪಾಲಿಕೆ ಠರಾವು ಮಂಡಿಸಿದ್ದು, ಇದನ್ನು ಆಯುಕ್ತರಿಗೆ ಹೇಳಲು ಹೋದಾಗ ಅಹವಾಲು ಸ್ವೀಕರಿಸದೇ ಅವಮಾನ ಮಾಡಿದ್ದಾರೆ ಎಂದು ದೂರಿದರು. ಪಾಲಿಕೆಯೇ ಸ್ವತಃ ಠರಾವು ಮಂಡಿಸಿದ್ದು,

ಒಂದು ವೇಳೆ ಈ ಹೋರಾಟಕ್ಕೆ ಮಣಿಯದಿದ್ದರೆ ಮುಂದಿನ ದಿನಗಳಲ್ಲಿ ನ್ಯಾಯಕ್ಕಾಗಿ ಪಾಲಿಕೆ ಮುಂದೆ  ಅಹೋರಾತ್ರಿ ಧರಣಿ ಹೋರಾಟ ಹಮ್ಮಿಕೊಳ್ಳಲಾಗುವುದು ಎಂದು ಪ್ರತಿಭಟನಾಕಾರರು ಎಚ್ಚರಿಸಿದರು. ರಮೇಶ ದೊಡವಾಡ, ರಾಜೇಂದ್ರ ಗಾಮನಗಟ್ಟಿ, ಕುಮಾರ ವಕ್ಕುಂದ, ಸಂತೋಷ ದೊಡವಾಡ, ವಿಜಯ ಗಡೇದವರ, ಮೈಲಾರಿ ಚಂದಾವರಿ, ಗಣೇಶ ಹೆಬ್ಬಳ್ಳಿ ಪ್ರತಿಭಟನೆಯಲ್ಲಿ ಪಾಲ್ಗೊಂಡಿದ್ದರು. 

Advertisement

Udayavani is now on Telegram. Click here to join our channel and stay updated with the latest news.

Next